New York ವಲಸಿಗರ ಹೊರಕಳಿಸಲು ನ್ಯೂಯಾರ್ಕ್ ನಗರದಿಂದ ವಿನೂತನ ಉಪಾಯ!
Team Udayavani, Oct 30, 2023, 11:05 PM IST
ನ್ಯೂಯಾರ್ಕ್: ಭಾರತ ಅಕ್ರಮ ವಲಸಿಗರಿಂದ ತತ್ತರಿಸಿದೆ. ಬಾಂಗ್ಲಾ, ಪಾಕ್, ಇತರ ದೇಶಗಳಿಂದ ದೇಶ ದೊಳಕ್ಕೆ ನುಗ್ಗುವುದು ಇತ್ತೀಚೆಗೆ ತುಸು ಕಡಿಮೆಯಾಗಿದೆ. ಇಂತಹದ್ದೇ ಸಮಸ್ಯೆ ಅಮೆರಿಕದ ನ್ಯೂಯಾರ್ಕ್ ನಗರಕ್ಕೂ ಇದೆ. ಆ ನಗರದಲ್ಲಿ ದಕ್ಷಿಣ ಗಡಿಭಾಗದಿಂದ ವಲಸೆ ಬರುವವರಿಗಾಗಿಯೇ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇದರ ನಿರ್ವಹಣೆ ದುಬಾರಿಯಾಗಿರುವುದರಿಂದ ನ್ಯೂಯಾರ್ಕ್ ಮಹಾನಗರ ಪಾಲಿಕೆ, ಒಂದು ಉಪಾಯ ಮಾಡಿದೆ.
ಆಶ್ರಯಗೃಹಗಳಿಂದ ಯಾರಾದರೂ ಹೊರ ಹೋಗಲು ಬಯಸಿದರೆ, ವಿಶ್ವದ ಯಾವುದೇ ನಗರಕ್ಕೂ ಅದು ಒಂದು ಕಡೆಯ ವಿಮಾನವೆಚ್ಚವನ್ನು ಭರಿಸಲಿದೆ. ಹೀಗೆಂದು ಮೇಯರ್ ಎರಿಕ್ ಆ್ಯಡಮ್ಸ್ ಘೋಷಣೆ ಮಾಡಿದ್ದಾರೆ.
ಈಗಾಗಲೇ ಒಬ್ಬ ವಲಸಿಗರಿಗಾಗಿ ದಿನಕ್ಕೆ 394 ಡಾಲರ್‌ಗಳನ್ನು (32,000 ರೂ.) ನ್ಯೂಯಾರ್ಕ್ ವೆಚ್ಚ ಮಾಡುತ್ತಿದೆ. ಈ ಖರ್ಚನ್ನು ತಾಳಲಾಗದೇ, ಇದಕ್ಕಿಂತ ಒಂದು ಬದಿಯ ಟಿಕೆಟ್ ವೆಚ್ಚವೆ ಕಡಿಮೆ ಎನಿಸಿ ಆ ನಗರ ಈ ತೀರ್ಮಾನ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಸತಿಗೃಹಗಳಲ್ಲಿ ಜಾಗವಿಲ್ಲವಾಗಿದೆ. ಅದಕ್ಕಾಗಿ ವಲಸಿಗರು ಒಂದು ತಿಂಗಳು ಮಾತ್ರ ಇರಬೇಕು, ಅವಧಿ ಮುಗಿದ ಕೂಡಲೇ ವಸತಿಗಾಗಿ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ನಿಯಮ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.