24 ಗಂಟೆಗಳಲ್ಲಿ 830 ಸಾವು, ಮಾರ್ಚ್ ನಂತರ ಅಮೆರಿಕದಲ್ಲಿ ಅತೀ ಕಡಿಮೆ ಮರಣ ಪ್ರಮಾಣ ದಾಖಲು
Team Udayavani, May 12, 2020, 8:06 AM IST
ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್-19 ಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 830 ಜನರು ಬಲಿಯಾಗಿದ್ದು ಒಟ್ಟಾರೆ ಮೃತರಾದವರ ಸಂಖ್ಯೆ 80,352ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ಭಾನುವಾರ ಅಮೆರಿಕಾದಲ್ಲಿ 776 ಜನರು ಮೃತರಾಗಿದ್ದರು. ಇದು ಮಾರ್ಚ್ ನಂತರ ದಾಖಲಾದ ಅತೀ ಕಡಿಮೆ ಮರಣ ಪ್ರಮಾಣವಾಗಿದೆ. ಮತ್ತೊಂದೆಡೆ ಅಮೆರಿಕಾದ ಕೆಲ ರಾಜ್ಯಗಳು ಲಾಕ್ ಡೌನ್ ಸಡಿಲಿಸಿರುವುದರಿಂದ ಸಾವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎನ್ ಡಿಟಿವಿ ತಿಳಿಸಿದೆ.
ಈ ದೇಶದಲ್ಲಿ ಒಟ್ಟಾರೆಯಾಗಿ 13 ಲಕ್ಷಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 2,62,225 ಜನರು ಗುಣಮುಖರಾಗಿದ್ದಾರೆ. ನ್ಯೂಯಾರ್ಕ್ ನಗರವೊಂದರಲ್ಲೇ 27 ಸಾವಿರ ಜನರು ಬಲಿಯಾಗಿದ್ದು 3 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ.
ಜಗತ್ತಿನಾದ್ಯಂತ ಈ ಮಹಾಮಾರಿಗೆ 2,87,293 ಜನರು ಬಲಿಯಾಗಿದ್ದು 42,54 800 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಇದರಲ್ಲಿ 15,27,144 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ಅಮೆರಿಕಾದಲ್ಲೇ ಹೆಚ್ಚಿದ್ದು ನಂತರದ ಸ್ಥಾನದಲ್ಲಿ ಯುಕೆ ( 32, 065) ಮತ್ತು ಸ್ಪೇನ್ (26,744) ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.