Trump ಗೆದ್ದ ಬೆನ್ನಲ್ಲೇ ಎಲಾನ್ ಮಸ್ಕ್ ಆಸ್ತಿ 24 ಲಕ್ಷ ಕೋಟಿಗೇರಿಕೆ!
Team Udayavani, Nov 10, 2024, 6:58 AM IST
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ 5 ದಿನಗಳಲ್ಲಿ ಟೆಸ್ಲಾ ಕಂಪೆನಿಯ ಷೇರು ಮೌಲ್ಯ ಶೇ.30ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಟೆಸ್ಲಾ ಮಾಲಕ ಎಲಾನ್ ಮಸ್ಕ್ ಆಸ್ತಿ ಮೌಲ್ಯ 24 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಟೆಸ್ಲಾ ಷೇರು ಶುಕ್ರವಾರ ಶೇ.8.19ರಷ್ಟು ಏರಿ, 26.64 ಲಕ್ಷ ಕೋಟಿ ರೂ.ಗೆ ತಲಿಪಿದೆ. ಈ ಮೂಲಕ ಮಸ್ಕ್ ಅವರು ಜಗತ್ತಿನಲ್ಲೇ 300 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಸಂಪತ್ತು ಹೊಂದಿರುವ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಫೋರ್ಬ್ಸ್ ಪಟ್ಟಿ ಹೇಳಿದೆ. ಅಮೆರಿಕ ಚುನಾವಣೆ ಮತ ಎಣಿಕೆಗೂ ಮುನ್ನ ಮಸ್ಕ್ ನಿವ್ವಳ ಸಂಪತ್ತು 21.09 ಲಕ್ಷ ಕೋಟಿ ರೂ. ಆಗಿತ್ತು.
ಜೆಲೆನ್‌ಸ್ಕಿ ಜತೆ ಮಾತುಕತೆ ವೇಳೆ ಟ್ರಂಪ್‌ಗೆ ಮಸ್ಕ್ ಸಾಥ್!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಬಲವಾಗಿ ಬ್ಯಾಟಿಂಗ್ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಅವರು ಈ ಬಾರಿ ಟ್ರಂಪ್ ಆಡಳಿತದ ಪ್ರಮುಖ ಭಾಗವಾಗಲಿದ್ದಾರೆ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಟ್ರಂಪ್‌ರನ್ನು ಅಭಿನಂದಿಸಲು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕರೆ ಮಾಡಿದ ವೇಳೆ, ಟ್ರಂಪ್ ಅವರು ಎಲಾನ್ ಮಸ್ಕ್ಗೆ ತಮ್ಮ ಫೋನ್ ಹಸ್ತಾಂತರಿಸಿದ ಘಟನೆ ವರದಿ ಯಾಗಿದೆ. ಬಳಿಕ ಮೂವರು ಅರ್ಧ ಗಂಟೆ ಮಾತನಾಡಿದ್ದು ಈ ವೇಳೆ ಟ್ರಂಪ್ ಅವರು ಉಕ್ರೇನ್‌ಗೆ ನೆರವಿನ ಭರವಸೆಯನ್ನೂ ನೀಡಿದ್ದಾರೆ. ಮಸ್ಕ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US; ಮೈಕ್ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ
Telegram ಸಿಇಒ ಡುರೋವ್ ವೀರ್ಯ ಆಯ್ಕೆ ಮಾಡಿದ್ರೆ ಉಚಿತ ಐವಿಎಫ್ ಚಿಕಿತ್ಸೆ
Putin- Trump: ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ರಷ್ಯಾ ಸರ್ಕಾರ
Drones: ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: 6 ಮಂದಿ ಸಾವು, 30 ಮಂದಿಗೆ ಗಾಯ
Moscow: ರಷ್ಯಾ ಮೇಲೆ ಉಕ್ರೇನ್ ಭಾರೀ ಡ್ರೋನ್ ದಾಳಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.