ಅಫ್ಘಾನ್ ಗಾಯಕನನ್ನು ಹತ್ಯೆ ಮಾಡಿದ ತಾಲಿಬಾನ್
Team Udayavani, Aug 29, 2021, 8:53 AM IST
ಕಾಬೂಲ್: ನಾವು ಮೊದಲಿನಂತಲ್ಲ ಬದಲಾಗಿದ್ದೇವೆ, ಜನಸ್ನೇಹಿ ಸರ್ಕಾರ ನೀಡುತ್ತೇವೆ ಎಂದಿದ್ದ ತಾಲಿಬಾನ್ ತನ್ನ ಹಳೇಯ ಚಾಳಿ ಬಿಟ್ಟಿಲ್ಲ ಎಂದು ಮತ್ತೆ ನಿರೂಪಿಸುತ್ತಿದೆ. ಅಫ್ಘಾನಿಸ್ಥಾನದ ಅಂದರಾಬ್ ಪ್ರದೇಶದಲ್ಲಿ ಗಾಯಕರೊಬ್ಬರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿದ್ದಾರೆ ಎಂದು ವರದಿ ತಿಳಿಸಿದೆ.
ಮಾಜಿ ಸಚಿವ ಮಸೂದ್ ಅಂದರಾಬಿ ಅವರ ಹೇಳಿಕೆಯನ್ನು ಸ್ಥಳೀಯ ಅಶ್ವಕ ನ್ಯೂಸ್ ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ:ಅದೃಷ್ಟ ಅಂದರೆ ಇದು : ಎರಡು ವರ್ಷದಲ್ಲಿ ತನ್ನದೇ ಜಮೀನಿನಲ್ಲಿ ರೈತನಿಗೆ ಸಿಕ್ಕಿತು 6 ವಜ್ರಗಳು
ಈ ಹಿಂದೆ, ತಾಲಿಬಾನ್‌ಗಳು ಸಂಗೀತಗಾರರು ಮತ್ತು ಕಲಾವಿದರ ಮೇಲಿನ ದಾಳಿಗೆ ಹೆಸರುವಾಸಿಯಾಗಿದ್ದರು. ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಪ್ರತಿಪಾದಿಸಿತ್ತು.
#Breaking– Former Interior Minister, Massoud Andarabi told Asvaka News that the #Taliban has killed Fawad Andarabi, a local Andarb singer. According to Andarabi, killings by the Taliban continue across the country, especially in Andarb. #Taliban #Afghanishtan pic.twitter.com/Ayy4OtKZ07
— Aśvaka – آسواکا News Agency (@AsvakaNews) August 28, 2021
ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಜನರು ಇಸ್ಲಾಮಿಸ್ಟ್ ಗುಂಪಿನ ಆಡಳಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಫ್ಘಾನ್ ನಲ್ಲಿ ವಲಸೆ ಹೋಗುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ.
ಏರ್‌ಪೋರ್ಟ್ ಸೀಲ್: ಅಮೆರಿಕ ಸೇನೆ ವಾಪಸಾತಿಗೆ ವಿಧಿಸಿದ್ದ ಆ.31ರ ಡೆಡ್‌ಲೈನ್ ಸಮೀಪಿಸುತ್ತಿರುವಂತೆಯೇ ಕಾಬೂಲ್ ವಿಮಾನ ನಿಲ್ದಾಣವನ್ನು ತಾಲಿಬಾನ್ ಸೀಲ್ ಮಾಡಿದೆ. ತನ್ನ ಹೆಚ್ಚುವರಿ ಪಡೆಗಳನ್ನು ನಿಲ್ದಾಣದ ಸುತ್ತಲೂ ತಾಲಿಬಾನ್ ನಿಯೋಜಿಸಿದೆ. ಏರ್‌ಪೋರ್ಟ್‌ಗೆ ತೆರಳುವ ಮಾರ್ಗಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್‌ಗಳನ್ನೂ ನಿರ್ಮಿಸಲಾಗಿದೆ. ಇತ್ತೀಚೆಗೆ ಕಾಬೂಲ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಎಲ್ಲ ದೇಶಗಳೂ ತಮ್ಮ ನಾಗರಿಕರ ಸ್ಥಳಾಂತರ ಪ್ರಕ್ರಿಯೆಯನ್ನು ಕ್ಷಿಪ್ರಗತಿಯಲ್ಲಿ ಮುಗಿಸಿದ್ದು, ಶನಿವಾರವು ಹಲವು ರಾಷ್ಟ್ರಗಳ ಕೊನೇ ವಿಮಾನಗಳು ಕಾಬೂಲ್ ನಿಂದ ಟೇಕ್‌ಆಫ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.