AGT: ಬಟ್ಟೆ ಹಾಕದೆ ವೇದಿಕೆ ಮೇಲೆ ಪ್ರತಿಭೆ ಪ್ರದರ್ಶನ; ಕಾರ್ಯಕ್ರಮದ ವಿರುದ್ಧ ನೆಟ್ಟಿಗರು ಗರಂ


Team Udayavani, Aug 2, 2023, 1:52 PM IST

AGT: ಬಟ್ಟೆ ಹಾಕದೆ ವೇದಿಕೆ ಮೇಲೆ ಪ್ರತಿಭೆ ಪ್ರದರ್ಶನ; ಕಾರ್ಯಕ್ರಮದ ವಿರುದ್ಧ ನೆಟ್ಟಿಗರು ಗರಂ

ವಾಷಿಂಗ್ಟನ್:‌  ರಿಯಾಲಿಟಿ ಶೋಗಳಲ್ಲಿ ನಾನಾ ಬಗೆಯ ಕಾರ್ಯಕ್ರಮಗಳಿರುತ್ತವೆ. ಎಷ್ಟೋ ಸಲಿ ಕುಟುಂಬ ಸಮೇತ ನೋಡುವ ಕಾರ್ಯಕ್ರಮದಲ್ಲಿ ಇಲ್ಲಸಲ್ಲದ ಡಬಲ್‌ ಮೀನಿಂಗ್‌ ಡೈಲಾಗ್ಸ್‌ ಹಾಗೂ ಇತರ ಕೆಲ ದೃಶ್ಯಗಳು ಬರುತ್ತವೆ. ಇದು ವೀಕ್ಷಕರಿಗೆ ಮುಜುಗರವನ್ನು ತರುತ್ತದೆ.

ಇಂಥದ್ದೇ ಒಂದು ಸನ್ನಿವೇಶ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ʼಅಮರಿಕಾಸ್‌ ಗಾಟ್‌ ಟ್ಯಾಲೆಂಟ್‌ʼ(America’s Got Talent) ಕಾರ್ಯಕ್ರಮದಲ್ಲಿ ನಡೆದಿದೆ.

ʼಅಮರಿಕಾಸ್‌ ಗಾಟ್‌ ಟ್ಯಾಲೆಂಟ್‌ʼ ಪ್ರತಿಭೆ ಪ್ರದರ್ಶನದ ಕಾರ್ಯಕ್ರಮವಾಗಿದೆ. ಸದ್ಯ ಇದರ 18ನೇ ಸೀಸನ್‌ ನ 9ನೇ ಸಂಚಿಕೆಯಲ್ಲಿ ನಡೆದ ಒಂದು ಪ್ರತಿಭಾ ಪ್ರದರ್ಶನದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಬೊಂಬಾ ಸರ್ಕಸ್ʼ ಎನ್ನುವ ಇಸ್ರೇಲ್‌ ನ ತಂಡ ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಪ್ರದರ್ಶನ ನೀಡಲು ಬಂದಿದ್ದಾರೆ. ಇದೊಂದು ಪ್ರಕಾರ ಸರ್ಕಸ್‌ ನ್ನೇ ವಿಭಿನ್ನವಾಗಿ ನೀಡುವ ಕಾಮಿಕ್‌ ಶೋ ಆಗಿದೆ. ಯಾವ ಮಾತಿಲ್ಲದೆ, ಅಭಿನಯದ ಮೂಲಕವೇ ಹಾಸ್ಯವಾಗಿ ನೀಡುವ ಪ್ರದರ್ಶನ ನೀಡುವುದು ಈ ತಂಡದ ಕಲಾ ಪ್ರಕಾರವಾಗಿದೆ.

ʼಅಮರಿಕಾಸ್‌ ಗಾಟ್‌ ಟ್ಯಾಲೆಂಟ್‌ʼ ವೇದಿಕೆಯಲ್ಲಿ ಅಡಿಷನ್‌ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಬೆತ್ತಲಾಗಿ ಬಂದು ತಮ್ಮ‌ ಕಲಾ ಪ್ರದರ್ಶನವನ್ನು ತೋರಿಸಿದ್ದಾರೆ.

