ಅಫ್ಘಾನ್ ನಿರಾಶ್ರಿತರಿಗೆ ಇ-ವೀಸಾ ಕಡ್ಡಾಯ
Team Udayavani, Aug 26, 2021, 6:50 AM IST
ಕಾಬೂಲ್/ಹೊಸದಿಲ್ಲಿ: “ಅಫ್ಘಾನಿಸ್ಥಾನದಿಂದ ಭಾರತಕ್ಕೆ ನಿರಾಶ್ರಿತರಾಗಿ ಬರುವವರು ಇನ್ನು ಮುಂದೆ ಕಡ್ಡಾಯವಾಗಿ ಇ-ವೀಸಾ ಪಡೆಯಬೇಕು’ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. indianvisa online.gov.in, ವೆಬ್‌ಸೈಟ್‌ನಲ್ಲಿ “ಇ-ಇಮರ್ಜೆನ್ಸಿ ಎಕ್ಸ್-ಮಿಸ್ಕ್’ ಮಾದರಿಯ ವೀಸಾ ಸೌಲಭ್ಯಕ್ಕೆ ಚಾಲನೆ ನೀಡಿದ ನಂತರ, ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
“ಅಫ್ಘಾನ್ ನಾಗರಿಕರಲ್ಲಿ ಕೆಲವರ ಪಾಸ್‌ಪೋರ್ಟ್ ಗಳು ಕಳೆದುಹೋಗಿರುವ ವರದಿಗಳ ಆಧಾರದಲ್ಲಿ ಇ-ವೀಸಾ ಜಾರಿಗೊಳಿಸಲಾಗಿದೆ. ಭಾರತಕ್ಕೆ ಆಗಮಿಸಲು ಬಯಸುವ ಅಫ್ಘನ್ನರಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳು ತತ್‌ಕ್ಷಣದಿಂದ ಜಾರಿಗೊಳ್ಳುವಂತೆ ರದ್ದಾಗಿದ್ದು, ಅವರೆಲ್ಲರೂ ಇ-ವೀಸಾಕ್ಕಾಗಿ indianvisaonline.gov.in, ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸಚಿವಾಲಯ ತಿಳಿಸಿದೆ.
ಉದ್ರಿಕ್ತರಿಂದ ದಾಳಿ: ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗ, ಅಲ್ಲಿದ್ದ ಭಾರತೀಯ ರಾಜತಾಂತ್ರಿಕ ಕಚೇರಿ ಬಾಗಿಲು ಹಾಕಿದ ಸಂದರ್ಭದಲ್ಲಿ, ಭಾರತಕ್ಕೆ ತೆರಳ ಬಯಸುವ ಅಫ್ಘಾನಿಸ್ಥಾನದ ಜನತೆಗೆ ವೀಸಾ ವಿತರಿಸುತ್ತಿದ್ದ ಭಾರತದ ತಾತ್ಕಾಲಿಕ ಕಚೇರಿಯೊಂದರ ಮೇಲೆ ಆ. 15ರಂದು ಉರ್ದು ಮಾತನಾಡುತ್ತಿದ್ದ ಗುಂಪೊಂದು ದಾಳಿ ನಡೆಸಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕಚೇರಿಯಲ್ಲಿ ದಾಂಧಲೆ ಮಾಡಿದ್ದ ಆ ಗುಂಪು, ಅಲ್ಲಿದ್ದ ಅಫ್ಘಾನಿಸ್ತಾನೀಯರ ಪಾಸ್‌ಪೋರ್ಟ್‌ಗಳು, ವೀಸಾ ದಾಖಲೆಗಳನ್ನು ಕೊಂಡೊಯ್ದಿದ್ದರೆಂದು ಹೇಳಲಾಗಿದೆ.
ಧಾರ್ಮಿಕ ಮುಖಂಡರೇ ಮುಖ್ಯಸ್ಥರು: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ತಾಲಿಬಾನ್ ಸರ ಕಾ ರವನ್ನು ಧಾರ್ಮಿಕ ಮುಖಂಡರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್ ಸಂಘಟನೆಗಳು ಹೇಳಿಕೊಂಡಿವೆ. ಪುನಃ ಸರಕಾರ ಸ್ಥಾಪಿಸಲು ನಮಗೆ 20 ವರ್ಷಗಳೇ ಹಿಡಿದಿವೆ. ಈ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳಲಾ ಗುವುದು. ನಮ್ಮ ಸರಕಾರವನ್ನು ಧಾರ್ಮಿಕ ಮುಖಂಡರು ಮುನ್ನಡೆಸಲಿದ್ದಾರೆ ಎಂದು ಕಾಬೂಲ್‌ನಲ್ಲಿ ತಾಲಿಬಾನ್ ಮುಖಂಡರು ತಿಳಿಸಿದ್ದಾರೆ.
