Maisa Abdel Hadi: ಪ್ರಚೋದನಕಾರಿ ಪೋಸ್ಟ್: ಅರಬ್-ಇಸ್ರೇಲಿ ನಟಿ ಮೈಸಾ ಅಬ್ದೆಲ್ ಹದಿ ಬಂಧನ
Team Udayavani, Oct 25, 2023, 12:06 PM IST
ಟೆಲ್ ಅವಿವ್: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅರಬ್-ಇಸ್ರೇಲಿ ನಟಿ ಮೈಸಾ ಅಬ್ದೆಲ್ ಹದಿಯನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿ ಹಲವು ಇಸ್ರೇಲ್ ಪ್ರಜೆಗಳನ್ನು ಹತ್ಯೆಗೈದಿದ್ದರು. ಈ ಕುರಿತು ಪೋಸ್ಟ್ ಮಾಡಿರುವ ನಟಿ ಭಯೋತ್ಪಾದನೆಯನ್ನು ಹೊಗಳಿದ ಮತ್ತು ದ್ವೇಷಪೂರಿತ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನಜರೆತ್ ನಗರದ ವಾಸಿಯಾಗಿರುವ ನಟಿಯನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಪೋಸ್ಟ್ ನಲ್ಲಿ ಹಮಾಸ್‌ಗೆ ಬೆಂಬಲವಾಗಿ ನಗುತ್ತಿರುವ ಎಮೋಜಿಗಳೊಂದಿಗೆ 85 ವರ್ಷದ ಒತ್ತೆಯಾಳು ಯಾಫಾ ಅದಾರ್ ಅವರ ಫೋಟೋಗಳನ್ನು ಮಸ್ಸಾ ಅಬ್ದೆಲ್ ಹಾದಿ ಪೋಸ್ಟ್ ಮಾಡಿದ್ದಾರೆ.
ನಟಿಯ ಈ ವರ್ತನೆಗೆ ನಟ ಆಫರ್ ಶೇಖರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್‌ಗಳನ್ನು ಖಂಡಿಸಿದ ಅವರು – ‘ನಿಮ್ಮ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ನೀವು ನಜರೇತಿನಲ್ಲೇ ವಾಸಿಸಿ ನಮ್ಮ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿ. ನಮ್ಮ ಜನರ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Street vendor: 6 ವರ್ಷ ಕಳೆದರೂ ಬೀದಿ ಬದಿ ವ್ಯಾಪಾರಿಗಳ ಸರ್ವೇ ಇಲ್ಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.