Syria; ಅಧ್ಯಕ್ಷ ಅಸ್ಸಾದ್ ವಿಮಾನ ಅವಘಡಲ್ಲಿ ಮೃ*ತ್ಯು?: ರಾಡಾರ್‌ನಿಂದ ಕಣ್ಮರೆ!!
ತಪ್ಪಿಸಿಕೊಳ್ಳುವಾಗ ಹೊಡೆದುರುಳಿಸಲಾಯಿತೇ?... ವಿಮಾನದ ವಿಡಿಯೋ ನೋಡಿ
Team Udayavani, Dec 8, 2024, 3:16 PM IST
ಡಮಾಸ್ಕಸ್: ಅಸ್ಥಿರತೆಗೆ ಗುರಿಯಾಗಿರುವ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಕುರಿತು ಭಾರೀ ಊಹಾಪೋಹಗಳು ಹಬ್ಬುತ್ತಿದ್ದು, ಅವರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾದ ವಿಮಾನವು ಡಮಾಸ್ಕಸ್‌ನಿಂದ ತಪ್ಪಿಸಿಕೊಳ್ಳುವಾಗ ಪತನಗೊಂಡಿರಬಹುದು ಅಥವಾ ಹೊಡೆದುರುಳಿಸಲ್ಪಟ್ಟಿರಬಹುದು ಎಂಬ ವರದಿಗಳಾಗಿವೆ.
ಆನ್‌ಲೈನ್ ಟ್ರ್ಯಾಕರ್ Flightradar24.com ನ ಮೂಲ ಡೇಟಾವು ಸಿರಿಯನ್ ಏರ್ ವಿಮಾನ ಡಮಾಸ್ಕಸ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿರುವುದನ್ನು ತೋರಿಸುತ್ತದೆ, ಬಂಡುಕೋರರು ರಾಜಧಾನಿಯ ನಿಯಂತ್ರಣವನ್ನು ಹಕ್ಕು ಸಾಧಿಸಿದ್ದು, ಇಲ್ಯುಶಿನ್ Il-76T ಎಂಬ ವಿಮಾನವು ಆರಂಭದಲ್ಲಿ ಸಿರಿಯಾದ ಕರಾವಳಿ ಪ್ರದೇಶದ ಕಡೆಗೆ ಹೋಗುತ್ತಿತ್ತು. ಆದಾಗ್ಯೂ, ಅದು ಹಠಾತ್ತನೆ ಮಾರ್ಗವನ್ನು ಬದಲಾಯಿಸಿ ಹೋಮ್ಸ್ ನಗರದ ಬಳಿ ರಾಡಾರ್‌ನಿಂದ ಕಣ್ಮರೆಯಾಗುವ ಮೊದಲು ಹಲವಾರು ನಿಮಿಷಗಳ ಕಾಲ ವಿರುದ್ಧ ದಿಕ್ಕಿನಲ್ಲಿ ಹಾರಟ ಮಾಡಿದೆ ಎಂದು ವರದಿಯಾಗಿದೆ.
ಕಣ್ಮರೆಯಾಗುವ ಮೊದಲು ಕೆಲವೇ ನಿಮಿಷಗಳಲ್ಲಿ ಜೆಟ್ 3,650 ಮೀಟರ್‌ಗಳಿಂದ 1,070 ಮೀಟರ್ ನಷ್ಟು ಏಕಾಏಕಿ ಕೆಳಕ್ಕೆ ಇಳಿದಿದೆ ಎಂದು ಹಾರಾಟದ ಡೇಟಾ ಸೂಚಿಸುತ್ತಿದೆ, ಇದು ಬಂಡುಕೋರರ ಹಿಡಿತದಲ್ಲಿರುವ ಹೋಮ್ಸ್ ಪ್ರದೇಶವನ್ನು ದಾಟಿದಾಗ ಗುರಿಯಾಗಿರಬಹುದು ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.
Here is the screen recording on Flight Radar of SYR9218 going off the radar. Allegedly, with Assad on board. #Syria pic.twitter.com/cK3Dd3yLjI
— SpiltyTea (@Spiltea) December 8, 2024
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.