ಚೀನದಲ್ಲಿ ಆ್ಯಪಲ್‌ನ ಎಲ್ಲಾ ಸ್ಟೋರ್‌ಗಳಿಗೆ ಬೀಗ
Team Udayavani, Mar 15, 2020, 11:29 PM IST
ಸ್ಯಾನ್ ಫ್ರ್ಯಾನ್‌ಸಿಸ್ಕೋ: ಜಗತ್ತಿನ ಖ್ಯಾತ ಆಯ್ದ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕ ಸಂಸ್ಥೆ ಆ್ಯಪಲ್ ತಾತ್ಕಾಲಿಕವಾಗಿ ಚೀನದಲ್ಲಿನ ತನ್ನ ಎಲ್ಲಾ ಸ್ಟೋರ್‌ಗಳನ್ನು ಮುಚ್ಚಲಿದೆ. ಈ ಆದೇಶ ಮಾರ್ಚ್ 27ರ ವರೆಗೆ ಮುಂದುವರಿಯಲಿದೆ. ಚೀನದಲ್ಲಿ ಈಗಾಗಲೇ ಈ ಸೋಂಕಿನ ಕುರಿತು ಎಚ್ಚರ ವಹಿಸಲಾಗಿದ್ದು, ಸಾವಿನ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಈ ಮಧ್ಯೆ ಕೆಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಈಗಾಗಲೇ ಕೆಲವೆಡೆ ತಮ್ಮ ಸ್ಟೋರ್‌ಗಳನ್ನು ತೆರೆದಿವೆ. ಆದರೆ ಆ್ಯಪಲ್ ಮಾತ್ರ ಈ ತಿಂಗಳಾಂತ್ಯದಲ್ಲಿ ತೆರೆಯುವುದಾಗಿ ಹೇಳಿದೆ.
ಕ್ಯಾಲಿಫೋರ್ನಿಯಾ ಮೂಲದ ಆ್ಯಪಲ್ ಜಗತ್ತಿನ 24 ರಾಷ್ಟ್ರಗಳಲ್ಲಿ ಸುಮಾರು 500 ಸ್ಟೋರ್‌ಗಳನ್ನು ಹೊಂದಿದೆ. ಚೀನದಲ್ಲಿ 42 ಸ್ಟೋರ್‌ಗಳನ್ನು ಹೊಂದಿದ್ದು, ಫೆಬ್ರವರಿ 1ರ ಬಳಿಕ ಎಲ್ಲವೂ ಬಾಗಿಲು ಮುಚ್ಚೇ ಇವೆ.
ಸಂಸ್ಥೆ ಈಗಾಗಲೇ ಈ ಮಹಾಮಾರಿಯನ್ನು ತಡೆಯಲು ಸುಮಾರು 15 ಮಿಲಯನ್ ಡಾಲರ್‌ಗಳನ್ನು ನೀಡಿದೆ. ಈ ಕೊರೊನಾ ವೈರಸ್ ಈಗಾಗಲೇ ಆ್ಯಪಲ್ ಸಂಸ್ಥೆಯನ್ನೂ ತಲುಪಿದ್ದು, ಕಳೆದ ತಿಂಗಳು ಜಾಗತಿಕವಾಗಿ ಕನಿಷ್ಠ ಮಾರುಕಟ್ಟೆಯನ್ನು ಕಂಡಿದೆ ಎಂದು ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.