ಅಮೆರಿಕ ಶಟ್‌ಡೌನ್: ಮತ್ತೆ ಉಂಟಾದ ಆಡಳಿತಾತ್ಮಕ ಬಿಕ್ಕಟ್ಟು
Team Udayavani, Jan 21, 2018, 11:01 AM IST
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನ ವಹಿಸಿ ಡೊನಾಲ್ಡ್ ಟ್ರಂಪ್ ವರ್ಷ ಪೂರೈಸುತ್ತಿ ದ್ದಂತೆಯೇ ಅಲ್ಪಾವಧಿಯ ಹಣಕಾಸು ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು (ಷಟ್‌ಡೌನ್) ಉಂಟಾಗಿದೆ. ಅಮೆರಿಕದ ಸೆನೆಟ್‌ನಲ್ಲಿ ಮಸೂದೆ ತಿರಸ್ಕೃತಗೊಂಡಂತೆ, ಸರಕಾರದ ಎಲ್ಲ ವಿಭಾಗಗಳೂ ಸ್ಥಗಿತಗೊಂಡಿವೆ. 5 ವರ್ಷಗಳ ಬಳಿಕ ಈ ರೀತಿಯ ಬಿಕ್ಕಟ್ಟು ಉಂಟಾಗಿದೆ. ಅಮೆರಿಕದ ಸಂಸತ್ ಮತ್ತು ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ಒಂದೇ ಪಕ್ಷದನಿಯಂತ್ರಣದಲ್ಲಿರುವಾಗ ಈ ರೀತಿಯ ಬಿಕ್ಕಟ್ಟು ಉಂಟಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
ಅಮೆರಿಕ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಪೆಂಟಗನ್ ಮತ್ತು ಸರಕಾರದ ಇತರ ಕಚೇರಿಗಳಿಗೆ ಅಲ್ಪಾವಧಿಗೆ ಹಣಕಾಸಿನ ನೆರವು ನೀಡುವ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದ್ದು, ರಿಪಬ್ಲಿಕನ್ ಪಕ್ಷದ ಕೆಲ ಸಂಸದರು ಡೆಮಾಕ್ರಾಟ್ ಸಂಸದರ ಜತೆ ಕೈಜೋಡಿಸಿದ ಪರಿಣಾಮ ಮಸೂದೆ ಅಂಗೀಕಾರ ಸಾಧ್ಯವಾಗಲಿಲ್ಲ. ಮಸೂದೆ ಅಂಗೀಕಾರಕ್ಕೆ 60 ಮತಗಳ ಅಗತ್ಯವಿತ್ತು. ಸೆನೆಟ್‌ನಲ್ಲಿ 50-48 ಮತಗಳ ಅಂತರಿಂದ ಮಸೂದೆ ತಡೆಹಿಡಿಯಲ್ಪಟ್ಟಿತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಧ್ಯಕ್ಷ ಟ್ರಂಪ್, ಡೆಮಾಕ್ರಾಟ್ ಸಂಸದರೇ ಬಿಕ್ಕಟ್ಟಿಗೆ ಕಾರಣ ಎಂದು ದೂರಿದ್ದಾರೆ. ಮುಂದಿನ ವಾರ ದಾವೋಸ್ ಭೇಟಿ ಹೊರತಾಗಿ ಉಳಿದ ಎಲ್ಲ ಕಾರ್ಯಕ್ರಮಗಳನ್ನು ಟ್ರಂಪ್ ರದ್ದು ಮಾಡಿದ್ದಾರೆ.
ಕಾರಣವೇನು?
ಅಕ್ರಮ ವಲಸಿಗರನ್ನು ಗಡಿ ಪಾರು ಮಾಡಬೇಕು ಎಂಬುದು ಅಧ್ಯಕ್ಷ ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಯೋಜನೆ. ಅದನ್ನು ಜಾರಿ ಮಾಡುವ ಮುನ್ನ ತಮ್ಮ ಜತೆ ಸಮಾಲೋಚನೆ ನಡೆಸಬೇಕು ಎಂದು ಡೆಮಾಕ್ರಾಟ್ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ. ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಈ ಬಿಕ್ಕಟ್ಟಿನ ನೇರ ಪರಿಣಾಮ ಸೋಮವಾರದಿಂದ ಕಂಡುಬರಲಿದೆ. 8 ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರಿಗೆ ಸಂಬಳರಹಿತ ರಜೆ ನೀಡಲಾಗುತ್ತದೆ. ಅಗತ್ಯ ಸೇವೆಗಳಷ್ಟೇ ಇರಲಿವೆ.
