Donkeys: ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ 59 ಲಕ್ಷ ಕ್ಕೇರಿಕೆ: ಆರ್ಥಿಕ ಸಮೀಕ್ಷೆ ವರದಿ
Team Udayavani, Jun 13, 2024, 7:30 AM IST
ಇಸ್ಲಾಮಾಬಾದ್: ಕೃಷಿ ಪ್ರಧಾನವಾಗಿರುವ ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ 2023-24ರ ಆರ್ಥಿಕ ವರ್ಷದಲ್ಲಿ ಶೇ.1.72ರಷ್ಟು ಹೆಚ್ಚಳವಾಗಿದ್ದು, 59 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಆರ್ಥಿಕ ಸಮೀಕ್ಷೆ(ಪಿಇಎಸ್) ವರದಿ ಹೇಳಿದೆ.
ದಾಖಲೆಗಳ ಪ್ರಕಾರ 2019-20ರಲ್ಲಿ 55 ಲಕ್ಷ, 2020-21ರಲ್ಲಿ 56 ಲಕ್ಷ, 2021-22ರಲ್ಲಿ 57 ಲಕ್ಷ, 2022-23ರಲ್ಲಿ 58 ಲಕ್ಷ ಕತ್ತೆಗಳಿದ್ದರೆ, 2023-24ರಲ್ಲಿ ಇದು 59 ಲಕ್ಷಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಕುದುರೆ ಹಾಗೂ ಹೇಸರಗತ್ತೆಗಳ ಸಂಖ್ಯೆ 5 ವರ್ಷಗಳಿಂದ ಕೊಂಚವೂ ಬದಲಾವಣೆ ಕಂಡಿಲ್ಲ ಎಂದಿದೆ ವರದಿ.
ಪಾಕ್ ಜಗತ್ತಿನಲ್ಲೇ ಅತಿ ಹೆಚ್ಚು ಕತ್ತೆಗಳನ್ನು ಹೊಂದಿದ್ದು, ಚೀನಾಗೆ ಕತ್ತೆಗಳನ್ನು ರಫ್ತು ಮಾಡುವ ಮೂಲಕ ಗಣನೀಯ ಲಾಭ ಗಳಿಸುತ್ತಿದೆ. ಇದೇ ವೇಳೆ, 2023-24ರಲ್ಲಿ ಜಿಡಿಪಿ ಪ್ರಗತಿ ದರ ಶೇ.3.5 ಎಂದು ಅಂದಾಜಿಸಲಾಗಿತ್ತಾದರೂ, ಅದನ್ನು ಸಾಧಿಸಲು ಪಾಕ್‌ಗೆ ಸಾಧ್ಯವಾಗಿಲ್ಲ. ಜಿಡಿಪಿ ಪ್ರಗತಿ ದರ ಶೇ.2.38ರಷ್ಟು ಮಾತ್ರವೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.