ಅಫ್ಘಾನ್: ನೆರೆ-ಹೊರೆಯ ಸಂಕಟ, ಸಂತಸಗಳು!
Team Udayavani, Aug 24, 2021, 6:40 AM IST
ಅಫ್ಘಾನಿಸ್ಥಾನದಲ್ಲಿ ಈಗ ತಾಲಿಬಾನ್ ಉಗ್ರರ ದುರಾಡಳಿತ ನಿರಂತರವಾಗಿ ಸಾಗಿದೆ. ಜಗತ್ತಿನ ಆಗುಹೋಗುಗಳ ಮೇಲೆ ಅಲ್ಲಿನ ಬೆಳವಣಿಗೆ ಪ್ರಭಾವ ಬೀರುತ್ತದೆ ಎನ್ನುವುದು ಮೇಲ್ನೋಟಕ್ಕೇ ಕಂಡುಬರುವ ಅಂಶ. ಭಾರತ, ಚೀನ, ಪಾಕಿಸ್ಥಾನ, ರಷ್ಯಾ ಮತ್ತು ಅಮೆರಿಕಕ್ಕೆ ನೇರವಾಗಿ ಅದರಿಂದ ನೇರವಾಗಿ ಹಲವು ಪರಿಣಾಮಗಳಿವೆ. ಭಾರತಕ್ಕೆ ಇದು ಸಂಕಟ ತಂದೊಡ್ಡುವ ಬೆಳವಣಿಗೆಯಾದರೆ, ಈ ಸಂಘರ್ಷದಿಂದಲೇ ಬೇಳೆಕಾಳು ಬೇಯಿಸಿಕೊಳ್ಳಲು ಚೀನ ಹಾಗೂ ಪಾಕಿಸ್ಥಾನ ತುದಿಗಾಲಲ್ಲಿ ನಿಂತಿವೆ.
ಮತ್ತೆ ಪೆಟ್ಟು ತಿಂದ ಅಮೆರಿಕ :
ಜಗತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಮಾತೇ ನಡೆಯಬೇಕು ಎಂಬ ಮೊಂಡುವಾದ ಅಮೆರಿಕದ್ದು ಇರಾಕ್, ವಿಯೆಟ್ನಾಂ, ಸಿರಿಯಾ, ಕೊರಿಯಾ, ಲಿಬಿಯಾಗಳಲ್ಲಿ ಹಿಂದಿನ ಸಂದರ್ಭಗಳಲ್ಲಿ ಅಲ್ಲಿ ಮೂಗು ತೂರಿಸಲು ಹೋಗಿ ಪೆಟ್ಟುತಿಂದಿದೆ. ಈಗ ಅಫ್ಘಾನಿಸ್ಥಾನದಲ್ಲಿ ಕೂಡ ಇಪ್ಪತ್ತು ವರ್ಷಗಳ ಕಾಲ 3 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಯುದ್ಧ ಮತ್ತು ತಾಲಿಬಾನ್ ಉಗ್ರರ ಹುಟ್ಟು ಅಡಗಿಸುತ್ತೇನೆ ಎಂದು ಕೈಸೋತು ವಾಪಸಾಗುತ್ತಿದೆ. ತಾಲಿಬಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ನೆರವು ಕೋರಿದ್ದು ಪಾಕಿಸ್ಥಾನವನ್ನು. ನ್ಯಾಟೋ ರಾಷ್ಟ್ರಗಳ ಜತೆಗೆ ಚರ್ಚೆ ಮಾಡಿ, ಸೇನೆ ವಾಪಸ್ ಮಾಡಿದ್ದು ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿಕೊಂಡರೂ, ಅದು ಆ ರೀತಿ ಆಗಿಲ್ಲ. ಅಮೆರಿಕದ ಅಷ್ಟೂ ಸರಕಾರಗಳು ಅಫ್ಘಾನಿಸ್ಥಾನದ ನಾಯಕತ್ವ ಬೆಳೆಸುವ ಪ್ರಯತ್ನ ಮಾಡಲೇ ಇಲ್ಲ. ತಾಲಿಬಾನ್ ಪ್ರಾಬಲ್ಯಗೊಳ್ಳುತ್ತಿದ್ದಂತೆ ಅಮೆರಿಕ ಸರಕಾರ ಆ ದೇಶದಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಹರ ಸಾಹಸ ಪಡುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮತ್ತೂಂದು ರಾಷ್ಟ್ರದ ಆಂತರಿಕ ಬಿಕ್ಕಟ್ಟಿನಲ್ಲಿ ಮೂಗು ತೂರಿಸಬೇಕೇ ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸುವ ದೊಡ್ಡ ಪಾಠವನ್ನು ಅಮೆರಿಕಕ್ಕೆ ತಾಲಿಬಾನ್ ನೀಡಿದೆ.