ನಮ್ಮ ಸರಕಾರ ತೆರಿಗೆ ಕಡಿತ ಮಾಡಿದ ಲಾಭ ಸಿಗಬಾರದು ಎಂದು ಡೆಮಾಕ್ರಾಟ್ ಸದಸ್ಯರು ಇಂಥ ಪ್ರಯತ್ನ ನಡೆಸುತ್ತಿದ್ದಾರೆ. ತೆರಿಗೆ ಕಡಿತದಿಂದ ದೇಶದ ಅರ್ಥವ್ಯವಸ್ಥೆಗೆ ನೆರವಾಗಲಿದೆಯೇ ಹೊರತು ಧಕ್ಕೆಯಾಗಲಾರದು.
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಸರಕಾರಕ್ಕೆ ಧನಸಹಾಯ ಮಾಡು ವುದು, ಸೇನೆಗೆ ನೆರವಾಗುವುದು ಡೆಮಾಕ್ರಾಟ್ ಸಂಸದರಿಗೆ ಬೇಕಾಗಿಲ್ಲ. ಆರೋಗ್ಯ ಸೇವೆಗೆ ಹಾನಿ ಉಂಟು ಮಾಡುವುದು ಅವರ ಆದ್ಯತೆ. ಅಕ್ರಮ ವಲಸಿಗರು ದೇಶದಲ್ಲಿ ತುಂಬಬೇಕು ಎನ್ನುವುದೇ ಅವರಿಗೆ ಬೇಕಾಗಿದೆ.
ಮಿಚ್ ಮೆಕ್‌ಕೊನೆಲ್, ಸೆನೆಟ್ ನಾಯಕ
ಹಿಂದಿನ “ಸ್ತಬ್ಧ’ ಚಿತ್ರಣ
2013 ಅಕ್ಟೋಬರ್
ಅಧ್ಯಕ್ಷ ಒಬಾಮರ ಮಹತ್ವಾಕಾಂಕ್ಷಿ ಆರೋಗ್ಯ ರಕ್ಷಣಾ ಕಾಯ್ದೆಗೆ ಪ್ರತಿರೋಧ ವ್ಯಕ್ತವಾಗಿತ್ತು. 16 ದಿನಗಳ ಕಾಲ ಆಂಶಿಕವಾಗಿ ಸರಕಾರಿ ವ್ಯವಸ್ಥೆ ಬಂದ್ ಆಗಿತ್ತು. 8.50 ಲಕ್ಷ ಸರಕಾರಿ ನೌಕರರು ವೇತನವಿಲ್ಲದೇ ಮನೆಯಲ್ಲಿ ಉಳಿಯಬೇಕಾಯಿತು. 15,957 ಕೋಟಿ ರೂ. (2.5 ಬಿಲಿಯನ್ ಡಾಲರ್) ನಷ್ಟ ಉಂಟಾಗಿತ್ತು.
ಡಿಸೆಂಬರ್ 1995- ಜನವರಿ 1996: ಮುಂಗಡ ಪತ್ರ ಗಾತ್ರ ಕುಗ್ಗಿಸಬೇಕು ಎಂದು ರಿಪಬ್ಲಿಕನ್ ಪಕ್ಷ ಸ್ಪೀಕರ್ ನ್ಯೂ ಗಿಂಗ್ರಿಚ್ ಪಟ್ಟು ಹಿಡಿದ ಕಾರಣ 3 ವಾರ ಕಾಲ ಷಟ್‌ಡೌನ್ ಆಯಿತು. ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಬಜೆಟ್‌ಗೆ ಸಹಿ ಹಾಕಲೇಬೇಕಾ ಯಿತು. ಉದ್ಯಾನವನ, ಪಾಸ್‌ಪೋರ್ಟ್ ನವೀಕರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತೊಂದರೆ ಉಂಟಾಗಿದ್ದವು.
1995 ನವೆಂಬರ್
5 ದಿನಗಳ ಕಾಲ ಕ್ಲಿಂಟನ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಧ್ಯಾಂತರ ಬಜೆಟ್‌ಗೆ ಸಂಬಂಧಿಸಿ ಬಿಕ್ಕಟ್ಟು ಉಂಟಾಗಿತ್ತು. ಆರೋಗ್ಯ ವಿಮೆ ಪ್ರೀಮಿಯಂ ಮೊತ್ತ ಹೆಚ್ಚಳಕ್ಕೆ ಸಂಬಂಧಿಸಿದ ಬಿಕ್ಕಟ್ಟು ಒಂದು ತಿಂಗಳ ವರೆಗೆ ಮುಂದುವರಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.