ದೇಹಕ್ಕೆ ಬಡತನ ಇದೆ; ಇಚ್ಛಾಶಕ್ತಿಗಲ್ಲ ! : ಇದು ಜೋಹಾನ್ಸ್‌ ಬರ್ಗ್‌ನ ಬೆಕೆಜೆಲಾರ ಕತೆ


Team Udayavani, Apr 14, 2020, 1:52 AM IST

ದೇಹಕ್ಕೆ ಬಡತನ ಇದೆ; ಇಚ್ಛಾಶಕ್ತಿಗಲ್ಲ ! : ಇದು ಜೋಹಾನ್ಸ್‌ ಬರ್ಗ್‌ನ ಬೆಕೆಜೆಲಾರ ಕತೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಜೋಹಾನ್ಸ್‌ ಬರ್ಗ್‌: ಲಾಕ್‌ ಡೌನ್‌ ಪರಿಣಾಮ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸುಂದರಿಯರ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ವಾಸಸ್ಥಾನದ ಸುತ್ತಲೂ ದೊಡ್ಡ ಚೀಲಗಳು, ಕಾಗದಗಳು, ಪ್ಲಾಸ್ಟಿಕ್‌ಗಳು ಕ್ಯಾನ್‌ಗಳು – ಸುಮ್ಮನೆ ಯೋಚಿಸುತ್ತಿದ್ದಾರೆ. ಮಾತಿಗೆ ಸಿಕ್ಕವರ ಬಳಿ ಲಾಕ್ಡೌನ್‌ ನನ್ನನ್ನು ಬಹಳಷ್ಟು ವಿಷಯಗಳಲ್ಲಿ ಕಾಡಿದೆ ಎನ್ನುತ್ತಾ ಮಾತು ಶುರು ಹಚ್ಚಿಕೊಳ್ಳುತ್ತಾರೆ. ತಾವು ಪಡೆಯುವ ಅಲ್ಪ ಹಣದಿಂದ ನನ್ನ ಮತ್ತು ಮಕ್ಕಳ ಊಟಕ್ಕೆ ನೆರವಾಗುತ್ತಿತ್ತು. ಈಗ ಎಲ್ಲವೂ ಸ್ತಬ್ದವಾಗಿ ಹಸಿವಿನಿಂದಲೇ ಮಲಗುತ್ತಿದ್ದೇವೆ ಎನ್ನುತ್ತಾರೆ. ಇವರು ಜೋಹಾನ್ಸ್‌ ಬರ್ಗ್‌ನಲ್ಲಿ ತ್ಯಾಜ್ಯ ಆಯ್ದುಕೊಳ್ಳುವವರು. (ಈ ಉದ್ದೇಶಕ್ಕಾಗಿ ಅವರನ್ನ ಸುಂದರಗಾರ್ತಿ ಎಂದು ಉಲ್ಲೇಖೀಸಲಾಗಿದೆ.)

ಆಗಿದ್ದೇನು?
ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾ. 27ರಂದು ಆಫ್ರಿಕಾ ಸರಕಾರ ವಿಧಿಸಿದ 3 ವಾರಗಳ ಲಾಕ್‌ಡೌನ್‌ನಿಂದಾಗಿ ಎನ್‌ಕ್ಯೂಬ್‌ ಅವರಿಗೆ ತಮ್ಮ ಕಾಯಕ ಮಾಡಲು ಸಾಧ್ಯವಾಗುತ್ತಿಲ್ಲ. ತನ್ನ 20 ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬೀದಿಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.

ತ್ಯಾಜ್ಯ ನಿರ್ವಹಣೆ ಅತ್ಯಗತ್ಯ ಸೇವೆಯೆಂದು ಘೋಷಿಸಿದ್ದರೂ, ತ್ಯಾಜ್ಯ ಮರುಬಳಕೆ ಕ್ಷೇತ್ರ ಆ ಸಾಲಿಗೆ ಸೇರುವುದಿಲ್ಲ. ಹಾಗಂತ ಅವರು ಕೋವಿಡ್ ಸೋಂಕಿಗೆ ಹೆದರುತ್ತಿಲ್ಲವೇ ಎಂದರೆ ಖಂಡಿತಾ ಹೆದರುತ್ತಾರೆ. ಈ ವಿಷಯವನ್ನು ಸ್ವತಃ ಎನ್‌ಕ್ಯೂಬ್‌ ಒಪ್ಪಿಕೊಂಡಿದ್ದಾಳೆ. ಆದರೆ ಈ ಪರಿಸ್ಥಿತಿಗಳಲ್ಲಿ ತನ್ನ ಕುಟುಂಬವನ್ನು ಪೋಷಿಸುವುದು ಅವರ ತುಡಿತ.

ಕೆಲಸ ಏನು?
ಈ ಎನ್‌ಕ್ಯೂಬ್‌ನಂತಹ ಕಾರ್ಮಿಕರಿಗೆ ವೇತನ ಇಲ್ಲ. ಬದಲಾಗಿ ಅವರು ಸಂಗ್ರಹಿಸುವ ಕಸದ ಮೊತ್ತಕ್ಕೆ ಸಂಬಳ ಪಡೆಯುತ್ತಾರೆ, ಸಾಮಾನ್ಯವಾಗಿ ದಿನಕ್ಕೆ ಸುಮಾರು 70 ದಕ್ಷಿಣ ಆಫ್ರಿಕಾದ ರಾಂಡ್‌ ( 3.85 ಡಾಲರ್‌) ಪಡೆಯುತ್ತಾರೆ.