ಪಾಕ್ ಉಗ್ರರಿಗೆ ಅಫ್ಘಾನ್ ಆಡಂಬೊಲ :
“ಆಫ್ಪಾಕ್’ (AfPak) ಎಂಬ ಪದಪುಂಜ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ ರೂಪುಗೊಂಡಿತ್ತು. ಆಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಲ್ಲಿ ಉಂಟಾಗುವ ಮಿಲಿಟರಿ ಮತ್ತು ಉಗ್ರ ಚಟುವಟಿಕೆಗಳ ಮೇಲೆ ವಿಶೇಷ ಗಮನಹರಿಸಲು ಈ ಪದಪುಂಜವನ್ನು ರಚಿಸಲಾಗಿತ್ತು. ಅದಕ್ಕೆ ಪಾಕಿಸ್ಥಾನ ತೀವ್ರ ಆಕ್ಷೇಪ ಮಾಡಿದ್ದಕ್ಕೆ ಅಮೆರಿಕ ಸರಕಾರ ಅದರ ಬಳಕೆ ಮಾಡಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ಪ್ರೋತ್ಸಾಹ ನೀಡುವ ಪಾಕಿಸ್ಥಾನದ ಐಎಸ್‌ಐ ಲಷ್ಕರ್, ಜೈಶ್, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳ ಉಗ್ರರನ್ನು ಅಫ್ಘಾನಿಸ್ಥಾನಕ್ಕೆ ಕಳುಹಿಸಿ ಅವರಿಗೆ ಅಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತರಬೇತಿ ನೀಡಿ, ಮತ್ತೆ ಕಾಶ್ಮೀರಕ್ಕೆ ಕಳುಹಿಸುವ ದುಃಸ್ಸಾಹಸ ಮಾಡೀತೇ ಎನ್ನುವುದು ಆತಂಕ. ಈಗಿನ ವರದಿಗಳಂತೆ ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರು ಆಫ್ಘಾನಿಸ್ಥಾನ ಸೇರಿಕೊಂಡಿದ್ದಾರೆ. ಇನ್ನು ತಾಲಿಬಾನ್ ಮತ್ತು ಪಾಕಿಸ್ಥಾನ ನಡುವೆ ನಿಕಟ ಬಾಂಧವ್ಯ ಇದೆ ಎಂಬ ಅಂಶವನ್ನು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ತಾಲಿಬಾನ್ ಉಗ್ರರು ಪ್ರಾಬಲ್ಯಗೊಂಡಿರುವುದು ಪಾಕಿಸ್ಥಾನಕ್ಕೆ ಧನಾತ್ಮಕವೇ ಆಗಿದೆ. ಅಫ್ಘಾನಿಸ್ಥಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಪ್ರಕಾರ ಪಾಕ್ ವಾಯುಪಡೆ ಉಗ್ರರಿಗೆ ನೆರವು ನೀಡಿದ್ದರಿಂದಲೇ ಅವರು ಕ್ಷಿಪ್ರವಾಗಿ ಗೆದ್ದಿದ್ದಾರೆ. 9/11 ದಾಳಿಯ ಬಳಿಕ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡಿತ್ತು. ಹಲವು ವರ್ಷಗಳಿಂದ ಅಫ^ನ್ ಸರಕಾರ ಉಗ್ರರ ಜತೆಗೆ ಮಾತುಕತೆ ನಡೆಸುವಂತೆ ಪರೋಕ್ಷ ಒತ್ತಡವನ್ನೂ ಹೇರಿತ್ತು.
