ಮೋದಿ ಯತ್ನಕ್ಕೆ ಬೆಂಬಲಿಸಿ : ಪಾಕ್‌ಗೆ ಅಮೆರಿಕ
Team Udayavani, Dec 5, 2018, 9:00 AM IST
ವಾಷಿಂಗ್ಟನ್: ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಎಲ್ಲಾ ಜವಾಬ್ದಾರಿಯುತ ದೇಶಗಳು ಭಾರತದ ಪ್ರಧಾನಿ ನರೇಂದ್ರ ಮೋದಿ, ಆಫ್ಘಾನ್ ಅಧ್ಯಕ್ಷ ಆಶ್ರಫ್ ಘನಿ ಮತ್ತು ವಿಶ್ವಸಂಸ್ಥೆಯ ಜೊತೆ ಕೈಜೋಡಿಸಬೇಕು ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಅವರು ಪಾಕಿಸ್ಥಾನಕ್ಕೆ ಸಂದೇಶ ರವಾನಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಯುದ್ಧ ಆರಂಭವಾಗಿ 40 ವರ್ಷಗಳೇ ಆದವು. ಇಷ್ಟು ವರ್ಷ ಕಾದಿದ್ದು ಸಾಕು. ಈಗಲಾದರೂ ಆ ದೇಶದ ಜೊತೆ ನಿಲ್ಲೋಣ. ಮೋದಿ, ಘನಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸುತ್ತಿ ದ್ದಾರೆ. ಅವರಿಗೆ ನಮ್ಮ ಸಹಾಯ ಹಸ್ತ ಚಾಚೋಣ ಎಂದರು. ಆಫ್ಘಾನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ, ತಾಲಿಬಾನ್ ಜತೆ ಸಂಧಾನಕ್ಕೆ ಯತ್ನಿಸುವಲ್ಲಿ ಹೆಜ್ಜೆಯಿಡು ವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2 ದಿನಗಳ ಹಿಂದಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿ ಸುವ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ.
ರಷ್ಯಾದಿಂದ ಕ್ಷಿಪಣಿ ಖರೀದಿಗೆ ಅಭಯ?: ಇನ್ನೊಂದೆಡೆ, ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ನಿರ್ಬಂಧ ಹೇರಿದ್ದರೂ, ಭಾರತ ಎಸ್ 400 ರಕ್ಷಣಾ ವ್ಯವಸ್ಥೆ ಖರೀದಿಸಲು ಮುಂದಾಗಿದ್ದನ್ನು ಅಮೆರಿಕ ಮನ್ನಿಸುವ ಸಾಧ್ಯತೆಯಿದೆ. ಈ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ ಎಂದು ಸಚಿವ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ. ಭಾರತವು ರಷ್ಯಾದಿಂದ ಎಸ್ 400 ಖರೀದಿಸುವುದಕ್ಕೆ ಸಂಬಂಧಿಸಿ ನಾವು ಚರ್ಚಿಸಿ, ಸಮಸ್ಯೆ ಬಗೆ ಹರಿಸುತ್ತೇವೆ ಎಂದಿದ್ದಾರೆ. ಭಾರತ ಹಲವು ವರ್ಷಗಳಿಂದಲೂ ತಟಸ್ಥ ನಿಲುವನ್ನು ತಳೆದಿದ್ದು, ರಷ್ಯಾದಿಂದ ಹಲವು ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ವಾಷಿಂಗ್ಟನ್‌ನಲ್ಲಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್, ಮ್ಯಾಟಿಸ್‌ರನ್ನು ಭೇಟಿ ಮಾಡಿದ್ದಾರೆ. ಅಮೆರಿಕ ಹಾಗೂ ಭಾರತದ ಮಧ್ಯೆ ರಕ್ಷಣಾ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. 5 ದಿನಗಳ ಪ್ರವಾಸದಲ್ಲಿರುವ ನಿರ್ಮಲಾ, ಅಮೆರಿಕದ ರಕ್ಷಣಾ ಸಚಿವಾಲಯದೊಂದಿಗೆ ಹಲವು ಸುತ್ತಿನ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.