ಮೂರನೇ ಅವಧಿಗೆ ಜಿನ್‌ಪಿಂಗ್‌ಗೆ ಅಧ್ಯಕ್ಷಗಿರಿ? ಅಧ್ಯಕ್ಷ ಆಯ್ಕೆ ಕುರಿತು ಇಂದಿನಿಂದ ಸಭೆ
Team Udayavani, Oct 16, 2022, 7:30 AM IST
ಬೀಜಿಂಗ್: ಮುಂದಿನ ಚೀನ ಅಧ್ಯಕ್ಷರ ಆಯ್ಕೆಗಾಗಿ ಚೀನ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ವು ಭಾನುವಾರ ತನ್ನ 20ನೇ ರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ.
ಶೂನ್ಯ ಕೋವಿಡ್ ನೀತಿ ಮತ್ತು ಕುಸಿಯುತ್ತಿರುವ ದೇಶದ ಆರ್ಥಿಕತೆಯ ಹೊರತಾಗಿಯೂ ಮೂರನೇ ಅವಧಿಗೂ ಚೀನ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಆದರೆ ವಿದೇಶಾಂಗ ಖಾತೆ ಸೇರಿದಂತೆ ಸಂಪುಟದ ಪ್ರಮುಖ ಸಚಿವ ಸ್ಥಾನಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಅ.16ರಿಂದ 22ರವರೆಗೆ ನಡೆಯಲಿರುವ ಸಿಪಿಸಿಯ 20ನೇ ರಾಷ್ಟ್ರೀಯ ಸಭೆಯಲ್ಲಿ 2,296 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಭೆಗೆ ಪ್ರತಿನಿಧಿಗಳನ್ನು ಹೊರತುಪಡಿಸಿ ಸುದ್ದಿಗಾರರು ಸೇರಿದಂತೆ ಯಾರಿಗೂ ಪ್ರವೇಶವಿಲ್ಲ.
ಕ್ಸಿ ವಿರುದ್ಧ ಪ್ರತಿಭಟನೆ:
ಇನ್ನೊಂದೆಡೆ ಶನಿವಾರವೂ ಚೀನ ಸರ್ಕಾರದ ಶೂನ್ಯ ಕೊರೊನಾ ನೀತಿ ವಿರುದ್ಧ ಹಾಗೂ ಜಿನ್‌ಪಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ಬೀಜಿಂಗ್‌ನಲ್ಲಿ ಪ್ರತಿಭಟನೆ ನಡೆದಿದೆ.
ಈ ವೇಳೆ ಪ್ರದರ್ಶಿಸಲಾದ ಬ್ಯಾನರ್‌ನಲ್ಲಿ “ಕೋವಿಡ್ ಪರೀಕ್ಷೆಗೆ ಇಲ್ಲ ಎಂದು ಹೇಳಿ, ಆಹಾರಕ್ಕೆ ಹೌದು ಎಂದು ಹೇಳಿ. ಲಾಕ್‌ಡೌನ್ ಇಲ್ಲ, ಸ್ವಾತಂತ್ರ್ಯಕ್ಕೆ ಹೌದು. ಸುಳ್ಳಿಗೆ ಇಲ್ಲ, ಘನತೆಗೆ ಹೌದು. ಸಾಂಸ್ಕೃತಿಕ ಕ್ರಾಂತಿ ಬೇಡ, ಸುಧಾರಣೆಗೆ ಹೌದು. ಮಹಾನ್ ನಾಯಕನಿಗೆ ಇಲ್ಲ ಎಂದು ಹೇಳಿ, ಮತ ಚಲಾಯಿಸಲು ಹೌದು ಎಂದು ಹೇಳಿ. ಗುಲಾಮರಾಗಬೇಡಿ, ನಾಗರಿಕರಾಗಿರಿ’ ಎಂದು ಬರೆಯಲಾಗಿತ್ತು.
ಅಧ್ಯಕ್ಷರ ಆಯ್ಕೆ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ಬೀಜಿಂಗ್ ಸೇರಿದಂತೆ ದೇಶಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಇನ್ನೊಂದೆಡೆ ಚೀನದಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿಯಂತ್ರಣ ಹೇರಲಾಗಿದೆ. ಇಂಟರ್ನೆಟ್‌ನಲ್ಲಿ ಬೀಜಿಂಗ್, ಹೈದನ್, ಬ್ರಿಡ್ಜ್, ಬ್ರೇವ್ ಮ್ಯಾನ್, ವಾರಿಯರ್ ಮತ್ತು ಕರೇಜ್ ಪದಗಳ ಸರ್ಚ್ ಟೈಮ್ ಮೇಲೆ ಸೆನ್ಸಾರ್ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.