ಸ್ನೇಹದ ಅಣೆಕಟ್ಟೆಗೆ ಉಗ್ರರ ದಾಳಿ
Team Udayavani, Jun 26, 2017, 3:45 AM IST
ಕಾಬೂಲ್: ಆಫ್ಘಾನಿಸ್ತಾನ-ಭಾರತದ ಗೆಳೆತನಕ್ಕೆ ಪ್ರತೀಕವಾದ, ಹಾರಿ ನದಿಗೆ ಕಟ್ಟಿರುವ ಪ್ರಮುಖ ಸಲ್ಮಾ ಅಣೆಕಟ್ಟಿಗೆ ದಾಳಿ ನಡೆಸಲು ತಾಲಿಬಾನ್ ಉಗ್ರರು ಯತ್ನಿಸಿದ್ದಾರೆ.
ಚಿಸ್ತಿ ಷರೀಫ್ ಜಿಲ್ಲೆಯ ಹೆರಾತ್ ಪ್ರಾಂತ್ಯದಲ್ಲಿರುವ ಈ ಅಣೆಕಟ್ಟನ್ನು 1,775 ಕೋಟಿ ರೂ. ವೆಚ್ಚದಲ್ಲಿ ಭಾರತ ಆಫ್ಘಾನಿಸ್ತಾನಕ್ಕೆ ಮರುನಿರ್ಮಾಣ ಮಾಡಿಕೊಟ್ಟಿತ್ತು.
ಸಲ್ಮಾ ಅಣೆಕಟ್ಟಿಗೆ ಸುಮಾರು 13 ಕಿ.ಮೀ. ದೂರದಲ್ಲಿರುವ, ಚೆಸ್ತ್ ಜಿಲ್ಲೆಯಲ್ಲಿನ ಚೆಕ್‌ಪೋಸ್ಟ್‌ಗೆ ತಾಲಿಬಾನ್ ಉಗ್ರರು ಶನಿವಾರ ರಾತ್ರಿ ದಾಳಿ ನಡೆಸಿದ್ದು ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ಆಫ^ನ್ ಪೊಲೀಸರು ಮೃತಪಟ್ಟಿದ್ದಾರೆ. ಜೊತೆಗೆ ಐವರು ಉಗ್ರರೂ ಮೃತಪಟ್ಟಿದ್ದಾರೆ. ಕಾದಾಟದ ವೇಳೆ ಉಗ್ರರು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನೂ ಲೂಟಿ ಮಾಡಿದ್ದಾರೆ ಎಂದು ಆಫ^ನ್ ಸರ್ಕಾರದ ಮೂಲಗಳು ಹೇಳಿವೆ.
2014ರಲ್ಲಿ ಆಫ^ನ್‌ನಿಂದ ಅಮೆರಿಕ ಮೈತ್ರಿಕೂಟದ ಪಡೆಗಳು ತಮ್ಮ ಸೈನಿಕ ಬಲವನ್ನು ಹಿಂದೆಗೆದುಕೊಂಡ ಬಳಿಕ ತಾಲಿಬಾನ್ ಮತ್ತು ಪಾಕ್ ಬೆಂಬಲಿತ ಉಗ್ರರ ಅಟ್ಟಹಾಸ ಜೋರಾಗಿದ್ದು, ಹಿಂಸಾಚಾರ ವ್ಯಾಪಕವಾಗಿದೆ. ಜೊತೆಗೆ ತಾಲಿಬಾನ್ ತನ್ನ ಬಾಹುಳ್ಯವನ್ನು ಮತ್ತೆ ಆಫ್ಘಾನ್‌ನಲ್ಲಿ ವಿಸ್ತರಿಸುತ್ತಿದೆ.
ಅಣೆಕಟ್ಟಿಗೆ ಹಾನಿಯಿಲ್ಲ:
ಉಗ್ರ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಆಫ^ನ್ ಭಾರತೀಯ ರಾಯಭಾರಿ ಮನ್‌ಪ್ರೀತ್ ವೋಹ್ರಾ, ಅಣೆಕಟ್ಟಿಗೆ ಸಮಸ್ಯೆ ಆಗಿಲ್ಲ. ಅಣೆಕಟ್ಟಿನಿಂದ ಅನತಿ ದೂರದ ಚೆಕ್‌ಪೋಸ್ಟ್ ಮೇಲೆ ದಾಳಿಯಾಗಿದೆ. ಆದಾಗ್ಯೂ ಅಣೆಕಟ್ಟಿಗೆ ಪಾಕ್ ಪ್ರಾಯೋಜಿತ ಉಗ್ರರ ಭೀತಿ ನಿರಂತರವಾಗಿದೆ ಎಂದು ಹೇಳಿದ್ದಾರೆ.
ಮೋದಿ ಉದ್ಘಾಟಿಸಿದ್ದ ಸಲ್ಮಾ ಅಣೆಕಟ್ಟು:
ಕಳೆದ ವರ್ಷ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಅಣೆಕಟ್ಟನ್ನು ಉದ್ಘಾಟಿಸಿದ್ದರು. ದ್ವಿಪಕ್ಷೀಯ ಸಂಬಂಧ ವೃದ್ಧಿ, ರಾಜಕೀಯ ಕಾರ್ಯತಂತ್ರದ ಅನ್ವಯ ಈ ಅಣೆಕಟ್ಟನ್ನು ಭಾರತ ನಿರ್ಮಿಸಿಕೊಟ್ಟಿತ್ತು. ಸುಮಾರು 75 ಸಾವಿರ ಎಕರೆ ಭೂಮಿಗೆ ಈ ಅಣೆಕಟ್ಟು ನೀರುಣಿಸುತ್ತದೆ. ಅಲ್ಲದೇ 42 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಹೆರಾತ್ ಪ್ರಾಂತ್ಯಕ್ಕೆ ಈ ಅಣೆಕಟ್ಟು ವಿದ್ಯುತ್, ನೀರು ಪೂರೈಕೆಯ ಪ್ರಮುಖ ಮೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.