ಅಮೆರಿಕ ವಿರುದ್ಧದ ಪ್ರತೀಕಾರಕ್ಕೆ ರಷ್ಯಕ್ಕಿದು ಅವಕಾಶ :
ಅಫ್ಘಾನಿಸ್ಥಾನದಲ್ಲಿ ರಷ್ಯಾದ ಪ್ರಭಾವಕ್ಕೆ ಹಲವು ಐತಿಹ್ಯಗಳಿವೆ. ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧೆ ನಡೆಸಿದ್ದವು. ಅಫ್ಘಾನ್‌ನಲ್ಲಿ ಈಗ ಯಾವುದೇ ಬೆಳವಣಿಗೆಯಾದರೂ, ಅದರಿಂದ ರಷ್ಯಾಕ್ಕೆ ಅನುಕೂಲವಾಗಲಿದೆ.ಅಮೆರಿಕ ಜಗತ್ತಿನ ರಾಷ್ಟ್ರಗಳ ಬೆಳವಣಿಗೆಗಳಲ್ಲಿ ಮೂಗು ತೂರಿಸಿ ಪೆಟ್ಟು ತಿನ್ನುವಂತೆ ರಷ್ಯಾ ಕೂಡ ಕೇಂದ್ರ ಏಷ್ಯಾದ ರಾಷ್ಟ್ರಗಳ ಮೇಲೆ ತನ್ನದೂ ಒಂದು ಛಾಪು ಇರಬೇಕು ಎಂದು ಮಹತ್ವಾಕಾಂಕ್ಷೆಯನ್ನು ಹೊಂದಿಯೇ ಇದೆ. ತಾಲಿಬಾನ್ ಅಫ್ಘಾನಿಸ್ಥಾನದಲ್ಲಿ ಪ್ರಾಬಲ್ಯ ವೃದ್ಧಿಸಿಕೊಳ್ಳುತ್ತಿರುವಂತೆಯೇ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರಿ ಝಮೀರ್ ಕುಬಲೋವ್ “ಘನಿ ಆಡಳಿತಕ್ಕಿಂತ ತಾಲಿಬಾನ್ ಉಗ್ರರ ಆಡಳಿತವೇ ವಾಸಿ’ ಎಂದು ಹೇಳಿದ್ದರು. ಅಮೆರಿಕದ ಪ್ರಾಬಲ್ಯ ಸಂಘರ್ಷಕ್ಕೆ ತುತ್ತಾಗಿರುವ ರಾಷ್ಟ್ರದಲ್ಲಿ ಕುಸಿದು ಬಿದ್ದಿರುವುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂತಸವೇ. ಏಕೆಂದರೆ, ಕಜಕಿಸ್ಥಾನ, ಕಿರ್ಗಿಸ್ಥಾನ, ತಜಿಕಿಸ್ಥಾನ, ತುರ್ಕ್‌ಮೇನಿಸ್ಥಾನ, ಉಜ್ಬೇಕಿಸ್ಥಾನ, ಅಫ್ಘಾನಿಸ್ಥಾನ, ಮಂಗೋಲಿಯಾದ ಪೂರ್ವ ಭಾಗ, ಚೀನದ ಪಶ್ಚಿಮ ಭಾಗ, ಕ್ಯಾಸ್ಪಿಯನ್ ಸಮುದ್ರ, ರಷ್ಯಾದ ಉತ್ತರ ಭಾಗದಿಂದ ದಕ್ಷಿಣದ ವರೆಗಿನ ಪ್ರದೇಶದಲ್ಲಿ ಮತ್ತೂಮ್ಮೆ ಪ್ರಭಾವ ಬೀರುವ ಬಗ್ಗೆ ಯೋಚನೆ ಮಾಡುತ್ತಿದೆ. ಇಷ್ಟಾದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ಮಾತನಾಡಿದ ಅಂಶವೊಂದು ಪ್ರಧಾನ “ನಿರಾಶ್ರಿತರ ಹೆಸರಿನಲ್ಲಿ ಉಗ್ರರು ನಮ್ಮ ದೇಶಕ್ಕೆ ಬರುವುದು ಬೇಡ’ ಎಂದಿದ್ದಾರೆ. ಜತೆಗೆ ನಿರಾಶ್ರಿತರು ಬರದಂತೆ ಗಡಿಗಳನ್ನು ಮುಚ್ಚಿದೆ. ಗಮನಿಸಬೇಕಾದ ಅಂಶವೆಂದರೆ ತಾಲಿಬಾನ್ ಆಡಳಿತಕ್ಕೆ ಬೆಂಬಲ ನೀಡಿದ ರಾಷ್ಟ್ರಗಳ ಪೈಕಿ ರಷ್ಯಾ ಕೂಡ ಒಂದು.
