ಯಾವುದೇ ಕ್ಷಣ ಅಣುಯುದ್ಧ
Team Udayavani, Oct 18, 2017, 7:20 AM IST
ವಿಶ್ವಸಂಸ್ಥೆ: ಅಣ್ವಸ್ತ್ರ ಕ್ಷಿಪಣಿ ಪರೀಕ್ಷಿ ಸುವ ಮೂಲಕ ಪದೇ ಪದೆ ಬೆದರಿಕೆ ಹಾಕುತ್ತ ಬಂದಿರುವ ಉತ್ತರ ಕೊರಿಯಾ ಈಗ ಮತ್ತೂಂದು “ಆಟಂ ಬಾಂಬ್’ ಸಿಡಿಸಿದೆ!
ಹೌದು, “ಉಪಖಂಡದಲ್ಲಿ ಯಾವುದೇ ಕ್ಷಣದಲ್ಲಿ ಅಣು ಸಮರ ನಡೆಯಬಹುದು’ ಎಂದು ಹೊಸದಾಗಿ ಅಮೆರಿಕಕ್ಕೆ ಬೆದರಿಕೆ ಹಾಕಿದೆ ಉತ್ತರ ಕೊರಿಯಾ. ಆಶ್ಚರ್ಯದ ಸಂಗತಿ ಏನೆಂದರೆ ಉತ್ತರ ಕೊರಿಯಾ ಈ ಬಾರಿ ತನ್ನಷ್ಟಕ್ಕೇ ತಾನು ಈ ಹೇಳಿಕೆ ನೀಡಿದ್ದಲ್ಲ, ವಿಶ್ವಸಂಸ್ಥೆಯ ನಿಶ್ಶಸ್ತ್ರೀಕರಣ ಸಮಿತಿಯ ಸಾಮಾನ್ಯ ಸಭೆಗೆ ಉತ್ತರ ಕೊರಿಯಾದ ವಿಶ್ವಸಂಸ್ಥೆ ಹೆಚ್ಚುವರಿ ರಾಯಭಾರಿ ಕಿಮ್ ಇನ್ ರಿಯಾಂಗ್ ಈ ವಿಷಯ ತಿಳಿಸಿದ್ದಾರೆ. ಅಮೆರಿಕ ಮಿತಿ ಮೀರಿ ವರ್ತಿಸಿದರೆ ನೇರ ಶಸ್ತ್ರಾಸ್ತ್ರ ಪ್ರಯೋಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆಂದು ಹೇಳಲಾಗಿದೆ.
ತನ್ನ ಈ ನಡೆಯನ್ನು ಸಮರ್ಥಿಸಿ ಕೊಂಡಿ ರುವ ಉತ್ತರ ಕೊರಿಯಾ, “ಸ್ವರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಅಣ್ವಸ್ತ್ರಗಳನ್ನು ಹೊಂದಿರುವ ನಿರ್ಧಾರದಿಂದ ಹಿಂದಕ್ಕೆ ಸರಿಯುವುದೂ ಇಲ್ಲ. ಅಮೆರಿಕದ ಬೆದರಿಕೆ ಹಾಗೂ ವಿರೋಧಿ ನೀತಿಯನ್ನು ಸಹಿಸಿಕೊಳ್ಳುವ ಪ್ರಶ್ನೆಯೂ ಇಲ್ಲ. ಇದನ್ನು ಸಮರ್ಥವಾಗಿ ಎದುರಿಸಲು ನಾವು ಯಾವುದೇ ಕ್ಷಣದಲ್ಲಿಯೂ ನಮ್ಮ ಬಳಿ ಇರುವ ಅಣ್ವಸ್ತ್ರಗಳ ಪ್ರಯೋಗಕ್ಕೆ ಮುಂದಾಗುತ್ತೇವೆ’ ಎಂದಿದ್ದಾರೆ ಎಂದು ಹೇಳಲಾಗಿದೆ.
ಉತ್ತರ ಕೊರಿಯಾ ನಿರಂತರವಾಗಿ ಸಮರಾಭ್ಯಾಸ ನಡೆಸುತ್ತಿದ್ದು, ಇದನ್ನು ಸಹಿಸಲಾಗದೆ ಅಮೆರಿಕ ಈಗ ನಮ್ಮನ್ನು “ಸರ್ವನಾಶ ಮಾಡಿಬಿಡುತ್ತೇವೆ’ ಎಂದು ಬೆದರಿಸುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ನಾವು ನೀಡುತ್ತೇವೆ ಎಂದಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.