ಪುಣ್ಯಕೋಟಿಯಲ್ಲಿದೆ ಏಡ್ಸ್‌ಗೆ ಮದ್ದು !


Team Udayavani, Jul 23, 2017, 7:00 AM IST

punya-koti.jpg

ವಾಷಿಂಗ್ಟನ್‌: ವೈದ್ಯಕೀಯ ಲೋಕದಲ್ಲಿ ಹಲವು ಉತ್ಪನ್ನಗಳಿಗೆ ಗೋಜನ್ಯ, ಪ್ರಾಣಿಜನ್ಯ ವಸ್ತುಗಳು ಬಳಕೆಯಾಗುತ್ತವೆ. ಆದರೀಗ ಮನುಷ್ಯರಿಗೆ ಮಾರಣಾಂತಿಕವಾದ, ಜಗತ್ತಿನಲ್ಲಿ ಈವರೆಗೆ ಔಷಧವೇ ಇಲ್ಲದ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಗೋವಿನಲ್ಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಗೋವಿನಿಂದ ತಯಾರಾದ ಲಸಿಕೆಯನ್ನು ಎಚ್‌ಐವಿ ನಿರೋಧಕವಾಗಿ ಬಳಸಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಇಂಥ ವಿನೂತನ ಸಂಶೋಧನೆಯನ್ನು ಅಮೆ ರಿಕದ ಸಂಶೋಧಕರ ತಂಡ ಮಾಡಿದ್ದು, “ನೇಚರ್‌’ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳನ್ನು ನೀಡಿದೆ. ಸಂಶೋಧನೆ ಪ್ರಕಾರ, ಗೋವಿನಿಂದ ಎಚ್‌ಐವಿಗಳನ್ನು ತಡೆಯುವ ಪ್ರತಿಜೀವಿಗಳನ್ನು ಕೆಲವು ವಾರಗಳಲ್ಲಿ ತಯಾರು ಮಾಡಬಹುದು.

ಗೋವುಗಳಲ್ಲಿರುವ ಬ್ಯಾಕ್ಟೀರಿಯಾ ಪೂರಿತ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಸಂಕೀರ್ಣ ವಾಗಿದ್ದು, ಹೊಟ್ಟೆಯಲ್ಲಿನ ಬಹು
ಹಂತದ ವ್ಯವಸ್ಥೆ, ಹುಲ್ಲುಗಳನ್ನು ಜೀರ್ಣಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೆ ತಕ್ಕುದಾದ ಭಾರೀ ಪ್ರಮಾಣದ ಬ್ಯಾಕ್ಟೀರಿಯಾ ವ್ಯವಸ್ಥೆ ಅವು ಗಳಲ್ಲಿದೆ. ಆದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚು. ಜತೆಗೆ ಪ್ರತಿಜೀವಿ (ಆ್ಯಂಟಿಬಾಡಿ)ಗಳು ಅತಿ ವೇಗದಲ್ಲಿ ಗೋವುಗಳಲ್ಲಿ ಉತ್ಪತ್ತಿಯಾಗುತ್ತವೆ. ಇದೇ ರೀತಿ ಮಾನವನಲ್ಲಾದರೆ ಪ್ರಾಕೃತಿಕವಾಗಿ ಎಚ್‌ಐವಿ ವಿರುದ್ಧದ ಪ್ರತಿಜೀವಿಗಳು (ಬಿಎನ್‌ಎಬಿಎಸ್‌) ಬೆಳವಣಿಗೆ ಹೊಂದುವ ಪ್ರಮಾಣ ಶೇ. 10ರಿಂದ 20ರಷ್ಟು ಮಾತ್ರವಾಗಿದೆ. ಇಷ್ಟು ಬೆಳವಣಿಗೆ ಯಾಗಲು 2 ವರ್ಷ ಬೇಕಾಗಿದ್ದು, ಅದಾಗಲೇ ಎಚ್‌ಐವಿ ವೈರಸ್‌ ರೂಪಾಂತರಗೊಂಡು ದೇಹ ವನ್ನು ಜರ್ಝರಿತಗೊಳಿಸಿರುತ್ತದೆ.

ಆದರೆ, ಸಂಶೋಧನೆ ಪ್ರಕಾರ, ಎಚ್‌ಐವಿ ವಿರುದ್ಧ ಕೆಲವೇ ವಾರಗಳಲ್ಲಿ ಗೋವುಗಳಲ್ಲಿ ಬಿಎನ್‌ಎಬಿಎಸ್‌ಗಳು ಸೃಷ್ಟಿಯಾಗಿವೆ. ನಾಲ್ಕು ಹಸುಗಳ ಮೇಲೆ ಇಂತಹ ಪ್ರಯೋಗ ಮಾಡಲಾಗಿದ್ದು, ಧನಾತ್ಮಕ ಫ‌ಲಿತಾಂಶಗಳು ಗೋಚರವಾಗಿವೆ. 

ಎಚ್‌ಐವಿ ಗೋವುಗಳ ಮೇಲೆ ಪರಿ ಣಾಮ ಬೀರುವುದಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಗೋವಿನ ಪ್ರತಿಜೀವಕ ಗಳನ್ನೇ ಔಷಧವನ್ನಾಗಿ ಮಾನವನಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳನ್ನು ಪೂರಕ ವಾಗಿ ಬಳಸಿ ಮಾನವರಿಗೆ ಬೇಕಾದ ಸುಧಾರಿತ ಎಚ್‌ಐವಿ ವಿರೋಧಿ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ. ಈ ಬಗ್ಗೆ ಇನ್ನೂ ವ್ಯಾಪಕವಾದ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಚ್‌ಐವಿ ವಿರುದ್ಧ ಹೋರಾಟ ಹೇಗೆ ?
ಮಾನವನಲ್ಲಿ ಎಚ್‌ಐವಿ ಬಳಿಕ ಪ್ರತಿಜೀವಿಗಳು ಸೃಷ್ಟಿಯಾಗುತ್ತಾವಾದರೂ, ಅವುಗಳ ಉತ್ಪಾದನೆ ನಿಧಾನವಾಗಿರುತ್ತದೆ ಮತ್ತು ಪ್ರಬಲವಾಗಿರುವುದಿಲ್ಲ. ವಿರೋಧಿ ಪ್ರತಿಜೀವಿಗಳ ಬೆಳವಣಿಗೆಗೆ ಸುಮಾರು 2 ವರ್ಷ ತಗಲುತ್ತವೆ. ಆದರೆ ಮಾನವ ದೇಹ ಆಗ ಎಚ್‌ಐವಿನಿಂದಾಗಿ ತೀರಾ ಘಾಸಿಗೊಂಡಿರುತ್ತವೆ. ಆದರೆ ಗೋವು ಗಳಲ್ಲಿ 30-45 ದಿನಗಳಲ್ಲಿ ಪ್ರತಿಜೀವಿಗಳು ಉತ್ಪತ್ತಿಯಾಗಿ ಎಚ್‌ಐವಿ ನಿರೋಧಕವಾಗಿ ಕೆಲಸ ಮಾಡುವುದನ್ನು ಪತ್ತೆ ಹಚ್ಚಲಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.