ಆಮ್ಲಜನಕವಿಲ್ಲದೇ ಬದುಕೋ ಜೀವಿ! ; ವಿಜ್ಞಾನಿಗಳ ಇದುವರೆಗಿನ ನಂಬಿಕೆಯೇ ತಲೆಕೆಳಗು
Team Udayavani, Feb 27, 2020, 7:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜೆರುಸಲೇಮ್: ಇಸ್ರೇಲ್‌ನ ಟೆಲ್‌ಅವಿವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಪೂರ್ವ ಸಂಶೋಧನೆಯೊಂದನ್ನು ಮಾಡಿದ್ದಾರೆ. ಇದುವರೆಗೆ ಪ್ರಾಣಿಗಳು ಜೀವಂತವಾಗಿರಲು ಆಮ್ಲಜನಕವನ್ನು ಉಸಿರಾಡುವುದು ಅನಿವಾರ್ಯ ಎಂಬ ಸಿದ್ಧಾಂತ ಚಾಲ್ತಿಯಲ್ಲಿದೆ. ಈಗ ಆ ನಂಬಿಕೆಯನ್ನೇ ತಲೆಕೆಳಗು ಮಾಡುವಂತೆ, ಮೀನಿನ ಜಾತಿಗೆ ಸೇರಿದ ಅತಿಸಣ್ಣ, ಬರೀ 10 ಜೀವಕೋಶಗಳುಳ್ಳ ಪರಾಶ್ರಿತ ಜೀವಿಯೊಂದು ಆಮ್ಲಜನಕ ಉಸಿರಾಡದೇ ಬದುಕುತ್ತದೆ ಎಂದು ಗೊತ್ತಾಗಿದೆ. ವಿವಿ ಪ್ರೊಫೆಸರ್ ಡೊರೊಥಿ ಹಚನ್ ಇದನ್ನು ಬಹಿರಂಗಪಡಿಸಿದ್ದಾರೆ.
ಇದೊಂದು ಪರಾಶ್ರಿತ ಜೀವಿ. ಇದನ್ನು ಹೆನ್ನೆಗುಯ ಸಲ್ಮನಿಕೊಲ ಎಂದು ಹೆಸರಿಸಲಾಗಿದೆ. ಜೆಲ್ಲಿಫಿಶ್ (ಅತಿಸಣ್ಣ ಜಾತಿಯ ಮೀನು) ಅಥವಾ ಸಮುದ್ರದಲ್ಲಿರುವ ಕೋರಲ್‌ಗಳಿಗೆ ಸನಿಹದ ಸಂಬಂಧಿಯಾಗಿದೆ. ಮೀನುಗಳ ಒಳಭಾಗದಲ್ಲಿರುವ ಸಾಲ್ಮನ್ ಮಾಂಸಖಂಡಗಳಲ್ಲಿರುತ್ತದೆ.
ಇದು ಬೆಳೆದಂತೆ ಆಮ್ಲಜನಕವನ್ನು ಉಸಿರಾಡುವುದನ್ನೇ ನಿಲ್ಲಿಸುತ್ತದೆ. ಆದರೆ ಇದು ಶಕ್ತಿ ಪಡೆದುಕೊಳ್ಳುವುದಕ್ಕೆ ಯಾವ ಮಾರ್ಗ ಅನುಸರಿಸುತ್ತದೆ ಎಂದು ಗೊತ್ತಾಗಿಲ್ಲ. ಉಸಿರಾಡದೆಯೂ ಬದುಕಬಹುದು ಅಥವಾ ಆಮ್ಲಜನಕದ ಅಗತ್ಯವಿಲ್ಲದೆಯೂ ಜೀವಿಸಲು ಸಾಧ್ಯ ಎಂಬುದನ್ನು ಈ ಸಂಶೋಧನೆ ತೋರಿಸಿಕೊಟ್ಟಿದೆ.
ಶಕ್ತಿಗೆ ಏನು ಮಾಡುತ್ತದೆ?: ಆಮ್ಲಜನಕವನ್ನು ಬಳಸಿಕೊಳ್ಳುವುದೇ ಇಲ್ಲವಾದರೆ ಇದು ಶಕ್ತಿ ಗಳಿಸಲು ಏನು ಮಾಡುತ್ತದೆ? ವಿಜ್ಞಾನಿಗಳ ಊಹೆ ಪ್ರಕಾರ, ತಾನು ಆಶ್ರಯಿಸಿರುವ ಜೀವಿಯ ಜೀವಕೋಶದಿಂದ ಶಕ್ತಿ ಪಡೆಯಬಹುದು ಅಥವಾ ಉಸಿರಾಟ ಪದ್ಧತಿಯೇ ಬೇರೆಯಿರಬಹುದು.
ಆದರೆ ವಿಜ್ಞಾನಿಗಳು ಇದನ್ನು ಪತ್ತೆಹಚ್ಚಿದ್ದು ಮಾತ್ರ ಅಚಾನಕ್ಕಾಗಿ. ಪ್ರಾಣಿಗಳ ಜೀವಕೋಶದಲ್ಲಿ ಮೈಟೊಕಾಂಡ್ರಿಯ ಎಂಬ ಭಾಗವಿರುತ್ತದೆ. ಅದು ಆಮ್ಲಜನಕ ಹಿಡಿದಿಟ್ಟುಕೊಂಡು ಶಕ್ತಿ ಉತ್ಪಾದಿಸುತ್ತದೆ. ಅದೆ ಹೆನೆಗುಯದಲ್ಲಿ ಇಲ್ಲ ಎನ್ನುವುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.