ಉಕ್ರೇನ್ ದಾಳಿಗೆ ರಷ್ಯಾ ಬಳಸಿರುವ ಶಸ್ತ್ರಗಳಿವು!
ರಾಕೆಟ್‌ಗಳು, ಕ್ಷಿಪಣಿಗಳು, ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳನ್ನು ಬಳಸಿದೆ ರಷ್ಯಾ ಸೇನೆ
Team Udayavani, Feb 28, 2022, 6:55 AM IST
ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಅದರ ವಿರುದ್ಧ ಅಂತಾರಾಷ್ಟ್ರೀಯ ಟೀಕೆಗಳೂ ತೀವ್ರಗೊಂಡಿವೆ. ನಾಗರಿಕರಿರುವ ಪ್ರದೇಶಗಳೆಂದೂ ನೋಡದೆ ರಷ್ಯಾ ಖಂಡಾಂತರ ಕ್ಷಿಪಣಿಗಳನ್ನು ಹಾರಿಬಿಡುತ್ತಿದೆ ಎಂದು ಕೆಲವರು ಕಿಡಿಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾ ಬಳಸುತ್ತಿರುವ ಶಸ್ತ್ರಾಸ್ತ್ರಗಳ ಕುರಿತು ಸಣ್ಣ ಮಾಹಿತಿ ಇಲ್ಲಿದೆ.
ಟಿಒಎಸ್-1: ಬೆಂಕಿಯುಗುಳುವ ರಾಕೆಟ್‌ಗಳನ್ನು ಉಡಾವಣೆ ಮಾಡಬಲ್ಲ ವ್ಯವಸ್ಥೆಯಿದು. ಇದರಿಂದ ಹೊಮ್ಮುವ ರಾಕೆಟ್‌ಗಳು ನೆಲಕ್ಕಪ್ಪಳಿಸಿದ ತಕ್ಷಣ ಆ ಜಾಗದಲ್ಲಿರುವ ವಸ್ತುಗಳು ಸುಟ್ಟು ಬೂದಿಯಾಗುತ್ತವೆ. ಇದನ್ನು ಈ ಹಿಂದೆ ಅಫ್ಘಾನಿಸ್ತಾನ, ಇತ್ತೀಚೆಗೆ ಸಿರಿಯಾದ ಮೇಲೆ ರಷ್ಯಾ ಬಳಸಿತ್ತು.
ಟಿ-72: ರಾಕೆಟ್‌ಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಹೊತ್ತೂಯ್ಯುವ ವಾಹನವಿದು. ಇದನ್ನು ಟಿ-27 ಟ್ಯಾಂಕ್ ಎನ್ನುತ್ತಾರೆ. ಇದೇ ಟ್ಯಾಂಕ್‌ನಲ್ಲಿ ಟಿಒಎಸ್-1 ಅನ್ನೂ ಇಟ್ಟುಕೊಳ್ಳಲಾಗಿದೆ.
ಬಿಎಂ-21: ಇದೂ ಕೂಡ ಹಲವು ರಾಕೆಟ್‌ಗಳನ್ನು ಉಡಾಯಿಸಬಲ್ಲ ವಾಹನ. ಇದನ್ನು ಉಕ್ರೇನಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ದಾಳಿ ಮಾಡಲು ರಷ್ಯಾ ಬಳಸಿದೆ.
ಉರಗನ್: ಇವೆರಡೂ ಕೂಡ ಬಹು ಮಾದರಿಯ ರಾಕೆಟ್‌ಗಳನ್ನು ಉಡಾಯಿಸಬಲ್ಲ ವಾಹನಗಳು. ಉಕ್ರೇನಿನ ಕೆಲಭಾಗಗಳ ಮೇಲೆ ರಾಕೆಟ್ ದಾಳಿಗೆ ಇದನ್ನು ಬಳಸಲಾಗಿದೆ ಎಂಬ ಅಂದಾಜಿದೆ.
ಬಿಎಂಪಿ3: ಶಸ್ತ್ರಾಸ್ತ್ರಸಜ್ಜಿತ ವಾಹನವಿದು. ಇದು ಸಾಂಪ್ರದಾಯಿಕವಾಗಿ ರಷ್ಯಾ ಭೂಸೇನೆ ಬಳಸುವ ವಾಹನ. ಇದು ಬಹುತೇಕ ಕಡೆ ಪತ್ತೆಯಾಗಿದೆ.
ಎಂಐ8, ಕೆಎ-52: ಇನ್ನೊಂದು ದೇಶದ ಮೇಲೆ ದಾಳಿ ಮಾಡುವಾಗ ವಾಯುಸೇನೆ ಸಕ್ರಿಯವಾಗಿರುತ್ತದೆ. ಸದ್ಯ ರಷ್ಯಾ ಸೇನೆ ಎಂಐ8, ಕೆಎ-52 ಹೆಲಿಕಾಪ್ಟರ್‌ಗಳನ್ನು ದಾಳಿಗೆ ಬಳಸಿದೆ. ಇವೂ ಸಾಂಪ್ರದಾಯಿಕ ಮಾದರಿಯವೇ ಆಗಿವೆ.
ಕ್ಯಾಲಿಬರ್: ಇದು ನಿರ್ದಿಷ್ಟ ಗುರಿಯೆಡೆಗೆ ವೇಗವಾಗಿ ಹೋಗಿ ಅಪ್ಪಳಿಸುವ ಕ್ಷಿಪಣಿ. ಇದನ್ನು ವಿಮಾನಗಳಿಂದ, ಹಡಗುಗಳಿಂದ, ಸಬ್‌ಮರಿನ್‌ಗಳಿಂದಲೂ ಉಡಾಯಿಸಬಹುದು. ಈ ಕ್ಷಿಪಣಿಗಳನ್ನು ಕೀವ್ ಮತ್ತು ಒಡೆಸ್ಸಾ ನಗರದ ಮೇಲೆ ರಷ್ಯಾ ಹಾರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.