ಚೀನ ಆಕಾಶದಲ್ಲಿ ಅಮೆರಿಕ ಗೂಡಚರ್ಯೆ; 70 ಸಾವಿರ ಅಡಿಯಿಂದ ಮಿಲಿಟರಿ ಚಟುವಟಿಕೆ ವೀಕ್ಷಣೆ


Team Udayavani, Aug 26, 2020, 3:13 PM IST

ಚೀನ ವಿಮಾನ

ಮಣಿಪಾಲ: ಅಮೆರಿಕ ಮತ್ತು ಚೀನ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದ ಎರಡು ಸುಧಾರಿತ ಯು -2 ಪತ್ತೇದಾರಿ ವಿಮಾನಗಳು (U-2 spy planes) ಗಡಿಯನ್ನು ಪ್ರವೇಶಿಸಿ ಮಿಲಿಟರಿ ಡ್ರಿಲ್‌ಗ‌ಳನ್ನು (ಸೇನೆ ಕುರಿತಾದ ಮಾಹಿತಿಗಳನ್ನು) ದಾಖಲಿಸಿದೆ ಎಂದು ಚೀನ ಆರೋಪಿಸಿದೆ.

ಈ ಘಟನೆ ಉತ್ತರ ಚೀನದಲ್ಲಿ ಸಂಭವಿಸಿದ್ದು ಎಂದು ಹೇಳಲಾಗಿದ್ದು, ನಿಖರವಾದ ಸ್ಥಳದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಆದರೆ ಚೀನದ ಈ ಆರೋಪವನ್ನು ಅಲ್ಲಗೆಳೆಯದ ಅಮೆರಿಕ, ನಾವು ಯಾವುದೇ ನಿಯಮಗಳನ್ನು ಮುರಿದಿಲ್ಲ ಎಂದು ಹೇಳಿದೆ.

ಈ ಬೆಳವಣಿಗೆಯಿಂದ ಉಭಯ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ತಿಂಗಳು ಅಮೆರಿಕದ ಎರಡು ಯುದ್ಧವಿಮಾನಗಳು ಶಾಂಘೈನಿಂದ ಕೇವಲ 75 ಕಿ.ಮೀ. ದೂರದಲ್ಲಿ ಹಾರಾಡುತ್ತಿರುವುದು ಕಂಡುಬಂದಿತ್ತು. ಈ ಕುರಿತಾದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಚೀನದ ರಕ್ಷಣಾ ಸಚಿವಾಲಯದ ವಕ್ತಾರ ವು ಕ್ವಿನ್‌ ಅವರು ಹೇಳುವಂತೆ ಅಮೆರಿಕದ ಎರಡು ನೇವಿ ಯು -2 ವಿಮಾನಗಳು ಉತ್ತರ ಭಾಗದಲ್ಲಿ ನಮ್ಮ ಮಿಲಿಟರಿಯ ಮೇಲೆ ಹಲವು ಗಂಟೆಗಳ ಕಾಲ ಕಣ್ಣಿಟ್ಟಿದ್ದವು. ಈ ಸಂದರ್ಭದಲ್ಲಿ ಮಿಲಿಟರಿ ತರಬೇತಿಗಳು ನಮ್ಮಲ್ಲಿ ನಡೆಯುತ್ತಿತ್ತು ಎಂದಿದ್ದಾರೆ. ಅಮೆರಿಕ ಈ ಕೃತ್ಯ ನಮ್ಮ ತರಬೇತಿಯ ಮೇಲೆ ಪರಿಣಾಮ ಬೀರಿದ್ದು, ಉಭಯ ದೇಶಗಳ ನಡುವಿನ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.

ಚೀನದ ಸರಕಾರಿ ಮಾಧ್ಯಮ ವರದಿ ಮಾಡಿರುವಂತೆ, ಅಮೆರಿಕದ ಈ ಕ್ರಮವು ತುಂಬಾ ಅಪಾಯಕಾರಿಯಾಗಿದ್ದು, ಮತ್ತೂಮ್ಮೆ ಚೀನದ ಭೂಪ್ರದೇಶಕ್ಕೆ ಪ್ರವೇಶಿಸಿದರೆ ಅದು ಮಿಲಿಟರಿ ಚಕಮಕಿಗೆ ಕಾರಣವಾಗಬಹುದು ಎಂದು ಪರೋಕ್ಷವಾಗಿ ಎಚ್ಚರಿಸಿದೆ. ಸೇನಾ ಮೂಲಗಳ ಪ್ರಕಾರ ಅಲ್ಲಿನ ಎರಡು ಸ್ಥಳಗಳಲ್ಲಿಚೀನಾದ ಸೈನ್ಯವು ತರಬೇತಿಯಲ್ಲಿತ್ತು.

