ಠುಸ್ಸಾಯಿತು ಉತ್ತರ ಕೊರಿಯಾ ಕ್ಷಿಪಣಿ!
Team Udayavani, Apr 17, 2017, 9:51 AM IST
ವಾಷಿಂಗ್ಟನ್: ಅಮೆರಿಕ ತನ್ನ ಮೇಲೆ ದಾಳಿ ನಡೆಸಿದರೆ ಪ್ರಬಲ ಪ್ರತ್ಯುತ್ತರ ನೀಡುವುದಾಗಿ ಶನಿವಾರ ಉತ್ತರ ಕೊರಿಯಾ ಅಬ್ಬರಿಸಿತ್ತು. ಅದಕ್ಕೆ ಪೂರಕವಾಗಿ ಹೊಸ ಮಾದರಿಯ ಕ್ಷಿಪಣಿ ಪ್ರಯೋಗಕ್ಕೆ ಮುಂದಾಗಿ ವಿಫಲ ಗೊಂಡಿದೆ. ಈ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಖಚಿತಪಡಿಸಿದೆ. ಉ. ಕೊರಿಯಾ ರಾಜಧಾನಿ ಪಾಂಗ್‌ಯಾಂಗ್‌ನಲ್ಲಿ ಅದ್ದೂರಿ ಪರೇಡ್‌ನಲ್ಲಿ ಹೊಸ ಮಾದರಿ ಕ್ಷಿಪಣಿಗಳನ್ನು ತೋರಿಸಲಾಗಿತ್ತು.
“ಪರೀಕ್ಷಾರ್ಥವಾಗಿ ಉಡಾಯಿಸ ಬೇಕಾಗಿದ್ದ ಕ್ಷಿಪಣಿಗಳು ಆರಂಭದಲ್ಲೇ ವಿಫಲ ಹೊಂದಿವೆ’ ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಂಡಾಂ ತರ ಕ್ಷಿಪಣಿಯ ಉದ್ದೇಶಿತ ಪರೀಕ್ಷಾರ್ಥ ಉಡಾವಣೆ ಉತ್ತರ ಕೊರಿಯಾದ ಸಿನ್ಫೋ ಸಮೀಪ ನಡೆಯಬೇಕಾಗಿತ್ತು. ಈ ನಗರ ಜಪಾನ್ ಸಮುದ್ರ ವ್ಯಾಪ್ತಿ ಯಲ್ಲಿ ಬರುವ ಬಂದರು ನಗರ. ಇದೇ ಸ್ಥಳದಿಂದ ಉತ್ತರ ಕೊರಿಯಾ ಹಲವು ಬಾರಿ ಅತ್ಯಾಧುನಿಕ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು.
ಈ ನಡುವೆ ಪರಮಾಣು ಶಸ್ತ್ರಾಸ್ತ್ರ ಹೊಂದಿರುವೆ ಎಂದು ಹೇಳಿಕೊಳ್ಳುವ ಉತ್ತರ ಕೊರಿಯಾ ಮೇಲೆ ದಿಗ್ಬಂಧನ ಹೇರಲು ಅಮೆರಿಕ ಸರಕಾರ ಚೀನ ಮೂಲಕ ಯತ್ನಿಸುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಇದೇ ವೇಳೆ ಉತ್ತರ ಕೊರಿಯಾದ ಇತ್ತೀಚಿನ ಕ್ರಮ ಆತಂಕ ಕಾರಿ ಎಂದು ಅಮೆರಿಕ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.