ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್
Team Udayavani, Dec 3, 2021, 2:43 PM IST
ಜೋಹಾನ್ಸ್ ಬರ್ಗ್: ಕೋಪಗೊಂಡ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ನಡೆಸಿದ ಘಟನೆಯೊಂದು ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಶನಲ್ ಪಾರ್ಕ್ ನಲ್ಲಿ ಕಳೆದ ರವಿವಾರ ನಡೆದಿದೆ. ಸಲಗದ ದಾಳಿಗೆ ಬೆದರಿದ ಜನರು ಓಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ.
ಕ್ರೂಗರ್ ಪಾರ್ಕ್ ನ ಸೆಲಾಟಿ ಗೇಮ್ ರಿಸರ್ವ್ ನಲ್ಲಿ ಜನರು ಸಫಾರಿಗೆ ಹೊರಟಿದ್ದರು. ಗೈಡ್ ಗಳೊಂದಿಗೆ ಹೊರಟಿದ್ದ ಇವರ ವಾಹನದ ಮೇಲೆ ಆನೆಯೊಂದು ದಿಢೀರನೆ ದಾಳಿ ನಡೆಸಿದೆ.
ಸಫಾರಿ ಜೀಪನ್ನು 13 ಅಡಿ ಎತ್ತರದ ಆನೆ ಮಗುಚಿ ಹಾಕಿದ ದೃಶ್ಯವನ್ನು ಇಕೋಟ್ರೇನಿಂಗ್ ಗೈಡ್‌ಗಳು ಸೆರೆಹಿಡಿದಿದ್ದಾರೆ. ಆಕ್ರಮಣಕಾರಿ ಆನೆಯ ದಾಳಿಗೆ ಬೆದರಿದ ಗೈಡ್ ಗಳು ಮತ್ತು ಪ್ರವಾಸಿಗರು ಓಟಕ್ಕಿತ್ತಿದ್ದಾರೆ.
ಇದನ್ನೂ ಓದಿ:ನಥಿಂಗ್ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?
ಭಾನುವಾರದ ದಿನನಿತ್ಯದ ಪ್ರವಾಸದ ವೇಳೆ ಗೈಡ್ ಗಳು ಆನೆಗಳ ಹಿಂಡನ್ನು ಕಂಡಿದ್ದಾರೆ. ಆನೆ ‘ಮಸ್ತ್’ ನಲ್ಲಿತ್ತು ಅಂದರೆ ಇದು ಗಂಡು ಆನೆಗಳಲ್ಲಿ ಸಂಯೋಗದ ಅವಧಿಯಲ್ಲಿ ಕಂಡುಬರುವ ಲೈಂಗಿಕ ಆಕ್ರಮಣಶೀಲತೆಯ ಸ್ಥಿತಿ. ಮಸ್ತ್ ನಲ್ಲಿರುವ ಆನೆಗಳು ಮನುಷ್ಯರು ಮತ್ತು ಇತರ ಆನೆಗಳ ಕಡೆಗೆ ಅತ್ಯಂತ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ವರ್ತಿಸುತ್ತವೆ ಎಂದು ವರದಿಯಾಗಿದೆ.
Noble giant left them unharmed pic.twitter.com/DAk7yO0LU2
— WildLense® Eco Foundation ?? (@WildLense_India) November 30, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.