ನಾವೇ ಎಂದ ಅಮೆರಿಕ
ಚೀನ ಗಡಿಯೊಳಕ್ಕೆ ಪ್ರವೇಶಿಸಿದ ಅಮೆರಿಕ ತನ್ನ ಮೇಲೆ ಚೀನ ಮಾಡಿದ ಆರೋಪಗಳನ್ನು ನಿರಾಕರಿಸಿಲ್ಲ. ನಾವು ನಮ್ಮ ಮಿತಿಯಲ್ಲಿ ಕೆಲಸ ಮಾಡಿದ್ದೇವೆ. ಯಾವುದೇ ನಿಯಮಗಳನ್ನು ಮುರಿದಿಲ್ಲ. ನಾವು ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೆವು. ಅದನ್ನು ಮುಂದುವರಿಸುತ್ತೇವೆ‌ ಎಂದು ಯುಎಸ್‌ ಏಫೋìರ್ಸ್‌ ಹೇಳಿದ್ದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಯು 2 ಸಾಮರ್ಥ್ಯ ಏನು ಗೊತ್ತಾ?
ಯು -2 ಸ್ಪೈ ಏರ್‌ಕ್ರಾಫ್ಟ್ 1950ರಲ್ಲಿ ತನ್ನ ಸೇವೆಯನ್ನು ಪ್ರಾರಂಭಿದೆ. ಅಂದರೆ ಸುಮಾರು 70 ವರ್ಷ ಹಳೆಯ ವಿಮಾನ ಅದಾಗಿದೆ. ಆದರೆ ಇವುಗಳನ್ನು ಹಲವಾರು ಬಾರಿ ನವೀಕರಿಸಲಾಗಿದೆ. ಅಮೆರಿಕದ ಬಳಿ ಯು2ಗಿಂತ ಸುಧಾರಿತ ಸ್ಪೈ ವಿಮಾನಗಳಿವೆ. ಚೀನದತ್ತ ಮುಖ ಮಾಡಿದ ಯು -2 ಸ್ಪೈ ವಿಮಾನವು 70 ಸಾವಿರ ಅಡಿಗಳ ಎತ್ತರದಿಂದ ಕೆಲಸ ಮಾಡಬಹುದಾದ ಸಾಮರ್ಥ್ಯ ಹೊಂದಿದೆ. ನೆಲದ ಮೇಲೆ ನಡೆಯುತ್ತಿರುವ ಸಣ್ಣ ಚಲನೆಯ ಮೇಲೆ ಇದು ಕಣ್ಣಿಣಬಹುದಾಗಿದೆ. ಅಂತಹ ಸೂಕ್ಷ್ಮ ಚಲನೆಗಳ ಚಿತ್ರ ಮಾತ್ರವಲ್ಲದೇ ಎಚ್‌ಡಿ ವೀಡಿಯೋಗಳನ್ನು ಮಾಡಬಹುದಾಗಿದೆ. ವಿಶೇಷವೆಂದರೆ ಈ ವಿಮಾನಗಳನ್ನು ನಿರೋಧಕ ಕ್ಷಿಪಣಿಗಳ ಕೈಗೆ ಸಿಗದಂತೆ ಒಂದು ದೇಶದ ಮೇಲೆ ಹಾರಿಬಿಡಬಹುದಾಗಿದೆ.

ವಿಫ‌ಲವಾದ ಚೀನ ರಾಡಾರ್‌!
ಕೆಲವು ಮಾಧ್ಯಮ ವರದಿ ಮಾಡಿದ ಪ್ರಕಾರ ಯು -2 ವಿಮಾನವು ಹಲವು ಗಂಟೆಗಳ ಕಾಲ ಸುಳಿದಾಡುತ್ತಿತ್ತು ಎಂದಿವೆ. 70 ಅಡಿ ಎತ್ತರದಿಂದ ಚೀನದ ಪೂರ್ಣ ಮಿಲಿಟರಿ ವ್ಯಾಯಾಮವನ್ನು ಸೆರೆಹಿಡಿಯಲಾಗಿದೆ. ಬಳಿಕ ಅಲ್ಲಿಂದ ನೇರವಾಗಿ ಹಿಂದೂ ಮಹಾಸಾಗರದಲ್ಲಿನ ಅಮೆರಿಕದ ವಾಯು ನೆಲೆ ಪ್ರವೇಶಿಸಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಚೀನದ ಸೈನ್ಯಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲಿನ ರಾಡಾರ್‌ಗಳು ಇವುಗಳನ್ನು ಗುರುತಿಸಲು ವಿಫ‌ಲವಾಗಿದ್ದವು. ಬಳಿಕ ವಿಮಾನ ಹಿಂದೂ ಮಹಾ ಸಾಗಗರದಲ್ಲಿನ ತನ್ನ ವಾಯುನೆಲೆಗೆ ಬಂದಿಳಿಯುವ ಸಂದರ್ಭ ಚಿತ್ರಗಳ ಮೂಲಕ ಪತ್ತೆ ಹಚ್ಚಲಾಯಿತು ಎಂದು ಮಾಧ್ಯಮಗಳು ಹೇಳಿವೆ.

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.