ಪ್ರಧಾನಿ ವಿಮಾನಕ್ಕೆ ಅಮೆರಿಕದ ರಕ್ಷಣೆ
Team Udayavani, Feb 8, 2019, 12:30 AM IST
ವಾಷಿಂಗ್ಟನ್: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ ರೂ. ವೆಚ್ಚದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿಸಲಿದೆ.
ಇದರಿಂದ ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ಏರ್‌ಫೋರ್ಸ್ ಒನ್‌ಗೆ ಸಮಾನವಾದ ರಕ್ಷಣಾ ವ್ಯವಸ್ಥೆಯನ್ನು ಏರ್ ಇಂಡಿಯಾ ಒನ್ ಕೂಡ ಪಡೆಯಲಿದೆ. ಇದನ್ನು ಬೋಯಿಂಗ್ 777 ವಿಮಾನಕ್ಕೆ ಅಳವಡಿಸಲಾಗುತ್ತದೆ. ಇದಕ್ಕೆಂದೇ 2 ಬೋಯಿಂಗ್ 777 ಇಆರ್‌ಗಳನ್ನು ಸರಕಾರ ಖರೀದಿಸಲಿದೆ. ಈ ಹಿಂದೆ ಪ್ರಧಾನಿ ಪ್ರಯಾಣಿಸುವ ವಿಮಾನಗಳು ಸಾಮಾನ್ಯ ವಾಣಿಜ್ಯ ಉದ್ದೇಶದ್ದಾಗಿರುತ್ತಿತ್ತು. ಆದರೆ ಈ ವಿಮಾನಗಳನ್ನು ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಕ್ಕೆ ಸೀಮಿತಗೊಳಿಸಲಾಗುತ್ತದೆ. ಕ್ಷಿಪಣಿ ರಕ್ಷಣೆ ವ್ಯವಸ್ಥೆಯು ಸಂಪೂರ್ಣ ಸ್ವಯಂಚಾಲಿತವಾಗಿರಲಿದ್ದು, ಕ್ಷಿಪಣಿ ಗುರುತಿಸಲು ಲೇಸರ್ ವ್ಯವಸ್ಥೆಯನ್ನು ಹೊಂದಿದೆ. ವಿಮಾನದ ನಿರ್ದಿಷ್ಟ ಶ್ರೇಣಿಯಲ್ಲಿ ಕ್ಷಿಪಣಿ ಕಂಡುಬಂದಲ್ಲಿ ತತ್‌ಕ್ಷಣವೇ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮಥ್ಯ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.