ಹೆಣ್ಣುಬಾಕರಿಂದ ಹುಡುಕಾಟ: ಅಫ್ಘಾನಿಸ್ಥಾನ ಸರಕಾರ ಉರುಳಿಸಿದ ತಮ್ಮ ಮಹದಾಸೆ ಈಡೇರಿದ ಅನಂತರ ಈಗ ಮದುವೆಯಾಗಲು ಸಿದ್ಧವಾಗಿರುವ ತಾಲಿಬಾನಿ ಉಗ್ರರು, ಮಹಿಳೆಯರು ಹಾಗೂ ಯುವತಿಯರಿಗಾಗಿ ತಲಾಶ್ ಆರಂಭಿಸಿದ್ದಾರೆ ಎಂದು ಅಫ್ಘಾನಿಸ್ಥಾನದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿ, ಇತ್ತೀಚೆಗೆ ಆ ದೇಶದಿಂದ ಓಡಿಬಂದಿರುವ “ದ ಡಲ್ಲಾಸ್ ಮಾರ್ನಿಂಗ್’ ಪತ್ರಿಕೆಯ ವರದಿಗಾರ ಹೊಲ್ಲೀ ಮೆಕೇ ಎಂಬವರು ತಿಳಿಸಿದ್ದಾರೆ.
ಮಹಿಳೆಯರಿಗೆ ಎಚ್ಚರಿಕೆ: ಮಹಿಳೆಯರಿಗೆ ಗೌರವ ಕೊಡೋದು ಹೇಗೆ ಎಂಬುದು ನಮ್ಮ ಸೈನಿಕರಿಗೆ ಗೊತ್ತಿಲ್ಲ. ಹಾಗಾಗಿ, ಅಫ್ಘಾನಿಸ್ಥಾನದ ಉದ್ಯೋಗಸ್ಥ ಮಹಿಳೆಯರು ಮನೆಯಲ್ಲೇ ಇರಬೇಕು ಎಂದು ತಾಲಿಬಾನ್ ನಾಯಕ ಝಬೀವುಲ್ಲಾ ಮುಜಾಹೀದ್ ಎಚ್ಚರಿಸಿದ್ದಾರೆ.
ಚೀನ-ತಾಲಿಬಾನ್ ಮಾತುಕತೆ: ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನಿºನ್, “ಅಫ್ಘಾನಿಸ್ಥಾನದಲ್ಲಿ ಬರಲಿರುವ ತಾಲಿಬಾನ್ ಸರಕಾರದೊಂದಿಗೆ ಚೀನ ಸ್ನೇಹದಿಂದ, ಸಹಕಾರದಿಂದ ಮುಂದುವರಿಯಲಿದೆ’ ಎಂದಿದ್ದಾರೆ.
ಬೈಡನ್ ಪ್ರತ್ಯುತ್ತರ: “ಆ. 31ರೊಳಗೆ ಅಫ್ಘಾನಿಸ್ಥಾನ ದಲ್ಲಿರುವ ಅಮೆರಿಕ ಸೇನೆಯನ್ನು ಹಾಗೂ ಅಲ್ಲಿನ ನಿರಾಶ್ರಿತರನ್ನು ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಆದರೆ, ಅದು ತಾಲಿಬಾನಿಗಳು ನೀಡುವ ಸಹಕಾರದ ಮೇಲೆ ಅವಲಂಬಿತ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಇತ್ತೀಚೆಗೆ ತಾಲಿಬಾನಿಗಳು, ಆ. 31ರೊಳಗೆ ಅಫ್ಘಾನಿಸ್ಥಾನವನ್ನು ಅಮೆರಿಕ ಸಂಪೂರ್ಣವಾಗಿ ತೊರೆಯಬೇಕು ಎಂದು ಆಗ್ರಹಿಸಿದ್ದಕ್ಕೆ ಹೀಗೆ ಹೇಳಿದ್ದಾರೆ.
