ತಾಲಿಬಾನ್ ಉಗ್ರರ ವಿರುದ್ಧ ಸಡ್ಡು ಹೊಡೆದ ಮಹಿಳಾ ಮಣಿಗಳು
Team Udayavani, Sep 13, 2021, 2:11 PM IST
ಕಾಬೂಲ್ : ಮಹಿಳೆಯರ ಮೇಲೆ ಕೆಲವೊಂದು ನಿರ್ಬಂಧ ಹೇರಿರುವ ತಾಲಿಬಾನ್ ಉಗ್ರರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ.
ತಾಲಿಬಾನ್ ಆಡಳಿತ ಶುರುವಾದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಮೂಲೆ ಗುಂಪಾಗಿವೆ. ಷರಿಯತ್ ಕಾನೂನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವ ತಾಲಿಬಾನಿಗಳು ಮಹಿಳೆಯರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದಾರೆ. ಮನೆಯಿಂದ ಹೊರ ಬರಬೇಕಾದರೆ ಮುಖ ಮುಚ್ಚುವಂತೆ ಬುರ್ಖಾ ಧರಿಸುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ತಾಲಿಬಾನಿಗಳ ಈ ಆದೇಶ ಅಲ್ಲಿಯ ಹೆಣ್ಣು ಮಕ್ಕಳಿಗೆ ಉಸಿರುಗಟ್ಟುವಂತೆ ಮಾಡಿದೆ.
Best thing on Twitter today is Afghan women protesting against Taliban diktat on attire and also perhaps challenging every stereotypical imagery of the Afghan woman in a black full veil by posting pictures in their traditional dress! #AfghanWoman #DoNotTouchMyClothes #Feminism pic.twitter.com/Jx85ANPFRQ
— Ruhi Khan ⚡️ (@khanruhi) September 12, 2021
ತಾಲಿಬಾನ್ ಉಗ್ರರ ಅತಿರೇಖದ ರೂಲ್ಸ್ ಗಳ ವಿರುದ್ಧ ಇದೀಗ ತಾಲಿಬಾನ್‍ಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಆಕ್ರೋಶವನ್ನು ಹೊರ ಹಾಕಲು ಸೋಷಿಯಲ್ ಮೀಡಿಯಾ ವೇದಿಕೆ ಮಾಡಿಕೊಂಡಿರುವ ಅಫ್ಗಾನ್ ಯುವತಿಯರು, ಮಹಿಳೆಯರು ಹೊಸ ಅಭಿಯಾನ ಶುರು ಮಾಡಿದ್ದಾರೆ.
Afghan women have started online campaign to protest Taliban’s dress code. They post their photos with their traditional clothes and use #DoNotTouchMyClothes , #AfghanistanCulture and #AfghanWomen tags. pic.twitter.com/75EY5EYOMK
— sibghat ullah (@sibghat51539988) September 12, 2021
ಪ್ರಜ್ಞಾವಂತ ಯುವತಿಯರು ಅಫ್ಗಾನ್ ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು, ಆ ಧಿರಿಸಿನಲ್ಲಿರುವ ತಮ್ಮ ಫೋಟೊಗಳನ್ನು #DoNotTouchMyClothes, #AfghanistanCulture ಹ್ಯಾಷ್ ಟ್ಯಾಟ್ ನಡಿ ಟ್ವಿಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಅಭಿಯಾನಕ್ಕೆ ಎಲ್ಲೆಡೆ ಪಾರ ಬೆಂಬಲ ವ್ಯಕ್ತವಾಗಿದೆ.
I wear my traditional Afghan dress proudly.
It’s colourful and beautiful.
Not at all like the images you saw circulating yesterday.
Thank you @RoxanaBahar1 who’s encouraging us #AfghanWomen to share the beauty of #AfghanistanCulture. pic.twitter.com/OAyNhku78l
— Tahmina Aziz (@tahmina_aziz) September 12, 2021
ಇಂದು ಅಫ್ಗಾನ್ ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಡುವ ಮೂಲಕ ತಾಲಿಬಾನ್ ಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಓರ್ವಳು ಟ್ವೀಟ್ ಮಾಡಿದ್ದಾಳೆ.
This is how #Afghan cultural dress for women look like. #Afghanistan https://t.co/mcikMUHilQ pic.twitter.com/XPZfstkGc8
— Malali Bashir (@MalaliBashir) September 12, 2021
ಮಹಿಳಾ ಉಡುಪುಗಳ ಮೇಲೆ ತಾಲಿಬಾನ್ ನ ಹೇರಿರುವ ನಿಷೇಧವನ್ನು ವಿರೋಧಿಸಿ, ಹೆಚ್ಚು ಹೆಚ್ಚು ಮಹಿಳೆಯರು ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ಮತ್ತು ಸಂಪ್ರದಾಯವಾದಿ ಕಪ್ಪು ಬುರ್ಖಾಕ್ಕೆ ವ್ಯತಿರಿಕ್ತವಾಗಿ ಅಫ್ಘಾನ್ ಸಾಂಪ್ರದಾಯಿಕ ಉಡುಪುಗಳ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.