ಭಾರತಕ್ಕೆ ಹೊಸ ಸವಾಲು :
ಭಾರತದಲ್ಲಿರುವ ಸರಕಾರಕ್ಕೆ ಈಗಾಗಲೇ ಪಾಕಿಸ್ಥಾನ, ಚೀನ ವತಿಯಿಂದ ಹಲವು ರೀತಿಯ ಸವಾಲು ಸನ್ನಿವೇಶಗಳು ಎದುರಾಗಿವೆ. ಅದಕ್ಕೊಂದು ಹೊಸ ಸೇರ್ಪಡೆಯೇ ಅಫ್ಘಾನಿಸ್ಥಾನದಲ್ಲಿ ಉಂಟಾಗಿರುವ ಬಿಕ್ಕಟ್ಟು ಕೇಂದ್ರ ಸರಕಾರಕ್ಕೆ ಮಗ್ಗುಲ ಮುಳ್ಳು ಎನ್ನುವುದರಲ್ಲಿ ಸಂಶಯವೇ ಇಲ್ಲ. 2001ರಿಂದ ಈಚೆಗೆ ವಿವಿಧ ಯೋಜನೆಗಳಲ್ಲಿ 224 ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡಿದೆ. ಅವುಗಳ ಭವಿಷ್ಯ ಏನು ಎಂಬ ಆತಂಕ ಇದೆ. ಭಾರತದಲ್ಲಿ ಅಫ್ಘಾನ್ ಸಮುದಾಯದ 21 ಸಾವಿರ ಮಂದಿ ಇದ್ದಾರೆ ಎಂದು ಅವರ ಮುಖಂಡ ಅಹ್ಮದ್ ಜಿಯಾ ಘನಿ ಹೇಳಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೇ ಹೆಚ್ಚು. ಅವರಂತೂ ಸದ್ಯಕ್ಕೆ ವಾಪಸಾಗುವ ಸಾಧ್ಯತೆ ಇಲ್ಲ. ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮವರನ್ನು ಹಂತ ಹಂತವಾಗಿ ಕರೆಯಿಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಉಗ್ರರ ಆಡಳಿತದ ಜತೆಗೆ ಕೆಲಸ ಮಾಡುವ ಅನಿವಾರ್ಯವೂ ಉಂಟಾಗಬಹುದು. ಏಕೆಂದರೆ ಹೆಚ್ಚಿನ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿಕೊಟ್ಟರೆ, ಇಲ್ಲಿಯೂ ಸಂಕಷ್ಟದ ಸ್ಥಿತಿ ಉಂಟಾಗಬಹುದು. ಹಾಗೆಂದು ಅವರನ್ನು ಬಿಡುವಂತೆಯೂ ಇಲ್ಲ. ಒಟ್ಟಿನಲ್ಲಿ ಕತ್ತಿಯ ಅಲಗಿನ ಮೇಲೆ ನಡೆಯುವಂಥ ಕಠಿನದಲ್ಲಿ ಕಠಿನ ಸವಾಲು ಮುಂದಿನ ಸರಕಾರಗಳು ಇವೆ. ಪಾಕಿಸ್ಥಾನದ ಚಿತಾವಣೆಯಿಂದಾಗಿ ತಾಲಿಬಾನ್ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ರೋಹಿ ಕೃತ್ಯಗಳನ್ನು ನಡೆಸದಂತೆ ತಡೆಯುವುದು ಪ್ರಧಾನವಾಗಲಿದೆ.