200 ನಾಯಿ, ಬೆಕ್ಕುಗಳ ಏರ್‌ಲಿಫ್ಟ್! :
ಹಿಂದೊಮ್ಮೆ ಬ್ರಿಟನ್ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಅನಂತರ ಕೆಲವು ವರ್ಷಗಳ ಹಿಂದೆ ಕಾಬೂಲ್‌ನಲ್ಲಿ ನೌಝಾದ್ ಎಂಬ ನಿರ್ಗತಿಕ ಪ್ರಾಣಿಗಳ ಸಾಕಾಣಿಕೆ ಕೇಂದ್ರವನ್ನು ತೆರೆದಿದ್ದ ಮರಿನ್ ಪೌಲ್ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಕಾಬೂಲ್‌ನಿಂದ ತಾವು ಸಾಕಿರುವ ಸುಮಾರು 200 ನಾಯಿಗಳು, ಬೆಕ್ಕುಗಳನ್ನು ಬ್ರಿಟನ್‌ಗೆ ಸಾಗಿಸಲು ಅವರು ನಿರ್ಧರಿಸಿದ್ದು, ಕ್ರೌಂಡ್-ಫಂಡಿಂಗ್ ಮೂಲಕ ವಿಮಾನವೊಂದನ್ನು ಬಾಡಿಗೆ ಪಡೆದು ಅದರಲ್ಲಿ ಈ ಪ್ರಾಣಿಗಳು, ತಮ್ಮ ಸಿಬಂದಿ, ತಾವು, ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ “ಆಪರೇಷನ್ ಆರ್ಕ್’ ಎಂದೂ ಅವರು ಹೆಸರಿಟ್ಟಿದ್ದಾರೆ. ಆದರೆ, ಇದು ವಿವಾದಕ್ಕೆ ಕಾರಣವಾಗಿದೆ. ಅಫ್ಘಾನಿಸ್ಥಾನದಲ್ಲಿರುವ ಅನೇಕ ಬ್ರಿಟನ್ ನಾಗರಿಕರು ಸ್ವದೇಶಕ್ಕೆ ಮರಳಲು ಅವಕಾಶ ಸಿಗದೆ ಪರಿತಪಿಸುತ್ತಿರುವಾಗ, ಅವರನ್ನು ಕರೆತರುವುದನ್ನು ಬಿಟ್ಟು ಪ್ರಾಣಿಗಳನ್ನು ತರುವುದಕ್ಕೆ ಮೊದಲು ಆದ್ಯತೆ ನೀಡುವುದು ಸರಿಯಲ್ಲ ಎಂದು ಬ್ರಿಟನ್ ರಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆನ್ ವ್ಯಾಲೆಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲಿಬಾನಿಗಳು ಬದಲಾಗಿಲ್ಲ :
ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಆಡಳಿತ ಬರಲಿದೆ ಎಂಬುದನ್ನು ಭಾರತ ಮೊದಲೇ ಊಹಿಸಿತ್ತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರು ಇಷ್ಟು ಕ್ಷಿಪ್ರವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇರಲಿಲ್ಲ. ತಾಲಿಬಾನ್‌ನಿಂದ ಎದುರಾಗಲಿರುವ ಬೆದರಿಕೆಯನ್ನೂ ಸಮರ್ಥವಾಗಿ ಎದುರಿಸಲಾಗುತ್ತದೆ ಎಂದರು. ಕ್ವಾಡ್ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಜಗತ್ತಿನಲ್ಲಿ ನಡೆಯುವ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಬೇಕು ಎಂದರು. ಆದರೆ, ತಾಲಿಬಾನಿಗಳು ಅಫ್ಘಾನಿಸ್ಥಾನ ವಶಪಡಿಸಿಕೊಂಡ ಅನಂತರ ಅವರಿಂದ ಆಗುತ್ತಿರುವ ಅನ್ಯಾಯಗಳನ್ನು ನೋಡಿದರೆ ಕಳೆದ 20 ವರ್ಷಗಳಲ್ಲಿ ಅವರೇನೂ ಬದಲಾಗಿಲ್ಲ ಎನ್ನಿಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.