ಕೋವಿಡ್ 19 ಗಂಭೀರತೆಗೆ ವಾಯುಮಾಲಿನ್ಯವೂ ಕಾರಣ : ಅಧ್ಯಯನ ವರದಿ
Team Udayavani, Apr 8, 2021, 2:08 PM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ವಾಯು ಮಾಲಿನ್ಯ ಕೂಡ ಕೋವಿಡ್ 19 ಗೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಸುದ್ದಿಯೊಂದು ಅಧ್ಯಯನದ ಮೂಲಕ ಹೊರಬಿದ್ದಿದೆ.
ಹೆಚ್ಚಿದ ವಾಯುಮಾಲಿನ್ಯವು ಕೋವಿಡ್ -19 ಗೆ ಕಾರಣವಾಗುವ ವೈರಸ್ SARS-CoV-2 ನಿಂದ ಬಳಲುತ್ತಿರುವ ಜನರ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಅಧ್ಯಯನಗಳ ವಿಮರ್ಶೆಯಿಂದ ತಿಳಿದು ಬಂದಿದೆ ಎಂಬ ವರದಿಯಾಗಿದೆ.
ಧೂಳಿನ ಸಣ್ಣ ಕಣವೊಂದರ ಸೇವನೆಯಿಂದಲೂ ಕೂಡ ಕೋವಿಡ್ 19 ನ ತೀವ್ರತೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. ಕೋವಿಡ್ 19 ನ ಸಾಂಕ್ರಾಮಿಕದ ಸಂದರ್ಭದಲ್ಲಿ ವಾಯು ಮಾಲಿನ್ಯದ ಕಾರಣದಿಂದ ಮರಣದ ಪ್ರಮಾಣ ಶೇಕಡಾ 8ರಷ್ಟು ಹೆಚ್ಚಳವಾಗಿತ್ತು ಎಂದು ಅನ್ನಲ್ಸ್ ಜರ್ನಲ್ ನ ಆನ್ ಲೈನ್ ನಲ್ಲಿ ಆವೃತ್ತಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಸಂಶೋಧಕರು ಹೇಳಿದ್ದಾರೆ.
ಓದಿ : ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲ್ಲ: ಮಾಜಿ ಸಚಿವ ಬಾಬಾಗೌಡ ಪಾಟೀಲ
ಯು ಎಸ್ ನ ಬೋಸ್ಟನ್ ನಲ್ಲಿರುವ ಬೆಥ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ ನ ಔಷಧ ವಿಭಾಗದ ಸ್ಟೀಫನ್ ಆಂಡ್ರ್ಯೂ ಮೇನ್ ನೇತೃತ್ವದ ತಂಡವು, ವಾಯುಮಾಲಿನ್ಯವು ಕೋವಿಡ್ -19ಗೆ ಕಾರಣವಾಗುತ್ತಿರಬಹುದೇ ಎಂಬ ಅಧ್ಯಯನ ನಡೆಸಿತ್ತು. ಈ ಅಧ್ಯಯನದ ಪರಿಣಾಮವಾಗಿ ವಿಶ್ವಾದ್ಯಂತ ಕೋವಿಡ್ -19 ನಿಂದ ಉಂಟಾದ ಮರಣಕ್ಕೆ 15 ಪ್ರತಿಶತದಷ್ಟು ವಾಯುಮಾಲಿನ್ಯವು ಕಾರಣವಾಗಿದೆ ಎಂದು ಶಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆಂದು ವರದಿ ತಿಳಿಸಿದೆ.
ಕೋವಿಡ್ -19 ಸಾಂಕ್ರಾಮಿಕವು ವಾಯುಮಾಲಿನ್ಯದ ವ್ಯಾಪಕ ಆರೋಗ್ಯ ಪರಿಣಾಮಗಳನ್ನು ಎತ್ತಿ ತೋರಿಸಿದೆ, ಇದರಲ್ಲಿ ಉಸಿರಾಟದ ಮೇಲೆ ತೀವ್ರವಾದ ಪರಿಣಾಮಗಳು ಮತ್ತು ದೀರ್ಘಕಾಲದ ಹೃದಯ ರಕ್ತನಾಳದ ಕಾಯಿಲೆ ಮತ್ತು ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ದೀರ್ಘಕಾಲದ ಪರಿಣಾಮಗಳು ಸೇರಿವೆ ಎಂದು ಸಂಶೋಧಕ ಮೇನ್ ಹೇಳಿದ್ದಾರೆ.
ಓದಿ : 30 ವರ್ಷಗಳ ನಂತ್ರ ಉಗುರನ್ನು ಕತ್ತರಿಸಿದ ಮಹಿಳೆ : ಆ ಉಗುರುಗಳ ಉದ್ದ ಎಷ್ಟು ಗೊತ್ತಾ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.