ಕದಡಿದ ನೀರಲ್ಲಿ ಮೀನು ಹಿಡಿದೀತೇ ಚೀನ? :
ಅಫ್ಘಾನಿಸ್ಥಾನದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸ್ವಲಾಭಕ್ಕೆ ಬಳಕೆ ಮಾಡಲು ಚೀನ ಯೋಜಿತ ಹೆಜ್ಜೆ ಇಡುತ್ತಿದೆ. ಅಮೆರಿಕ ಸೇನೆ ವಾಪಸು ಕರೆಯಿಸಿಕೊಳ್ಳುತ್ತದೆ ಎಂಬ ನಿರ್ಧಾರ ಹೊರಬೀಳುತ್ತಲೇ, ಅಫ್ಘಾನಿಸ್ಥಾನದಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬೆಲ್ಟ್ ಆ್ಯಂಡ್ ರೋಡ್ ಅನ್ನು ವಿಸ್ತರಿಸಲು ಮುಂದಾಗಿದೆ. ಎರಡೂ ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆದಿದೆ. 30 ಮಿಲಿಯ ಯುವಾನ್ (34,326 ಕೋಟಿ ರೂ.) ಮತ್ತು 1 ಮಿಲಿಯ ಅಮೆರಿಕನ್ ಡಾಲರ್ ನಗದನ್ನು ಸಾಲವಾಗಿ ನೀಡಿದೆ. ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ ಅಫ್ಘಾನ್‌ನ ಯೋಧರಿಗೆ ನೆರವು ನೀಡಿತ್ತು. ಸದ್ಯ ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನ್‌ನಲ್ಲಿ 74 ಲಕ್ಷ ಕೋಟಿ ರೂ. ಮೌಲ್ಯದ ಬಾಕ್ಸೆ„ಟ್, ತಾಮ್ರ, ಕಬ್ಬಿಣ ಸೇರಿದಂತೆ ಹಲವು ಅದಿರು ನಿಕ್ಷೇಪಗಳಿವೆ. ಈಗಾಗಲೇ ಮೆಸ್ ಅಯ°ಕ್‌ನಿಂದ 30 ವರ್ಷಗಳ ವರೆಗೆ ತಾಮ್ರ ತೆಗೆವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ಸವಾಲಿನ ಅಂಶವೆಂದರೆ, ಪಾಕಿಸ್ಥಾನದ ಜತೆ ಸೇರಿ, ಚೀನ ಭಾರತದ ವಿರುದ್ಧ ಚಿತಾವಣೆ ಮಾಡಲು ಹೆಜ್ಜೆ ಮುಂದಿಡಬಹುದೇ ಎನ್ನುವುದು ಆತಂಕದ ವಿಚಾರ. ಏಕೆಂದರೆ ಭಾರತದ ವಿರುದ್ಧ ಕೆಲಸ ಮಾಡಲು ಸಿಗುವ ಯಾವುದೇ ಅವಕಾಶವನ್ನು ಚೀನ ಬಿಡುವುದೇ ಇಲ್ಲ. ಚೀನ ತಾಲಿಬಾನ್ ಆಡಳಿತವನ್ನು ಸದ್ಯಕ್ಕೆ ಮಾನ್ಯ ಮಾಡದೇ ಇದ್ದರೂ, ಅವರ ಜತೆಗೆ ಸಹಮತ ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ಅಫ್ಘಾನಿಸ್ಥಾನ ತಾಲಿಬಾನ್ ವಶವಾಗುವುದಕ್ಕೆ ಮೊದಲು ಉಗ್ರ ಸಂಘಟನೆಯ ರಾಜಕೀಯ ನಿಯೋಗ ಬೀಜಿಂಗ್‌ಗೆ ಭೇಟಿ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.