ಉಗ್ರರಿಗೆ ಹಣ ನೀಡುತ್ತಿದ್ದ ಆರೋಪ: ಕತಾರ್‌ಗೆ ಕತ್ತರಿ ಏಟು
Team Udayavani, Jun 6, 2017, 3:45 AM IST
ರಿಯಾದ್/ಹೊಸದಿಲ್ಲಿ: ಆಗಿನದ್ದು ಅರಬ್ ಕ್ರಾಂತಿ, ಈಗಿನದ್ದು ಅರಬ್ ಬಿರುಕು! ಅರಬ್ ದೇಶಗಳ ನಡುವೆ ಈಗ ಅಕ್ಷರಶಃ
ಭಾರೀ ಬಿರುಕು ಕಾಣಿಸಿಕೊಂಡಿದೆ. 2011ರ ಅರಬ್ ಕ್ರಾಂತಿಗೆ ಕತಾರ್ ದೇಶವೇ ಪ್ರಮುಖ ಕಾರಣ ಎಂಬ ನೆಪವೊಡ್ಡಿ ಸೌದಿ ಅರೇಬಿಯಾ, ಬಹ್ರೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಯೆಮೆನ್ ಮತ್ತು ಲಿಬಿಯಾ ಆ ದೇಶದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿವೆ. ಇದರ ಜತೆಗೆ ಮತ್ತೂಂದು ಮುಸ್ಲಿಂ ರಾಷ್ಟ್ರ ಮಾಲ್ದೀವ್ಸ್ ಕೂಡ ಸೇರ್ಪಡೆಯಾಗಿದೆ.
ಒಪೆಕ್ ದೇಶಗಳ ನಡುವಿನ ಈ ಬಿಕ್ಕಟ್ಟು, ಭಾರತದ ಮೇಲೆ ಅಂಥ ಪರಿಣಾಮವೇನೂ ಬೀರುವುದಿಲ್ಲ. ಆದರೆ, ಕತಾರ್ ಮತ್ತು ಅರಬ್ ದೇಶಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರ ಸುರಕ್ಷತೆಗೆ ಅಪಾಯ ಸಂಭವಿಸಬಹುದು ಎಂಬ ಆತಂಕ ಎದುರಾಗಿದೆ.
ಕತಾರ್‌ಗೆ ಇದು ಮೊದಲನೇ ಹೊಡೆತವೇನಲ್ಲ. 2014ರಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿದ್ದ ರಾಯಭಾರಿ ಕಚೇರಿಗಳನ್ನು ಸೌದಿ, ಯುಎಇ ಮತ್ತು ಈಜಿಪ್ಟ್ ದೇಶಗಳು ಮುಚ್ಚಿದ್ದವು. 8 ತಿಂಗಳ ಅನಂತರ ಮತ್ತೆ ಈ ಕಚೇರಿಗಳ ಬಾಗಿಲು ತೆರೆದಿತ್ತು.
ಟ್ರಂಪ್ ಕಾಲಿಟ್ಟ ಬಳಿಕ “ಬಿರುಕು’
ಎಲ್ಲವೂ ಸರಿಯಾಗಿಯೇ ಇತ್ತು. 10 ದಿನಗಳ ಹಿಂದಷ್ಟೇ ಮಧ್ಯಪ್ರಾಚ್ಯ ದೇಶಗಳ ಭೇಟಿಗಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್, ಭಯೋತ್ಪಾದನೆ ವಿರುದ್ಧ ಎಲ್ಲ ದೇಶಗಳು ಒಟ್ಟಾಗಿ ಹೋರಾಡುವ ಅಗತ್ಯತೆ ಇದೆ ಎಂದಿದ್ದರು. ಅಲ್ಲದೆ ಇದಕ್ಕೆ ಸಹಾಯ ಮಾಡುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
ಈಗ ಏಕೆ ಈ ಕ್ರಮ?
