ಟೈಮ್ ಮ್ಯಾಗ ಜಿನ್ ಮಾರಾಟ
Team Udayavani, Sep 18, 2018, 6:50 AM IST
ನ್ಯೂಯಾರ್ಕ್: ಅಮೆರಿಕದ ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯನ್ನು ಖರೀದಿಸಿದ ಒಂದೇ ವರ್ಷದೊಳಗೆ ಮೆರೆಡಿತ್ ಕಾರ್ಪ್‌ಕಂಪೆನಿ ಯು ಮಾರಾಟ ಮಾಡಿದೆ. ಕ್ಲೌಡ್ ಕಂಪ್ಯೂಟಿಂಗ್ ಕಂಪೆನಿ ಸೇಲ್ಸ್‌ಫೋರ್ಸ್‌ನಲ್ಲಿ ಹೂಡಿಕೆದಾರರಲ್ಲಿ ಒಬ್ಬರಾದ ಮಾರ್ಕ್ ಬೆನಿಯಾಫ್ ಹಾಗೂ ಲೈನೆ ಬೆನಿಯಾಫ್ 1300 ಕೋಟಿ ರೂ.ಗೆ ಖರೀದಿಸಿದ್ದಾರೆ. ಕಳೆದ ಜನವರಿಯಲ್ಲಷ್ಟೇ ಟೈಮ್ ನಿಯತಕಾಲಿಕೆ ಯನ್ನು ಮೆರೆಡಿತ್ ಖರೀದಿ ಮಾಡಿತ್ತು.
30 ದಿನಗಳಲ್ಲಿ ಬೆನಿಯಾಫ್ಗೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದು, ನಿಯತಕಾಲಿಕೆಯ ನಿತ್ಯದ ಚಟುವಟಿಕೆಗಳಲ್ಲಿ ಬೆನಿಯಾಫ್ ಭಾಗವಹಿಸುವುದಿಲ್ಲ. ಅಲ್ಲದೆ, ಇದು ಮಾರ್ಕ್ ಹಾಗೂ ಲೈನೆ ವೈಯಕ್ತಿಕ ಖರೀದಿಯಾಗಿದೆ. ಸೇಲ್ಸ್‌ಫೋರ್ಸ್‌ಗೂ ಈ ಖರೀದಿಗೂ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಸದ್ಯದ ಮಟ್ಟಿಗೆ ಟೈಮ್‌ನ ಪ್ರಸ್ತುತ ಆಡಳಿತ ಮಂಡಳಿಯೇ ಮುಂದುವರಿಯಲಿದ್ದು, ಸಾಲದ ಹೊರೆಯನ್ನು ಕಡಿಮೆ ಮಾಡಲು ಮೆರೆಡಿತ್ ಮುಂದಿನ ಒಂದು ವರ್ಷದವರೆಗೆ ಕಾರ್ಯ ನಿರ್ವಹಣಾ ನೆರವು ನೀಡಲಿದೆ. ಮೂಲಗಳ ಪ್ರಕಾರ ಮಾರ್ಕ್‌ಗೆ ಮಾರಾಟದಿಂದ ಬಂದ ಹಣವನ್ನು ಸಾಲಗಾರರಿಗೆ ಪಾವತಿ ಮಾಡಲು ಬಳಸಲಾಗುತ್ತದೆ. ಇನ್ನೊಂದೆಡೆ ಟೈಮ್ ಇಂಕ್‌ನ ಇತರ ಪ್ರಕಟಣೆಗಳಾದ ನ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್, ಫಾರ್ಚೂನ್ ಹಾಗೂ ಮನಿ ನಿಯತಕಾಲಿಕೆ ಮಾರಾಟದ ಬಗ್ಗೆಯೂ ಮಾತುಕತೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.