ಶ್ವಾನ-ಮನುಷ್ಯನ ಗೆಳೆತನ ಪುರಾತನ!
ನಾಯಿಗಳ ಡಿಎನ್‌ಎ ಅಧ್ಯಯನದಿಂದ ಹೊಸ ಮಾಹಿತಿ
Team Udayavani, Oct 31, 2020, 6:10 AM IST
ಸಾಂದರ್ಭಿಕ ಚಿತ್ರ
ಲಂಡನ್: ನಾಯಿ ಮತ್ತು ಮನುಷ್ಯನ ಗೆಳೆತನ ಕೇವಲ ಈಗಿನದ್ದಲ್ಲ. 11 ಸಾವಿರ ವರ್ಷಗಳ ಹಿಂದಿನ ಹಿಮಯುಗದಿಂದಲೇ ಈ ಸ್ನೇಹ ಸಂಬಂಧ ರೂಪುಗೊಂಡಿತ್ತು!
ಹೌದು! ಈ ವಾದಕ್ಕೆ ಪುಷ್ಟಿ ನೀಡುವ ಸಂಗತಿ, ನಾಯಿಗಳಲ್ಲಿನ ಡಿಎನ್‌ಎ ಕುರಿತಾದ ಅಧ್ಯ ಯನದಿಂದ ತಿಳಿದುಬಂದಿದೆ. ಮನುಷ್ಯ ಬೇರೆ ಪ್ರಾಣಿಗಳನ್ನು ಸಾಕುವುದಕ್ಕೂ ಮೊದಲೇ ನಾಯಿಗಳನ್ನು ಸಾಕುತ್ತಿದ್ದ ಎಂದು ಲಂಡನ್‌ನ ಪ್ರಾಚೀನ ಜಿನೋಮಿಕ್ಸ್ ಲ್ಯಾಬ್‌ನ ತಜ್ಞರು ವರದಿ ನೀಡಿದ್ದಾರೆ.
ಪ್ರಾಚೀನ ಕಾಲದ 27 ನಾಯಿಗಳ ಪಳೆಯುಳಿಕೆಗಳನ್ನು ಈಗಿನ ನಾಯಿಗಳ ಜಿನೋಮ್‌ಗಳಿಗೆ ಹೋಲಿಸಿ ನೋಡಿದಾಗ ಈ ಅಂಶ ದೃಢವಾಗಿದೆ. ಭೂಮಿಯ ಉತ್ತರಾರ್ಧ ಗೋಳ ದಲ್ಲಿ ನಾಯಿ ಸಾಕುವಿಕೆ ಪ್ರಾಚೀನ ಕಾಲ ದಿಂದಲೂ ರೂಢಿಯ ಲ್ಲಿತ್ತು. ಪೌರ್ವಾತ್ಯ ಮತ್ತು ಸೈಬೀರಿಯಾ ಶ್ವಾನ ತಳಿ ಆಗ ಚಾಲ್ತಿಯಲ್ಲಿದ್ದಿರ ಬಹುದು. ಈ ಶ್ವಾನವಂಶದ ತಳಿ ಈಗಲೂ ಅಮೆರಿಕ, ಏಷ್ಯಾ, ಆಫ್ರಿಕಾ ಮತ್ತು ಒಷನಿಯಾ ವಲಯಗಳಲ್ಲಿ ಬದುಕುಳಿದಿವೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ| ಪಾಂಟಸ್ ಸ್ಕಾಗ್ಲುಡ್ ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ, ಹಸಿಮಾಂಸ ಸೇವಿಸುತ್ತಿದ್ದ ಕಾಲದಿಂದಲೂ ನಾಯಿಗಳಿಗೆ ಒಡನಾಟ ಬೆಳೆದಿದೆ. ಆದರೆ, ನಾಯಿಯನ್ನೇ ಏಕೆ ಸಾಕುತ್ತಿದ್ದ ಎಂಬ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. 6 ಸಾವಿರ ವರ್ಷಗಳ ಹಿಂದೆ, ಮಾನವ ಕೃಷಿ ಆರಂಭಿಸುತ್ತಿದ್ದ ಯುಗದಲ್ಲಿ ಬೆಕ್ಕುಗಳನ್ನು ಸಾಕಲು ಆರಂಭಿಸಿದ್ದಿರಬಹುದು ಎಂದು ಅಧ್ಯಯನ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.