ಉಕ್ರೇನ್ ವಿರುದ್ಧ ಸೇಡು ; ತನ್ನದೇ ನಗರದ ಮೇಲೆ ಬಾಂಬ್ ಪ್ರಯೋಗಿಸಿದ ರಷ್ಯಾ !
Team Udayavani, Apr 21, 2023, 9:01 PM IST
ಮಾಸ್ಕೋ : ರಷ್ಯಾದ ಯುದ್ಧವಿಮಾನವೊಂದು ಉದ್ದೇಶಪೂರ್ವಕವಾಗಿ ಹಾಕಿದ ಬಾಂಬ್ ಉಕ್ರೇನ್‌ನ ಗಡಿಯ ಸಮೀಪವಿರುವ ನಗರದಲ್ಲಿ ಪ್ರಬಲ ಸ್ಫೋಟಕ್ಕೆ ಕಾರಣವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಸ್ಥಳೀಯರನ್ನು ಭಯಭೀತಗೊಳಿಸಿದೆ ಎಂದು ರಷ್ಯಾದ ಮಿಲಿಟರಿ ಒಪ್ಪಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ಉಕ್ರೇನ್‌ನಲ್ಲಿ ರಷ್ಯಾದ ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ, ರಷ್ಯಾ-ಉಕ್ರೇನ್ ಗಡಿಯ ಪೂರ್ವಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ 340,000 ಜನರು ವಾಸಿಸುವ ನಗರವಾದ ಬೆಲ್ಗೊರೊಡ್ ನಿಯಮಿತ ಡ್ರೋನ್ ದಾಳಿಗೆ ಒಳಗಾಗಿದೆ.
ಹಿಂದಿನ ದಾಳಿಗಳ ಕುರಿತು ಉಕ್ರೇನಿಯನ್ ಮಿಲಿಟರಿಯ ಮೇಲೆ ದೂಷಿಸಲಾಗಿತ್ತು, ಆದರೆ ಈ ದಾಳಿಯ ಹೊಣೆಗಾರಿಕೆಯನ್ನು ನೇರವಾಗಿ ಹೇಳಿಕೊಳ್ಳಲಿಲ್ಲ. ತಡರಾತ್ರಿಯ ಸ್ಫೋಟವು ಬೆಲ್ಗೊರೊಡ್ ನಿವಾಸಿಗಳು ಹಿಂದೆಂದೂ ಕಂಡಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿತ್ತು. ಪ್ರತ್ಯಕ್ಷದರ್ಶಿಗಳು ಸ್ಪೋಟದ ಶಬ್ದವನ್ನು ಕೇಳಿದರು. ಸ್ಫೋಟವು ಹತ್ತಿರದ ಅಪಾರ್ಟ್ಮೆಂಟ್ ಕಟ್ಟಡಗಳನ್ನು ನಡುಗಿಸಿತು ಮತ್ತು ಅವುಗಳ ಕಿಟಕಿಗಳ ಗಾಜುಗಳು ಒಡೆಯಲು ಕಾರಣವಾಯಿತು.
ರಷ್ಯಾದ ರಕ್ಷಣಾ ಸಚಿವಾಲಯವು ಆಕಸ್ಮಿಕವಾಗಿ ತನ್ನದೇ ಶಸ್ತ್ರಾಸ್ತ್ರವನ್ನು ಪ್ರಯೋಗ ಮಾಡಲಾಗಿದೆ ಎಂದು ಒಪ್ಪಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.