ಇವರ ಕೆಲಸ ಸಣ್ಣದಲ್ಲ
ಕೌನ್ಸಿಲ್‌ ಫಾರ್‌ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ ನ 2016 ರ ವರದಿ ಪ್ರಕಾರ, ದಕ್ಷಿಣ ಆಫ್ರಿಕಾದ ಶೇ. 80ರಿಂದ 90 ರಷ್ಟು ಪ್ಯಾಕೇಜಿಂಗ್‌ ಮತ್ತು ಕಾಗದವನ್ನು ಮರುಬಳಸಲಾಗುತ್ತದೆ. ಈ ಅನೌಪಚಾರಿಕ ವಲಯವು ವಾರ್ಷಿಕವಾಗಿ 750 ಮಿಲಿಯನ್‌ ರಾಂಡ್‌ (2 ಮಿಲಿಯನ್‌ ಡಾಲರ್‌) ವರೆಗೆ ವಿವಿಧ ಮೂಲಗಳಿಂದ ಉಳಿಸುತ್ತದೆ.

ಬೆಜೆಕೆಲಾ ಎಂದರೇನು ಗೊತ್ತಾ?
ದಕ್ಷಿಣ ಆಫ್ರಿಕಾದಲ್ಲಿ 60 ರಿಂದ 90 ಸಾವಿರ ಮಂದಿ ತ್ಯಾಜ್ಯ ಸಂಗ್ರಹಕಾರರಿದ್ದಾರೆ. ಜೋಹಾನ್ಸ್‌ ಬರ್ಗ್‌ ನಲ್ಲಿನ ಸುಮಾರು 250 ತ್ಯಾಜ್ಯ ತೆಗೆಯುವವರಲ್ಲಿ ಎನ್‌ಕ್ಯೂಬ್‌ ಒಬ್ಬರು. ಈ ಸಮುದಾಯವನ್ನು ಬೆಕೆಜೆಲಾ ಎನ್ನಲಾಗುತ್ತದೆ. ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಲ್ಲಿ ಒಂದಾದ “ಇಸಿಝುಲು’ವಿನಲ್ಲಿ ಬೆಕೆಜೆಲಾ ಎಂದರೆ “ಸಹಿಸಿಕೊಳ್ಳುವುದು’ ಅಥವಾ “ಸತತವಾಗಿ ಪ್ರಯತ್ನಿಸುವುದು” ಎಂದರ್ಥ.

ಬಡತನ ಇದೆ
ವಿಶ್ವಬ್ಯಾಂಕ್‌ ಪ್ರಕಾರ, 1994ರಲ್ಲಿ ವರ್ಣಭೇದ ನೀತಿಯ ಬಳಿಕ ದಕ್ಷಿಣ ಆಫ್ರಿಕಾ ವಿಶ್ವದ ಅತ್ಯಂತ ಅಸಮಾನತೆಯ ದೇಶ. ದೇಶದ ಅರ್ಧದಷ್ಟು ಜನಸಂಖ್ಯೆ ಇನ್ನೂ ಬಡತನ ರೇಖೆಗಿಂತ ಕೆಳಗಿದೆ. ಅಂದರೆ ದೇಶದ ಬಹುಪಾಲು ಸಂಪತ್ತು ಇನ್ನೂ ಕೆಲವೇ ಗಣ್ಯರ ಕೈಯಲ್ಲಿದೆ. ಇದೀಗ ಇವರ ಬೆಂಬಲಕ್ಕೆ ಜೋಹಾನ್ಸ್‌ ಬರ್ಗ್‌ನ ವಿಟ್ಸ್ ವಿ ವಿ ಉಪನ್ಯಾಸಕರು ನಿಂತಿದ್ದಾರೆ.

ಹಸಿವಿನಿಂದ ಬಳಲಿದರೆ ಕೋವಿಡ್‌ ಸೋಂಕು ಸುಲಭವಾಗಿ ಕಾಣಿಸಿಕೊಳ್ಳುವ ಅಪಾಯ ಇದೆ. ಹಸಿವು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇವರಲ್ಲಿ ದೇಹಕ್ಕೆ ಬಡತನ ಇದೆ. ಆದರೆ ಇಚ್ಛಾಶಕ್ತಿಗಲ್ಲ. ತಮ್ಮ ಹಸಿವನ್ನು ದೂರ ಮಾಡಲು ಅವರಿಗೆ ಕೆಲಸ ಬೇಕು.

ಆದರೆ ಕಾನೂನಿಂದ ಅವರನ್ನು ರಕ್ಷಿಸಲು ಅವರಿಗೆ ಅಗತ್ಯ ಸೇವೆಗಳ ಸಾಲಿಗೆ ಇದನ್ನೂ ಸೇರಿಸಬೇಕು.  ಪುರಸಭೆಗಳು ಇವರಿಗೆ ಮಾಸ್ಕ್ ಮತ್ತು ಕೈಗವಸುಗಳನ್ನು ಒದಗಿಸಬೇಕು ಮತ್ತು ಅವರ ಸಮುದಾಯಗಳಿಗೆ ಸ್ಯಾನಿಟೈಸರ್‌ ಮತ್ತು ಕೈ ತೊಳೆಯುವ ವ್ಯವಸ್ಥೆಗಳನ್ನು ಮಾಡಬೇಕು ಎಂಬ ಕೂಗು ದಟ್ಟವಾಗಿದೆ.

– ಕಾರ್ತಿಕ್ ಅಮೈ

ಟಾಪ್ ನ್ಯೂಸ್

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.