ವಿಚ್ಛೇದನ ಸಿಕ್ಕ ಖುಷಿಯಲ್ಲಿ ಸಾಹಸ; ಮುರಿಯಿತು ಬೆನ್ನುಮೂಳೆ, ಕತ್ತು!
Team Udayavani, May 9, 2023, 7:50 AM IST
ರಯೋ ಡಿ ಜನೈರೊ: ಬ್ರೆಜಿಲ್ನಲ್ಲಿ 22 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನ ಸಿಕ್ಕಿದ ಖುಷಿಯಲ್ಲಿ ಸಾಹಸ ಮಾಡಲು ಹೋಗಿದ್ದಾರೆ. ಪರಿಣಾಮ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದಾರೆ.
ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಅವರಿಗೀಗ ತಪ್ಪಿನ ಅರಿವಾಗಿದೆ. ಮೊದಲಿನಂತೆ ಹೇಗೆಹೇಗೋ ಬದುಕುವ ಯೋಚನೆಗಳಿಂದ ಹೊರಬಂದಿದ್ದೇನೆಂದು ರಫಾಯೆಲ್ ಟೊಸ್ಟಾ ಹೇಳಿದ್ದಾರೆ.
ಈ ಘಟನೆ ನಡೆದಿದ್ದು ಫೆ.11ರಂದು, ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ.
ಆಗಿದ್ದೇನು?: ಪತ್ನಿಯಿಂದ ಅವರು ವಿಚ್ಛೇದನ ಪಡೆದಿದ್ದರು. ಅದೇ ಖುಷಿಯಲ್ಲಿ ತಮ್ಮ ಸಂಬಂಧಿಕನೊಂದಿಗೆ ಕ್ಯಾಂಪ್ ಮ್ಯಾಗ್ರೊದಲ್ಲಿರುವ ಲಗೊವಾ ಅಜುಲ್ ಎಂಬ ಜಾಗಕ್ಕೆ ತೆರಳಿದ್ದರು. ಅಲ್ಲಿ ಎರಡೂ ಹಿಮ್ಮಡಿಗಳಿಗೆ ಹಗ್ಗ ಕಟ್ಟಿಕೊಂಡು ಹಾರಿದ್ದರು. ಹತ್ತಿರ ಹತ್ತಿರ 70 ಅಡಿ ಕೆಳಕ್ಕೆ ಹೋಗಿದ್ದಾಗ ಕಾಲಿಗೆ ಕಟ್ಟಿದ್ದ ಹಗ್ಗ ಕಿತ್ತುಹೋಯಿತು. ಕಡೆಗೆ ಅಲ್ಲೇ ಇದ್ದ ಕೊಳಕ್ಕೆ ಬಿದ್ದರು. ಪರಿಣಾಮ ಬೆನ್ನುಮೂಳೆಯ ಕೆಳಭಾಗ, ಕತ್ತನ್ನು ಮುರಿದುಕೊಂಡರು. ಅಲ್ಲೇ ಇದ್ದ ಜನರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಬಚಾವ್ ಮಾಡಿದರು. ವಾಸ್ತವವಾಗಿ ಅವರು ಕಾಲಿಗೆ ಹಗ್ಗ ಕಟ್ಟಿಕೊಂಡು ನೇತಾಡಲು ಹೋಗಿದ್ದು, ಆದರೆ ಆಗಿದ್ದೇ ಬೇರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.