ಕೋವಿಡ್ ಮೂಲ ಆಸ್ಟ್ರೇಲಿಯಾವಂತೆ! ಆಸೀಸ್ ತಿರುಗೇಟು
ವುಹಾನ್ ಲ್ಯಾಬ್ ನಲ್ಲಿ ಕೊರೊನಾ ಸೃಷ್ಟಿಯಾಯಿತು ಎನ್ನುವ ವಾದದಲ್ಲಿ ಹುರುಳಿಲ್ಲ' ಎಂದ ಡಬ್ಲ್ಯು ಎಚ್‌ಒ
Team Udayavani, Feb 11, 2021, 12:42 PM IST
Representative Image
ಲಂಡನ್: ಕೋವಿಡ್ ಮೂಲ ಪತ್ತೆಹಚ್ಚಲು ಚೀನಾಕ್ಕೆ ತೆರ ಳಿದ್ದ ಡಬ್ಲ್ಯು ಎ ಚ್‌ಒ ತನಿಖಾಧಿಕಾರಿಗಳಿಗೆ ಚೀನಾ ಸಂಪೂ ರ್ಣವಾಗಿ “ಬ್ರೈನ್ ವಾಶ್’ ಮಾಡಿ ಕಳುಹಿಸಿದೆ. “ಕೋವಿಡ್ ಹಬ್ಬಿದ್ದು ವುಹಾನ್‌ನ ಹಸಿಮಾಂಸದ ಮಾರುಕಟ್ಟೆ ಯಿಂದಲ್ಲ, ಆಸ್ಟ್ರೇಲಿಯಾದ ದನದ ಮಾಂಸ ದಿಂದ’ ಎಂದು ತಜ್ಞರು ರಾಗ ಬದಲಿಸಿದ್ದಾರೆ.
ಇದನ್ನೂ ಓದಿ:ಅಶೋಕವನ ಎಸ್ಟೇಟಿಗೆ ಸ್ವಾಗತ ಕೋರಿದ ‘ಹೀರೋ’…ಶೆಟ್ಟರ ಸಿನಿಮಾ ರಿಲೀಸ್ ಡೇಟ್ ಪ್ರಕಟ
ಜಗತ್ತಿನ 23.4 ಲಕ್ಷ ಜನರ ಪ್ರಾಣವನ್ನು ನುಂಗಿ ನೀರು ಕುಡಿದ ಕೋವಿಡ್ ಚೀನಾದ ಸೃಷ್ಟಿ ಎಂಬ ಜಗತ್ತಿನ ನಂಬಿಕೆಗೆ ಡಬ್ಲ್ಯು ಎ ಚ್ ಒದ 14 ವಿಜ್ಞಾನಿಗಳು ಬರೆ ಎಳೆದಿದ್ದಾ ರೆ. ಚೀನೀ ಕಮ್ಯುನಿಸ್ಟ್ ಪಕ್ಷದ ಬೆನ್ನಿಗೆ ನಿಂತಿರುವ ವಿಜ್ಞಾನಿಗಳು, ಆಸ್ಟ್ರೇ ಲಿಯಾ ದತ್ತ “ಕೋವಿಡ್ ಮೂಲ’ದ ಬೆಟ್ಟು ತೋರಿಸಿದ್ದಾರೆ.
“ಆಸ್ಟ್ರೇಲಿಯಾದಿಂದ ಆಮದುಮಾಡಿ ಕೊಂಡ ದನದ ಮಾಂಸದಿಂದ ಚೀನಾಕ್ಕೆ ವೈರಾಣು ದಾಟಿತೇ ಎಂಬುದರ ಬಗ್ಗೆ ಮತ್ತಷ್ಟು ಅಧ್ಯ ಯನ ನಡೆಯಬೇಕಿದೆ. ಆದರೆ, ವುಹಾನ್ ಲ್ಯಾಬ್ ನಲ್ಲಿ ಕೊರೊನಾ ಸೃಷ್ಟಿಯಾಯಿತು ಎನ್ನುವ ವಾದದಲ್ಲಿಹುರುಳಿಲ್ಲ’ ಎಂದು ಡಬ್ಲ್ಯು ಎಚ್‌ಒ ತಂಡದ ಮುಖ್ಯಸ್ಥ ಪೀಟರ್ ಎಂಬಾ ರೆಕ್ ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ವಿರುದ್ಧ ಸ್ವಪಕ್ಷದ 6 ಸಂಸದರ ಮತ
ವಾಷಿಂಗ್ಟನ್: ಕ್ಯಾಪಿಟಲ್ ದಾಂಧ ಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ವಪಕ್ಷದ ಸಂಸದರೇ ತಿರುಗಿ ಬಿದ್ದಿದ್ದಾರೆ. ಅಮೆರಿಕ ಸಂಸತ್ ನಲ್ಲಿ ಟ್ರಂಪ್ ವಿರುದ್ಧದ 2ನೇ ಸಲದ ವಾಗ್ಧಂಡ ನೆ ವಿಚಾರಣೆ ಪ್ರಕ್ರಿಯೆ ವೇಳೆ ರಿಪಬ್ಲಿಕನ್ ಪಕ್ಷದ 6 ಸಂಸದರು ಡೆಮಾಕ್ರಾಟಿಕ್‌ಗೆ ಬೆಂಬಲಿಸಿದ್ದಾ ರೆ. “ಟ್ರಂಪ್ ವಿರುದ್ಧದ ಸಂವಿಧಾನಾತ್ಮ ಕ ದೋಷಾ ರೋಪಣೆ ವಿಚಾರಣೆ ಪ್ರಕ್ರಿಯೆಯಲ್ಲಿ 56-44 ಮತಗಳು ಬಿದ್ದಿ ವೆ’ ಎಂದು ಸೆನೆಟ್ ದೃಢಪಡಿಸಿದೆ.
ಪ್ರಸ್ತುತ ಸೆನೆಟ್ ನಲ್ಲಿ ರಿಪಬ್ಲಿನ್ಸ್ ಮತ್ತು ಡೆಮಾಕ್ರಾಟಿಕ್ಸ್‌ನ ತಲಾ 50 ಸದಸ್ಯರಿ ದ್ದಾರೆ. ಈ ಪ್ರಕ್ರಿಯೆಯಲ್ಲಿ ಟ್ರಂಪ್ ರನ್ನು ಅಪರಾಧಿ ಎಂದು ಘೋಷಿಸಿ, ಸಂಸತ್ ಸ್ಥಾನ ದಿಂದ ಅನರ್ಹಗೊಳಿಸಲು ಆಡ ಳಿತ ಪಕ್ಷ ಡೆಮಾಕ್ರಾ ಟಿ ಕ್ ಗೆ 67 ಮತ ಗಳ ಅವಶ್ಯ ಕತೆ ಇದೆ. ಪ್ರಸ್ತುತ 56 ಮತಗಳ ಟ್ರಂಪ್ ವಿರುದ್ಧ ಬಿದ್ದಿದ್ದು, 11 ಮತಗಳ ಅವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.