ಮತ್ತೆ ತೈವಾನ್‌ಗೆ ಬಂದಿಳಿದ ಅಮೆರಿಕ ನಿಯೋಗ!
Team Udayavani, Aug 14, 2022, 10:00 PM IST
ತೈಪೆ: ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ಬೆನ್ನಲ್ಲೇ ತೈವಾನ್ ಮೇಲೆ ಚೀನ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವಂತೆಯೇ ಅಮೆರಿಕ ಮತ್ತೊಂದು ನಿಯೋಗವನ್ನು ತೈವಾನ್‌ಗೆ ಕಳುಹಿಸಿಕೊಟ್ಟಿದೆ. ಅಮೆರಿಕ ಸರ್ಕಾರದ ಐವರು ಸದಸ್ಯರ ನಿಯೋಗ ಭಾನುವಾರ ತೈವಾನ್‌ಗೆ ಬಂದಿಳಿದಿದೆ.
ಈ ನಿಯೋಗವು ತೈವಾನ್ ಅಧ್ಯಕ್ಷ ತ್ಸೆ„ ಇಂಗ್-ವೆನ್ ಅವರನ್ನು ಭೇಟಿ ಮಾಡಲಿದ್ದು, ವಿದೇಶಾಂಗ ಸಚಿವ ಜೋಸೆಫ್ ವು ಅವರ ಔತಣಕೂಟದಲ್ಲಿಯೂ ಭಾಗವಹಿಸಲಿದೆ.
ಉಭಯ ದೇಶಗಳ ಸಂಬಂಧ, ಪ್ರಾದೇಶಿಕ ಭದ್ರತೆ, ವ್ಯವಹಾರ ಮತ್ತು ಹೂಡಿಕೆ, ಹವಾಮಾನ ಬದಲಾವಣೆ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿವೆ.
ಆ.4ರಿಂದಲೂ ಚೀನವು ತೈವಾನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಅಂದಿನಿಂದ ಆ.14ರವರೆಗೆ ಚೀನದ 22 ವಿಮಾನಗಳು ಮತ್ತು 6 ಹಡಗುಗಳು ತೈವಾನ್ ಗಡಿ ಬಳಿ ಸುಳಿದಾಡಿವೆ. ಹಾಗೂ ಅದರಲ್ಲಿ 11 ವಿಮಾನಗಳು ಚೀನಾ-ತೈವಾನ್ ನಡುವಿನ ಅನಧಿಕೃತ ಗಡಿ ರೇಖೆ ದಾಟಿವೆ ಎಂದು ತೈವಾನ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.