ಪ್ರಯಾಣಿಕ ಆಸನಕ್ಕೂ ಏರ್‌ಬ್ಯಾಗ್
Team Udayavani, Dec 19, 2020, 5:58 AM IST
ಹೊಸದಿಲ್ಲಿ: ಇನ್ನು ಮುಂದೆ ಅಗ್ಗದ ಕಾರುಗಳಲ್ಲಿಯೂ ಚಾಲಕನ ಪಕ್ಕದ ಪ್ರಯಾಣಿಕನ ಆಸನಕ್ಕೆ ಏರ್ ಬ್ಯಾಗ್ ಕಡ್ಡಾಯವಾಗಲಿದೆ.
ವಾಹನಗಳ ಗುಣಮಟ್ಟ ಕುರಿತ ಸರ್ವೋಚ್ಚ ತಂತ್ರಜ್ಞಾನ ಸಮಿತಿಯು ಕೇಂದ್ರ ಸರಕಾರದ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ತಿದ್ದುಪಡಿ ತರುವಂತೆ ಸುರಕ್ಷಾ ವಿಚಾರ ನೋಡಿಕೊಳ್ಳುವ ವಾಹನ ಉದ್ಯಮ ಗುಣಮಟ್ಟ (ಎಐಎಸ್)ಗೆ ಸೂಚಿಸಿದೆ.
2019ರ ಜು. 1ರಿಂದಲೇ ಚಾಲಕನ ಆಸನದಲ್ಲಿ ಏರ್ ಬ್ಯಾಗ್ ಕಡ್ಡಾಯವಾಗಿದೆ. ಕಾರುಗಳ ಸುರಕ್ಷೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಈ ಬಗ್ಗೆ ಸಿದ್ಧತೆ ನಡೆಸಿದ್ದು, ಮುಂದಿನ ವರ್ಷ ಈ ನಿಯಮ ಜಾರಿಗೆ ಬರಲಿದೆ.
ಅಪಘಾತ ಸಂಭವಿಸಿದಾಗ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿರುವವರಿಗೂ ಗಂಭೀರಗಾಯಗಳಾಗುತ್ತವೆ. ಎಷ್ಟೋ ಬಾರಿ ಜೀವಹಾನಿಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಏರ್‌ಬ್ಯಾಗ್ ಅಳವಡಿಸುವ ನಿರ್ಧಾರ ತಳೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ
Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.