![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 14, 2020, 9:42 PM IST
ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದಾಖಲುಗೊಂಡಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ ಹಿಮಾವೃತ ಈ ಪ್ರದೇಶದಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್ ದಾಖಲುಗೊಂಡಿದ್ದೇ ಅಧಿಕ ತಾಪಮಾನವಾಗಿತ್ತು. ಇದೀಗ 20.75 ಡಿಗ್ರಿ ಸೆಲ್ಷಿಯಸ್ ಅಂದರೆ 69.35 ಫ್ಯಾರನ್ ಹೀಟ್ ತಾಪಮಾನ ದಾಖಲುಗೊಂಡಿರುವುದು ವಿಜ್ಞಾನಿಗಳನ್ನು ಕಳವಳಕ್ಕೀಡುಮಾಡಿದೆ.
ಬ್ರಝಿಲ್ ವಿಜ್ಞಾನಿ ಕಾರ್ಲೋಸ್ ಚಾಫೆರ್ ಅವರು ಪ್ರತಿಕ್ರಿಯಿಸಿ, ‘ಇಷ್ಟು ಅಧಿಕ ತಾಪಮಾನವನ್ನು ಈ ಪ್ರದೇಶದಲ್ಲಿ ಹಿಂದೆಂದೂ ನಾವು ಕಂಡಿರಲಿಲ್ಲ’ ಎಂದಿದ್ದಾರೆ.
ಈ ಹಿಮಖಂಡದ ದ್ವೀಪ ಪ್ರದೇಶವೊಂದರಲ್ಲಿ ಇರುವ ನಿಗಾವಣೆ ಕೇಂದ್ರದಲ್ಲಿ ಫೆಬ್ರವರಿ 9ರಂದು ಈ ತಾಪಮಾನವನ್ನು ದಾಖಲುಮಾಡಿಕೊಳ್ಳಲಾಗಿದೆ.
ಅಂಟಾರ್ಟಿಕದಲ್ಲಿರುವ ಸೇಮೌರ್ ದ್ವೀಪ ಪ್ರದೇಶದಲ್ಲಿ ಈ ತಾಪಮಾನ ದಾಖಲುಗೊಂಡಿದ್ದು ಇದು ಅರ್ಜೇಂಟಿನಾದ ಮರಂಬಿಯೋ ಸಂಶೋಧನಾ ಕೇಂದ್ರವಿರುವ ಸ್ಥಳವೂ ಆಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.