ದೇಹದ ಮೇಲೆ ಯಾವ ಬಟ್ಟೆಯೂ ಇಲ್ಲದೆ, ಖಾಸಗಿ ಅಂಗಕ್ಕೆ ಒಂದು ಟೇಬಲ್‌ ಟೆನ್ನಿಸ್‌ ಆಡುವ ಬ್ಯಾಟ್‌ ಅಡ್ಡ ಹಿಡಿದುಕೊಂಡು ಮೂವರು ಪುರುಷರು ವೇದಿಕೆ ಮೇಲೆ ಬಂದಿದ್ದಾರೆ. ಖಾಸಗಿ ಅಂಗದಿಂದ  ಬ್ಯಾಟ್‌ ತೆಗೆದು, ಮತ್ತೊಬ್ಬನ ಬ್ಯಾಟ್‌ ಖಾಸಗಿ ಅಂಗಕ್ಕೆ ಇಡುವ ಹಾಗೆ ತಮಾಷೆಯ ರೀತಿಯಲ್ಲಿ ತನ್ನ ಪ್ರದರ್ಶನವನ್ನು ನೀಡಿದ್ದಾರೆ. ನೋಡುಗರಿಗೆ ಇದು ಮೊದಲು ಅಸಹ್ಯ ಅನ್ನಿಸಿದೆ. ಆ ಬಳಿಕ ನಗು ಬಂದಿದೆ.

ನಾಲ್ವರು ತೀರ್ಪುಗಾರರು ಇವರ ಈ ಕಲಾ ಪ್ರದರ್ಶನವನ್ನು ನೋಡಿ ʼಎಸ್‌ʼ ಎಂದು ಹೇಳಿ ಮುಂದಿನ ಸುತ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರದರ್ಶನ ಬಳಿಕ ಬಟ್ಟೆ ಹಾಕಿಕೊಂಡು ಬಂದು ತೀರ್ಪುಗಾರರಿಗೆ ಧನ್ಯವಾದ ಹೇಳಿದ್ದಾರೆ.

ನೆಟ್ಟಿಗರ ಆಕ್ರೋಶ:  ಬಹುತೇಕವಾಗಿ ಕುಟುಂಬ ಸಮೇತವಾಗಿ ನೋಡುವ ʼಅಮರಿಕಾಸ್‌ ಗಾಟ್‌ ಟ್ಯಾಲೆಂಟ್‌ʼ ಕಾರ್ಯಕ್ರಮದ ಈ ಪ್ರದರ್ಶನವನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇಂಥದ್ದನ್ನು ಟಿವಿಯಲ್ಲಿ ಪ್ರಸಾರ ಮಾಡಬಾರದು, ಈ ದಿನಗಳಲ್ಲಿ ಎಲ್ಲವೂ ತುಂಬಾ ಅಸಹ್ಯಕರವಾಗಿದೆ, ಯಾರಿಗೂ ಸ್ವಾಭಿಮಾನವಿಲ್ಲ!” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ಫ್ಯಾಮಿಲಿ ಕೂತು ನೋಡುವ ಕಾರ್ಯಕ್ರಮವಲ್ಲ”  ಎಂದು ಮತ್ತೊಬ್ಬರು ಹೇಳಿದ್ದಾರೆ. “ಇದನ್ನು ಪ್ರಸಾರ ಮಾಡಲು ಅನುಮತಿ ನೀಡಬಾರದಿತ್ತು. ನನಗಿದು ನಿಜಕ್ಕೂ ಅತಿರೇಕ ಹಾಗೂ ಅಸಹ್ಯವಾಗಿ ಕಂಡಿತು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. “ಇದು ನಮ್ಮ ಸಮಾಜದಲ್ಲಿ  ನಡೆಯುತ್ತಿರುವ ತಪ್ಪು, ಇತ್ತೀಚಿನ ದಿನಗಳಲ್ಲಿ ಟಿವಿ ಕಾರ್ಯಕ್ರಮಗಳು ಅಸಹ್ಯವಾಗಿ ಕಾಣುತ್ತಿದೆ. ಇದು ಪ್ರತಿಭೆಯಲ್ಲ, ನೋಡಲು ಬಂದ ಪ್ರೇಕ್ಷಕರಲ್ಲಿ ಮಕ್ಕಳಿದ್ದಾರೆ” ಎಂದು ಆಕ್ರೋಶವಾಗಿ ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಅಮೇರಿಕಾಸ್ ಗಾಟ್ ಟ್ಯಾಲೆಂಟ್‌ನ ಅಂತಿಮ ಆಡಿಷನ್ ಎಪಿಸೋಡ್ ಮುಂದಿನ ವಾರ (ಆಗಸ್ಟ್ 8 ರಂದು)  ಪ್ರಸಾರವಾಗಲಿದೆ. ಆ ಬಳಿಕದ ಆರು ವಾರಗಳ ಲೈವ್ ಶೋಗಳು ಆಗಸ್ಟ್ 22 ರಿಂದ ಪ್ರಾರಂಭವಾಗಲಿದೆ.

 

View this post on Instagram

 

A post shared by America’s Got Talent – AGT (@agt)

ಟಾಪ್ ನ್ಯೂಸ್

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.