ಜಗತ್ತಿನಲ್ಲಿ ಮುಸ್ಲಿಂ ಭಯೋತ್ಪಾದಕರ ಅಟ್ಟಹಾಸ ಹೆಚ್ಚುತ್ತಿರುವಂತೆ, ಇದನ್ನು ಮಟ್ಟ ಹಾಕುವ ಬಗ್ಗೆ ಅರಬ್ ದೇಶಗಳಲ್ಲೇ ಚರ್ಚೆ ನಡೆದಿದೆ. ಈಗಲೂ ಕತಾರ್ ಮತ್ತು ಇರಾನ್ ಭಯೋತ್ಪಾದನಾ ಸಂಘಟನೆಗಳಾದ ಮುಸ್ಲಿಂ ಬ್ರದರ್‌ಹುಡ್, ಐಸಿಸ್, ಅಲ್ ಕಾಯಿದಾಗೆ ಆಶ್ರಯ ನೀಡಿದೆ ಎಂಬ ಆರೋಪವಿದೆ. ಇದು ಅರಬ್ ದೇಶಗಳ ನಡುವೆ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸೌದಿ ಅರೇಬಿಯಾ ಹೇಳಿದೆ.
ಮುಂದೇನು?
ಈ 6 ದೇಶಗಳಲ್ಲಿರುವ ಕತಾರ್ ನಾಗರಿಕರು ಇನ್ನು 14 ದಿನಗಳಲ್ಲಿ ಸ್ವದೇಶಕ್ಕೆ ವಾಪಸ್ ತೆರಳಲೇಬೇಕು. ಅಲ್ಲದೆ ಕತಾರ್‌ಗೆ ಹೊಂದಿಕೊಂಡಿರುವ ಗಡಿಯನ್ನು ಸೌದಿ ಅರೇಬಿಯಾ ಸಂಪೂರ್ಣವಾಗಿ ಮುಚ್ಚಿದೆ. ಅಲ್ಲಿಗೆ ಹೋಗುತ್ತಿದ್ದ ಆಹಾರ ಮತ್ತು ಇತರೆ ವಸ್ತುಗಳ ರಫ¤ನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಕತಾರ್‌ನಲ್ಲಿ ಆಹಾರ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದ್ದು, ಜನ ಆಹಾರ ಕೊಂಡು ಸಂಗ್ರಹಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳು ವರದಿ ಮಾಡಿವೆ.
ಆರ್ಥಿಕವಾಗಿಯೂ ನಷ್ಟ
ಅರಬ್ ಸಮುದಾಯದ ಆರು ದೇಶಗಳು ಮತ್ತು ಕತಾರ್‌ಗೆ ಈ ನಿಷೇಧ ನಿರ್ಧಾರದಿಂದ ಆರ್ಥಿಕವಾಗಿ ಭಾರೀ ನಷ್ಟವೇ ಉಂಟಾಗಲಿದೆ. ಈಗಾಗಲೇ ಎಲ್ಲ ದೇಶಗಳು ಕತಾರ್‌ಗೆ ತೆರಳಬೇಕಿದ್ದ ವಿಮಾನಯಾನವನ್ನು ಸ್ಥಗಿತ ಗೊಳಿಸಿವೆ. ಈ ಎಲ್ಲ ವಿಮಾನಯಾನ ಸಂಸ್ಥೆಗಳು ಪ್ರಮುಖವಾಗಿ ಕತಾರ್‌ನಂಥ ದೇಶಗಳನ್ನೇ ಅವಲಂಬಿಸಿವೆ.
2022ಕ್ಕೆ ಫುಟ್ಬಾಲ್ ವಿಶ್ವಕಪ್
ಅರಬ್ ದೇಶಗಳು ಹೇರಿರುವ ನಿಷೇಧ, ಕತಾರ್‌ನ ಸ್ವಾಭಿಮಾನಕ್ಕೇ ಪೆಟ್ಟು ಬಿದ್ದಂತಾಗಿದೆ. ಮೊದಲೇ ಶ್ರೀಮಂತ ದೇಶವಾಗಿರುವ ಕತಾರ್, ಈ ನಿಷೇಧ ನಿರ್ಧಾರದ ಬಗ್ಗೆ ಕಿಡಿಕಾರಿದೆ. ಅಲ್ಲದೆ 2022ಕ್ಕೆ ಕತಾರ್‌ನಲ್ಲಿಯೇ ವಿಶ್ವಕಪ್ ಫುಟ್ಬಾಲ್ ನಡೆಯಲಿದ್ದು, ಇದರ ಸಿದ್ಧತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಸದ್ಯಕ್ಕೆ ಭಾರತೀಯರ ಮೇಲೆ ಏನೂ ಪರಿಣಾಮವಿಲ್ಲ. ಆದರೆ, ಇಲ್ಲಿಂದ ಸೌದಿ, ಈಜಿಪ್ಟ್, ಕತಾರ್ ಸಹಿತ ಅರಬ್
ದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚು. ಈ ದೇಶಗಳ ನಡುವೆ ಪರಸ್ಪರ ಓಡಾಡಲು ಭಾರತೀಯರಿಗೆ ತೊಂದರೆ ಆಗಬಹುದು. ಅಲ್ಲದೆ ಮುಂದೊಂದು ದಿನ ಹಿಂಸಾಚಾರವಾದರೆ ಅವರ ಸುರಕ್ಷತೆ ಆತಂಕಕ್ಕೆ ಕಾರಣವಾಗಬಹುದು.
