ಅಡಿಕೆ, ಮಾವಿಗೆ ಅಮೆರಿಕ ತೆರಿಗೆ ಬರೆ
Team Udayavani, Nov 2, 2018, 4:00 AM IST
ವಾಷಿಂಗ್ಟನ್: ಭಾರತದಿಂದ ತೆರಿಗೆಯ ಹಂಗಿಲ್ಲದೆ ಅಮೆರಿಕ ಪ್ರವೇಶಿಸುತ್ತಿದ್ದ ಸುಮಾರು 50 ಸಾಮಗ್ರಿಗಳ ಮೇಲೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ತೆರಿಗೆ ವಿಧಿಸಲು ನಿರ್ಧರಿಸಿದ್ದು, ನ. 1ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ.
ಯಾವ ಸರಕುಗಳಿಗೆ ತೆರಿಗೆ ಬಿಸಿ?
ಅಡಿಕೆ (ತಾಜಾ, ಒಣಗಿದ, ಸಿಪ್ಪೆ ಸುಲಿಯದ), ಮಾವಿನ ಹಣ್ಣು , ಮರಳುಗಲ್ಲು, ಲವಣಗಳು, ಎಮ್ಮೆ ಚರ್ಮ, ಶೇ. 85ಕ್ಕೂ ಹೆಚ್ಚು ಭಾಗ ಹತ್ತಿಯ ಅಂಶ ಅಥವಾ ತೂಕವಿರುವ ನೇಯ್ದ ಬಟ್ಟೆಗಳು, ಕೈಮಗ್ಗದ ನೆಲಹಾಸು, ನೆಲದ ಮೇಲೆ ಹಾಕಲಾಗುವ ಯಾವುದೇ ಕೈಮಗ್ಗದ ನೇಯ್ಗೆ, ಕಸೂತಿ ಕಲಾ ವಸ್ತುಗಳು, ಹಾರ್ಮೋನಿಯಂ ಮಾದರಿಯ ಎಲ್ಲ ಸಂಗೀತ ವಾದ್ಯಗಳು, ಚಿನ್ನದ ಲೇಪನವಿರುವ ಆಲಂಕಾರಿಕ ವಸ್ತುಗಳು ಸಹಿತ ಸುಮಾರು 50 ಸಾಮಗ್ರಿಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.
ಪರಿಣಾಮವೇನು?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಸ್ಥಿತಿ ಬಲಗೊಳಿಸಲು ಅಮೆರಿಕ ನೀಡುವ ಸಹಾಯ ಹಸ್ತಗಳಲ್ಲಿ ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ (ಜಿಎಸ್‌ಪಿ)ಯೂ ಒಂದು. ಇದು ಅಮೆರಿಕದ ಅತೀ ಹಳೆಯ, ಅತೀ ದೊಡ್ಡ “ವಾಣಿಜ್ಯ ಸಹಕಾರ’. ಈ ಯೋಜನೆ ವ್ಯಾಪ್ತಿಯಲ್ಲಿರುವ ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಇದರ ಲಾಭ ಹೆಚ್ಚು ಪಡೆದಿರುವುದು ಭಾರತ. ಜಿಎಸ್‌ಪಿ ಅಡಿ 2017ರಲ್ಲಿ ಭಾರತ ಅಂದಾಜು 41,000 ಕೋಟಿ ರೂ.ಗಳಷ್ಟು ತೆರಿಗೆ ರಹಿತ ವ್ಯವಹಾರ ನಡೆಸಿತ್ತು. ಆದರೆ ಈಗ 50 ವಸ್ತುಗಳಿಗೆ ವಿಧಿಸಲಾಗುವ ತೆರಿಗೆಯಿಂದಾಗಿ ಭಾರತದ ಮಧ್ಯಮ, ಸಣ್ಣ ಉದ್ದಿಮೆಗಳ ಮೇಲೆ, ಕೈಮಗ್ಗ ಹಾಗೂ ಕೃಷಿ ಉತ್ಪನ್ನಗಳ ತಯಾರಕರು, ರಫ್ತುದಾರರ ಮೇಲೆ ಬರೆ ಎಳೆದಂತಾಗುತ್ತದೆ.
ಅಮೆರಿಕ ಸಮರ್ಥನೆ
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ, “ಆದ್ಯತೆ ಆಧಾರಿತ ಸಾಮಾನ್ಯ ವ್ಯವಸ್ಥೆ ಯಡಿ (ಜಿಎಸ್‌ಪಿ) ಅಮೆರಿಕಕ್ಕೆ ವಿವಿಧ ದೇಶಗಳಿಂದ ಆಮದಾಗುತ್ತಿದ್ದ ಕೆಲವು ವಸ್ತುಗಳನ್ನು ತೆರಿಗೆ ರಹಿತ ವ್ಯಾಪ್ತಿಯಿಂದ ಹೊರಗಿಡಲಾಗಿದೆಯಷ್ಟೇ. ಯಾವುದೇ ದೇಶವನ್ನು ಗುರಿಯಾಗಿಸುವ ನಿರ್ಧಾರವಿಲ್ಲ’ ಎಂದಿದೆ. ಅಂತೆಯೇ, ಅರ್ಜೆಂಟೀನ, ಥಾಯ್ಲೆಂಡ್, ಸುರಿನಾಮ್, ಪಾಕಿಸ್ಥಾನ, ಟರ್ಕಿ, ಫಿಲಿಪ್ಪೆ„ನ್ಸ್, ಈಕ್ವೆಡಾರ್, ಇಂಡೋನೇಷ್ಯಾ ದೇಶಗಳಿಂದ ಆಮದಾಗುತ್ತಿದ್ದ ಕೆಲ ಸಾಮಗ್ರಿಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಇಂತಹ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ಅಮೆರಿಕ ನೀಡಿಲ್ಲ. ಭಾರತ ಸಹಿತ ಕೆಲವು ದೇಶಗಳೊಂದಿಗಿನ ಅಮೆರಿಕ ಸಂಬಂಧ ಈಗ ಹಿಂದಿನಿಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
MUST WATCH
ಹೊಸ ಸೇರ್ಪಡೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.