ಚೀನ ಮತ್ತೆ ಸಮರಾಭ್ಯಾಸ; ಸೇನೆಯ ವಿವಿಧ ಘಟಕಗಳಿಂದ ಸತತ 11 ಗಂಟೆ ಅಭ್ಯಾಸ
Team Udayavani, Jul 18, 2017, 3:45 AM IST
ಬೀಜಿಂಗ್/ಹೊಸದಿಲ್ಲಿ: ಸಿಕ್ಕಿಂ ಗಡಿ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರ ನಡುವೆಯೇ ಚೀನ ಟಿಬೆಟ್‌ನಲ್ಲಿ ನಿರಂತರ 11 ಗಂಟೆಗಳ ಕಾಲ ಸಮರಾಭ್ಯಾಸ ನಡೆಸಿದೆ ಎಂದು ಚೀನ ಸೆಂಟ್ರಲ್ ಟಿಲಿವಿಷನ್ (ಸಿಸಿಟಿವಿ) ವರದಿ ಮಾಡಿದೆ. ಶುಕ್ರವಾರ ಸಮರಾಭ್ಯಾಸ ನಡೆಸಿರುವು ದಾಗಿ ಹೇಳಿರುವ ಸುದ್ದಿವಾಹಿನಿ ನಿಖವಾಗಿ ಯಾವ ಸಮಯದಲ್ಲಿ ನಡೆಸಿದೆ ಎಂದು ಹೇಳಿಲ್ಲ.
ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನೈರುತ್ಯ ಚೀನ ಭಾಗದಲ್ಲಿ ಶತ್ರುಗಳ ಯುದ್ಧ ವಿಮಾನಗಳನ್ನು, ಟ್ಯಾಂಕ್‌ಗಳನ್ನು ಹೊಡೆದುರು ಳಿಸುವ ಕಾರ್ಯಾಚರಣೆ ಹೇಗಿರಬೇಕು ಎನ್ನು ವುದರ ಅಭ್ಯಾಸ ನಡೆಸಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ. ಸಮರಾಭ್ಯಾಸದಲ್ಲಿ ಆರ್ಮಿಯ ಬಹುತೇಕ ವಿಭಾಗಗಳೆಲ್ಲವೂ ಪಾಲ್ಗೊಂಡಿದ್ದವು ಎಂದು ಚೀನ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಕೂಡ ವರದಿ ಮಾಡಿದೆ.
ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿ ಮೊನ್ನೆ ಮೊನ್ನೆಯಷ್ಟೇ “ಭಾರತ ಟಿಬೆಟ್ ಕಾರ್ಡ್ ಬಳಸಿದರೆ ಗಂಭೀರ ಸ್ಥಿತಿ ಎದುರಿಸಬೇಕಾದೀತು’ ಎಂದು ಎಚ್ಚರಿಸಿದ್ದ ಚೀನ, ಇದೀಗ ಟಿಬೆಟ್ ಗಡಿ ಭಾಗದಲ್ಲಿ ಸಮರಾಭ್ಯಾಸ ನಡೆಸಿ ಭಾರತಕ್ಕೆ ಪರೋಕ್ಷವಾಗಿ ಚಾಟಿ ಬೀಸಿದೆ. “ಸಿಕ್ಕಿಂ ಗಡಿಯಿಂದ ಭಾರತ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ಮಾತುಕತೆಗೆ ಬರಲಿ’ ಎಂದಿದ್ದ ಚೀನ ಇದೀಗ ಈ ಮೂಲಕವೂ ಬೆದರಿಸಲು ಮುಂದಾಗಿದೆ.
ಚೀನ ಹಸ್ತಕ್ಷೇಪ:
ಸಿಂಗ್‌ಗೆ ಮಮತಾ ಪತ್ರ
ಭಾರತ ಹಾಗೂ ಚೀನ ನಡುವಿನ ಬಿಕ್ಕಟ್ಟು ಈಗ ಗಡಿಗೆ ಹತ್ತಿರದ ರಾಜ್ಯಗಳಲ್ಲಿ ಆತಂಕ ಮೂಡಿಸಿದೆ. ಜಮ್ಮು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಬಳಿಕ ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ವಸ್ತುಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದು, ರಾಜ್ಯದಲ್ಲಿ ಚೀನ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಈ ಕುರಿತು ಪತ್ರ ಬರೆದಿರುವ ಮಮತಾ, ರಾಜ್ಯದಲ್ಲೂ ಚೀನ ಮೂಗು ತೂರಿಸಲು ಯತ್ನಿಸಿದೆ. ಕೇಂದ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.