Japan ದ್ವೀಪದಲ್ಲಿ ಮುಳುಗಿದ ದ.ಕೊರಿಯಾದ ರಾಸಾಯನಿಕ ಟ್ಯಾಂಕರ್: 8 ಮೃತ್ಯು
Team Udayavani, Mar 20, 2024, 6:34 PM IST
ಟೋಕಿಯೊ: ದಕ್ಷಿಣ ಕೊರಿಯಾದ ರಾಸಾಯನಿಕ ಟ್ಯಾಂಕರ್ ಹಡಗು ಬುಧವಾರ ನೈಋತ್ಯ ಜಪಾನ್‌ನ ದ್ವೀಪದಲ್ಲಿ ಮುಳುಗಿದ್ದು, ಅದರಲ್ಲಿದ್ದ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ಸಿಬಂದಿ ಪಾರಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ಟ್ಯಾಂಕರ್ 980 ಟನ್ ಅಕ್ರಿಲಿಕ್ ಆಮ್ಲವನ್ನು ಸಾಗಿಸುತ್ತಿತ್ತು, ಇದು ಅಂಟುಗಳು, ಬಣ್ಣಗಳು ಮತ್ತು ಪಾಲಿಶ್‌ಗಳಲ್ಲಿ ಬಳಸಲಾಗುವ ನಾಶಕಾರಿ ಸಾವಯವ ಮಿಶ್ರಣವಾಗಿದೆ.
ಯಾವುದೇ ಸೋರಿಕೆ ಪತ್ತೆಯಾಗಿಲ್ಲ, ಸೋರಿಕೆಯಾದಲ್ಲಿ ಯಾವ ಪರಿಸರ ಸಂರಕ್ಷಣ ಕ್ರಮಗಳ ಅಗತ್ಯವಿದೆ ಎಂದು ಅಧ್ಯಯನ ಮಾಡುತ್ತಿದ್ದಾರೆ. ನೈಋತ್ಯ ಜಪಾನ್‌ನ ಟೋಕಿಯೊದಿಂದ ಸುಮಾರು 1,000 ಕಿಮೀ (620 ಮೈಲುಗಳು) ದೂರದಲ್ಲಿರುವ ಜಪಾನ್‌ನ ಮುಟ್ಸೂರ್ ದ್ವೀಪದ ಬಳಿ ಟ್ಯಾಂಕರ್ ವಾಲುತ್ತಿದೆ ಎಂದು ಜಪಾನ್ ಕೋಸ್ಟ್ ಗಾರ್ಡ್ ರಾಸಾಯನಿಕ ಟ್ಯಾಂಕರ್ ಕಿಯೋಯಂಗ್ ಸನ್‌ನಿಂದ ತುರ್ತು ಕರೆ ಸ್ವೀಕರಿಸಿತ್ತು. ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಹಡಗು ಸಂಪೂರ್ಣ ಮುಳುಗಿತ್ತು.
ಹಡಗಿನಲ್ಲಿದ್ದ 11 ಸಿಬಂದಿಯಲ್ಲಿ ಒಂಬತ್ತು ಮಂದಿ ಶವಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಒಬ್ಬ ಸಿಬಂದಿ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದ್ದು, ಕೋಸ್ಟ್ ಗಾರ್ಡ್ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.