ನ್ಯೂಜಿಲ್ಯಾಂಡ್ ಶಂಕಿತ ಉಗ್ರನ 2 ಮನೆ ಮೇಲೆ ಆಸೀಸ್ ಪೊಲೀಸ್ ದಾಳಿ
Team Udayavani, Mar 18, 2019, 6:22 AM IST
ಮೆಲ್ಬೋರ್ನ್ : ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗಳಲ್ಲಿ ನರಮೇಧ ನಡೆಸಿ ಐವರು ಭಾರತೀಯರ ಸಹಿತ 50 ಜನರನ್ನು ಬಲಿಪಡೆದಿದ್ದ ಆರೋಪಿ ಬಂದೂಕುಧಾರಿಯ ಕುಟುಂಬ ಸದಸ್ಯರ ಎರಡು ಮನೆಗಳಿಗೆ ಆಸ್ಟ್ರೇಲಿಯದ ಉಗ್ರ ನಿಗ್ರಹ ಪೊಲೀಸರು ಇಂದು ಸೋಮವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ನ್ಯೂಜೀಲ್ಯಾಂಡ್ ಪೊಲೀಸರಿಗೆ ನರಮೇಧದ ತನಿಖೆಗೆ ನೆರವಾಗುವಲ್ಲಿ ಯಾವುದಾದರೂ ಪ್ರಮುಖ ಮಾಹಿತಿ, ಸಾಕ್ಷ್ಯಗಳು ದೊರಕಬಹುದು ಎಂಬ ಕಾರಣಕ್ಕೆ ಪೊಲೀಸರು ಈ ದಾಳಿ ನಡೆಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
50 ಅಮಾಯಕರನ್ನು ಬಲಿ ಪಡೆದಿರುವ ಬಂದೂಕುಧಾರಿಯನ್ನು ಪೊಲೀಸರು ಆಸ್ಟ್ರೇಲಿಯ ಸಂಜಾತ, 28ರ ಹರೆಯದ ಬ್ರೆಂಟನ್ ಟ್ಯಾರಾಂಟ್ ಎಂದು ಗುರುತಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ವೇಳೆ ಈತ ವಲಸಿಗರನ್ನು ಗುರಿ ಇರಿಸಿ ಗುಂಡಿನ ದಾಳಿ ನಡೆಸಿದ್ದ. ಈತನು ಪ್ರಾರ್ಥನೆಯಲ್ಲಿ ನಿರತರಾಗಿದ್ದವರನ್ನು ತೀರ ಸನಿಹದಿಂದ ಗುಂಡಿಟ್ಟು ಕೊಂದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಎರಡು ಮಸೀದಿಯೊಳಗೆ ಐವರು ಭಾರತೀಯರು ಸೇರಿದಂತೆ 50 ಜನರ ಮಾರಣ ಹೋಮ ನಡೆದ ಒಡನೆಯೇ ಘಟನೆ ನಡೆದಿದ್ದ ಎರಡು ಮಸೀದಿಗಳನ್ನು ಪ್ರವೇಶಿಸಿದ್ದ ಪೊಲೀಸರು ಆತನನ್ನು ಜೀವಂತ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.