ಜನಮತಗಣನೆಯಿಂದ ಗೂಗಲ್ ನಡೆಯುತ್ತಿಲ್ಲ : CEO ಸುಂದರ್ ಪಿಚೈ
Team Udayavani, Nov 2, 2018, 3:50 PM IST
ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ಕಂಪೆನಿಯು ಜನಮತಗಣನೆಯಿಂದ ನಡೆಯುತ್ತಿಲ್ಲ ಎಂದು ಕಂಪೆನಿಯ ಸಿಇಓ ಸುಂದರ್ ಪಿಚೈ ಹೇಳಿದ್ದಾರೆ.
ಕಚೇರಿಯಲ್ಲಿನ ಕಿರುಕುಳ, ತಾರತಮ್ಯ, ಒತ್ತಡ ಇತ್ಯಾದಿಗಳನ್ನು ಪ್ರತಿಭಟಿಸಿ ನಿನ್ನೆ ಗುರುವಾರ ಗೂಗಲ್ ಕಂಪೆನಿಯ ಏಶ್ಯ ವಲಯದ ನೌಕರರು ಮತ್ತು ಗುತ್ತಿಗೆದಾರರು ಹಲವು ನೂರರ ಸಂಖ್ಯೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ತಮ್ಮ ಕಚೇರಿಯಿಂದ ಹೊರ ನಡೆದು ತೋರಿದ ಪ್ರತಿಭಟನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ನ್ಯೂಯಾರ್ಕ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಿಚೈ ಅವರು, “ನಾವು ಜನಮತಗಣನೆಯ ಆಧಾರದಲ್ಲಿ ಕಂಪೆನಿಯನ್ನು ನಡೆಸುತ್ತಿಲ್ಲ; ನೌಕರರಿಗೆ ತಮ್ಮ ಧ್ವನಿ ವ್ಯಕ್ತಪಡಿಸುವುದಕ್ಕೆ ಹಲವಾರು ಉತ್ತಮ ಅವಕಾಶಗಳಿವೆ; ಆ ನಿಟ್ಟಿನಲ್ಲಿ ನಾವು ಸಾಕಷ್ಟು ಮಾಡಿದ್ದೇವೆ’ ಎಂದು ಹೇಳಿರುವುದನ್ನು ಉಲ್ಲೇಖೀಸಿ ಬ್ಲೂಮ್ ಬರ್ಗ್ ವರದಿ ಮಾಡಿದೆ.
ಏಶ್ಯದಲ್ಲಿನ ನೂರಾರು ಗೂಗಲ್ ನೌಕರರು ಮತ್ತು ಗುತ್ತಿಗೆದಾರರು ನಿನ್ನೆ ಮಧ್ಯಾಹ್ನ ತಮ್ಮ ಮೇಲೆ ಕಂಪೆನಿಯ ಕಚೇರಿಗಳಲ್ಲಿ ನಡೆಯುತ್ತಿರುವ ಆರೋಪಿತ ಶೋಷಣೆ, ಕಿರುಕುಳವನ್ನು ಪ್ರತಿಭಟಿಸಿ ಕಾರ್ಯಾಲಯದಿಂದ ಹೊರ ನಡೆದ ಅತ್ಯಪರೂಪದ ವಿದ್ಯಮಾನ ನಡೆಯಿತು.
ದುಡಿಯುವ ಸ್ಥಳದಲ್ಲಿ (ಕಚೇರಿಯಲ್ಲಿ) ಕಂಪೆನಿಯ ಕಾರ್ಯನಿರ್ವಾಹಕರಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ, ಲೈಂಗಿಕ ಶೋಷಣೆಯೇ ಮೊದಲಾದ ಅತಿರೇಕಗಳನ್ನು ಪ್ರತಿಭಟಿಸಲು ವಿಶ್ವಾದ್ಯಂತದ ಗೂಗಲ್ ಕಾರ್ಯಾಲಯಗಳಿಂದ ಹಲವು ಸಾವಿರ ಮಂದಿ ನೌಕರರು ಹೊರಬಂದು ಪ್ರತಿಭಟಿಸುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನಿನ್ನೆ ತಡವಾಗಿ ಹೊರಡಿಸಲಾಗಿದ್ದ ಹೇಳಿಕೆಯಲ್ಲಿ ಸಂಘಟಕರು ಗೂಗಲ್ ಮಾತೃ ಸಂಸ್ಥೆಯಾಗಿರುವ Alphabet Inc. ಮುಖ್ಯಸ್ಥರನ್ನು ಭೇಟಿಯಾಗಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ನೌಕರ ಪ್ರತಿನಿಧಿಯೋರ್ವರನ್ನು ಸೇರಿಸಿಕೊಳ್ಳುವಂತೆ ಮತ್ತು ವೇತನ-ಸಮಾನತೆ ಅಂಕಿ ಅಂಶವನ್ನು ಆಂತರಿಕವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು; ಜತೆಗೆ ಕಾರ್ಯ ಸ್ಥಳದಲ್ಲಿನ ಕಿರುಕುಳ-ಸಂಬಂಧಿ ಪರಿಹಾರ ಕೋರಿಕೆ ಪ್ರಕರಣಗಳನ್ನು ನ್ಯಾಯೋಚಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿನ ಮಾನವ ಸಂಪನ್ಮೂಲ ಉಪಕ್ರಮಗಳಿಗೆ ಬದಲಾವಣೆ ತರಬೇಕು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.