ರಕ್ಷಣೆ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ-ಕತಾರ್ ನಡುವೆ ಸಂಬಂಧ ಚೆನ್ನಾಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಅನಂತರ ಹೆಚ್ಚಾಗಿ ಈ ಉತ್ಪನ್ನಗಳನ್ನು ಭಾರತ ರಫ್ತು ಮಾಡುವುದು ಕತಾರ್‌ಗೆà.
ಆಮದು ವಿಚಾರದಲ್ಲೂ ಕತಾರ್ ಪ್ರಮುಖ ಸ್ಥಾನ ಪಡೆದಿದೆ.
ಇದರ ಜತೆಗೆ ಅನಿಲ ಆಮದಿನಲ್ಲೂ ಭಾರತ ಕತಾರ್ ಜತೆ ಉತ್ತಮ ಸಂಬಂಧ ಹೊಂದಿದೆ. ವಿದೇಶದಿಂದ ಆಮದಾಗುವ ಶೇ.65ರಷ್ಟು ಅನಿಲದಲ್ಲಿ ಕತಾರ್‌ವೊಂದೇ ಶೇ.15ರಷ್ಟು ಭಾರತಕ್ಕೆ ಕಳುಹಿಸುತ್ತಿದೆ.
ಕತಾರ್‌ನಲ್ಲಿ ಭಾರತದ ಎಲ್‌ಆ್ಯಂಡ್‌ಟಿ, ಪೂಂಜ್ ಲಾಯ್ಡ, ಶಾಪೂರ್ಜಿ ಪಲ್ಲೋಂಜಿ ಗ್ರೂಪ್, ವೋಲ್ಟಾಸ್ ಲಿಮಿಟೆಡ್, ಸಿಂಪ್ಲೆಕ್ಸ್, ಟಾಟಾ ಕನ್ಸಲ್ಟೆನ್ಸಿ, ವಿಪ್ರೋ, ಮಹೀಂದ್ರಾ ಟೆಕ್, ಎಚ್‌ಸಿಎಲ್ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ.
ಟಾರ್ಗೆಟ್ ಕತಾರ್ ಏಕೆ?
ಇತರ ಅರಬ್ ದೇಶಗಳ ಹಾಗೆಯೇ ಕತಾರ್ ಕೂಡ ಸಮೃದ್ಧ ತೈಲೋತ್ಪನ್ನ ಸಂಗ್ರಹವಿರುವ ಶ್ರೀಮಂತ ದೇಶ. ಹಿಂದಿನಿಂದಲೂ ಈ ದೇಶ ಇರಾನ್ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಆದರೆ ಇರಾನ್ ಮತ್ತು ಸೌದಿ ಅರೇಬಿಯಾ, ಈಜಿಪ್ಟ್ ನಡುವಿನ ಸಂಬಂಧ ಅಷ್ಟಕಷ್ಟೇ. 2011ರಲ್ಲಿ ಈಜಿಪ್ಟ್ ನಲ್ಲಿ ಕಾಣಿಸಿಕೊಂಡ ಅರಬ್ ಕ್ರಾಂತಿಗೆ ಕತಾರ್ ನೆಲವೇ ಕಾರಣ ಎಂಬುದು ಈಜಿಪ್ಟ್ನ ಆರೋಪ. ಏಕೆಂದರೆ, ಕ್ರಾಂತಿಗೆ ಕಾರಣರಾದ ಮುಸ್ಲಿಂ ಬ್ರದರ್‌ಹುಡ್‌ಗೆ ಆಶ್ರಯ ಕೊಟ್ಟಿದ್ದು ಇರಾನ್ ಮತ್ತು ಕತಾರ್ ಎಂಬ ಆರೋಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.