ಆನೆ ಹಿಂದೆ ಹೋದ ಯುವಕರ ಗುಂಪು : ಸಿಟ್ಟಿಗೆದ್ದ ಗಜರಾಜ ಏನು ಮಾಡಿದ ಗೊತ್ತಾ?
Team Udayavani, Mar 26, 2021, 12:51 PM IST
ನವದೆಹಲಿ : ಆನೆ ನಡೆದಿದ್ದೇ ದಾರಿ… ಆ ದಾರಿಗೆ ಒಂಚೂರು ತೊಂದರೆ ಕೊಟ್ರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಶ್ರೀಲಂಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಒಂದು ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಶೇರ್ ಆಗುತ್ತಿದೆ. ಹಾಗಾದ್ರೆ ಆ ಆನೆ ಪ್ರವಾಸಿಗರನ್ನು ಏನು ಮಾಡಿತು ಅಂದ್ರಾ.. ಮುಂದೆ ಓದಿ.
ಇತ್ತಿಚೆಗೆ ಕೆಲವು ಹುಡುಗರ ಗುಂಪು ಶ್ರೀಲಂಕಾದ ನ್ಯಾಷನಲ್ ಪಾರ್ಕ್ ಗೆ ಪ್ರವಾಸಕ್ಕೆಂದು ಹೋಗಿದ್ದಾರೆ. ಈ ವೇಳೆ ಆನೆಯೊಂದು ನಡೆದು ಹೋಗುವ ದಾರಿಯಲ್ಲೇ ಇವರು ಕೂಡ ಹೋಗಿದ್ದಾರೆ. ಆನೆ ಮುಂದೆ ಹೋಗ್ತಾ ಇದ್ರೆ ಅದನ್ನೇ ಹಿಂಬಾಲಿಸುತ್ತಾ ಈ ಹುಡುಗರ ಗುಂಪು ಕೂಡ ಹೋಗಿದೆ. ಈ ವೇಳೆ ಪ್ರವಾಸಿಗರ ಗುಂಪು ಜೋರಾಗಿ ಕಿರುಚುತ್ತ ಆನೆಯ ಹಿಂದೆಯೇ ಹೋಗಿದ್ದಾರೆ. ಒಂದಷ್ಟು ದೂರ ಹೋಗುವವರೆಗೆ ಸುಮ್ಮನಿದ್ದ ಗಜರಾಜ ಇವರ ಶಬ್ದ ಕೇಳಿ ಹಿಂದಿರುಗಿದೆ.
ತಕ್ಷಣ ಕಾರಿನಲ್ಲಿದ್ದ ಯುವಕರ ತಂಡ ಹಿಮ್ಮುಖವಾಗಿ ಕಾರನ್ನು ಓಡಿಸಿಕೊಂಡು ಬಂದಿದ್ದಾರೆ. ಆದ್ರೂ ಕೂಡ ಆನೆ ಅವರನ್ನೇ ಓಡಿಸಿಕೊಂಡು ಬಂದಿದೆ. ತಕ್ಷಣ ಕಾರು ಚಾಲಕ ತನ್ನ ಮಾರ್ಗವನ್ನು ಬದಲಾಯಿಸಿದ್ದಾನೆ. ಆ ನಂತರ ಆನೆಯು ಅಲ್ಲಿಯೇ ನಿಂತಿದೆ. ಒಂದಿಷ್ಟು ಹೆಚ್ಚು ಕಡಿಮೆ ಆಗಿದ್ದರೂ ಕೂಡ ಭಾರೀ ಪ್ರಮಾಣದ ಅನಾಹುತಕ್ಕೆ ಕಾರಣವಾಗುತ್ತಿತ್ತು.
ಈ ಘಟನೆಯ ವಿಡಿಯೋವನ್ನು ಅರಣ್ಯ ಸೇವೆಯಲ್ಲಿರುವ ಸುರೇಂದ್ರ ಮೆಹ್ರಾ ಎಂಬುವವರು ಶೇರ್ ಮಾಡಿದ್ದಾರೆ. ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದಿದ್ದು, ನೋಡಿ ಆನೆಯ ತಾಳ್ಮೆ ಎಷ್ಟಿರುತ್ತದೆ ಎಂದು. ನಾವೇನಾದರು ಅದರ ಬದುಕಿಗೆ ಅಡ್ಡ ಬಂದರೆ ಏನಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದಿದ್ದಾರೆ.
Just see the level of patience shown by the elephant ..
But, when you intrude into their life, they react …
Just that..#Elephant #GentleGiant #RespectWildlife#KeepSafeDistance
#ResponsibleTourism @susantananda3 @CentralIfs https://t.co/BpipIOuytz pic.twitter.com/eHRxL3MBPm— Surender Mehra IFS (@surenmehra) March 23, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.