ಅಮೆರಿಕದಿಂದ ಸಿದ್ಧವಾಯ್ತು ಅತ್ಯಾಧುನಿಕ ಲೇಸರ್ ಶಸ್ತ್ರ
ಈ ಶಸ್ತ್ರದಿಂದ ದಾಳಿ ಮಾಡಿದ್ರೆ ವೈರಿ ಪಡೆ ಭಸ್ಮ
Team Udayavani, Nov 9, 2019, 8:01 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಇದರ ಕಿರಣಗಳನ್ನು ಹಾಯಿಸಿದರೆ ಸಾಕು. ಡ್ರೋನ್, ಹೆಲಿಕಾಪ್ಟರ್ ಅಷ್ಟೇ ಏಕೆ ಯುದ್ಧ ವಿಮಾನವೂ ಕ್ಷಣಮಾತ್ರದಲ್ಲಿ ಭಸ್ಮ! ಇಂಥದ್ದೊಂದು ಭಸ್ಮಾಸುರ ಅಸ್ತ್ರವನ್ನು ತಯಾರಿಸಿರುವುದು ಅಮೆರಿಕದ ಸೇನೆ. 50 ಕಿ.ವ್ಯಾ.ನ ಅತ್ಯಾಧುನಿಕ ಲೇಸರ್ ಅಸ್ತ್ರವಾದ ಇದನ್ನು ಮಿಲಿಟರಿ ವಾಹನದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ಸುಮಾರು 6 ದಶಕಗಳಿಂದ ಇಂತಹ ತಂತ್ರಜ್ಞಾನಕ್ಕಾಗಿ ಸಂಶೋಧನೆ ನಡೆಸಲಾಗಿದ್ದು, ಈಗ ಪ್ರಾಯೋಗಿಕ ಪರೀಕ್ಷೆ ಹಂತದಲ್ಲಿದೆ. 2022ರ ವೇಳೆಗೆ ಇದು ಸೇನೆಯಲ್ಲಿ ಸೇವೆ ಲಭ್ಯವಾಗಲಿದೆ. ಆಕಾಶದಿಂದ ಆಗುವ ದಾಳಿಗಳನ್ನು ಲೇಸರ್ ಶಸ್ತ್ರಗಳ ಮೂಲಕ ಸಮರ್ಥವಾಗಿ ತಡೆಯಬಹುದು ಎಂದು ಸೇನೆ ಹೇಳಿಕೊಂಡಿದೆ.
8 ಚಕ್ರದ ಮಿಲಿಟರಿ ವಾಹನದಲ್ಲಿ ಇದನ್ನು ಅಳವಡಿಸಲಾಗುತ್ತಿದ್ದು, ಇದು ಲೇಸರ್ ಶಸ್ತ್ರದಿಂದಾಗುವ ಅದುರುವಿಕೆ ಮತ್ತು ಭಾರವನ್ನು ತಡೆಯಲು ಸಮರ್ಥವಾಗಿದೆ. ಈ ಹಿಂದೆ ಇಂತಹುದೇ ಶಸ್ತ್ರವನ್ನು ಅಮೆರಿಕ ನೌಕಾಪಡೆ ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿತ್ತು. ಇದನ್ನು ಅದು ಬಳಸಲು ಉದ್ದೇಶಿಸಿದೆ. ಇಂತಹ ಶಸ್ತ್ರಗಳು ಬಳಕೆಗೆ ಬಂದಿದ್ದೇ ಆದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲೇಸರ್ ಶಸ್ತ್ರಗಳನ್ನು ಬಳಸುವ ಮೊದಲ ದೇಶವಾಗಿ ಅಮೆರಿಕ ಹೆಸರು ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.