Ad5-nCoV ಲಸಿಕೆ ಬಳಕೆಗೆ ಒಪ್ಪಿಗೆ
Team Udayavani, Jun 30, 2020, 12:30 PM IST
ಮಣಿಪಾಲ : ಸದ್ಯ ಇಡೀ ವಿಶ್ವದ ಚಿತ್ತ ಕೋವಿಡ್-19ಕ್ಕೆ ಕಡಿವಾಣ ಹಾಕಲು ಪಣತೊಟ್ಟಿ ನಿಂತಿರುವ ಸಂಶೋಧಕರ ಮೇಲಿದೆ. ಈ ಬೆಳವಣಿಗೆಗಳ ನಡುವೆಯೇ ಸೋಂಕಿನ ಮೂಲ ಕೇಂದ್ರ ಎಂದೇ ಕುಖ್ಯಾತಿ ಪಡೆದಿರುವ ಚೀನವೂ ಡೆಡ್ಲಿ ವೈರಸ್‌ಗೆ ಮದ್ದರೆಯುವ ಕಾರ್ಯದಲ್ಲಿ ನಿರತವಾಗಿದ್ದು, ದೇಶದ ಮಿಲಿಟರಿ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯನ್ನು ಮಿಲಿಟರಿ ವಿಭಾಗದ ಬಳಕೆಗೆ ಅನುಮತಿ ಸಿಕ್ಕಿದೆ ಎಂದು ಹೇಳಿಕೊಂಡಿದೆ.
ಕ್ಲಿನಿಕಲ್ ಪ್ರಯೋಗ ಹಂತದ ವೇಳೆ ಈ ಲಸಿಕೆ ಸುರಕ್ಷಿತವಾಗಿದ್ದು, ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬ ಅಂಶ ದೃಢಪಟ್ಟಿದೆ. ಪ್ರಯೋಗದ 2 ಹಂತಗಳಲ್ಲಿಯೂ ಸಕರಾತ್ಮಕ ಬೆಳವಣಿಗೆ ಕಂಡು ಬಂದಿದ್ದು, ವೈರಾಣುವನ್ನು ತಡೆಗಟ್ಟಿ ಅದರಿಂದ ಎದುರಾಗಬಹುದಾದ ರೋಗಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯವನ್ನು ಲಸಿಕೆ ಹೊಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಈ ಹಿನ್ನಲೆಯಲ್ಲಿ ಚೀನದ ಮಿಲಿಟರಿ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ ಕಂಡುಹಿಡಿದಿರುವ ಈ ಲಸಿಕೆಯನ್ನು ಸೋಂಕಿತರಿಗೆ ನೀಡ ಬಹುದು ಎಂದು ಸರಕಾರ ಹಸಿರು ನಿಶಾನೆ ತೋರಿಸಿದೆ ಎಂದು ಕಂಪೆನಿ ಹೇಳಿದೆ.
ಇನ್ನು ಚೀನ ಅಭಿವೃದ್ಧಿಪಡಿಸುತ್ತಿರುವ ಎಂಟು ಲಸಿಕೆಗಳಲ್ಲಿ Ad5-nCoV ಔಷಧವೂ ಒಂದಾಗಿದ್ದು, ಉಸಿರಾಟದ ತೊಂದರೆ ಅನುಭವಿಸುತ್ತಿರುವ ಹೊಸ ಸೋಂಕಿತ ವ್ಯಕ್ತಿಗಳಿಗೆ ಈ ಲಸಿಕೆಯನ್ನು ನೀಡಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ.
ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್ ಸೈನ್ಸ್‌ನ ಕ್ಯಾನ್ಸಿನೊ ಮತ್ತು ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಜಂಟಿಯಾಗಿ ಈ ಲಸಿಕೆಯನ್ನು ಹೊರತಂದಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.