ಆಸೀಸ್ ಕಾಡ್ಗಿಚ್ಚಿನಿಂದ ಐತಿಹಾಸಿಕ “ಡೈನೋಸಾರ್ ಟ್ರೀ’ ರಕ್ಷಣೆ
ವೈಜ್ಞಾನಿಕವಾಗಿ "ವೊಲೆಮಿ ಪೈನ್ಸ್' ಎಂದು ಕರೆಯಲ್ಪಡುವ ಮರ
Team Udayavani, Jan 16, 2020, 8:13 PM IST
ಮೆಲ್ಬರ್ನ್: ಆಸ್ಟ್ರೇಲಿಯಾದ ಅಗ್ನಿಶಾಮಕ ದಳದ ಸಿಬ್ಬಂದಿ ಕೈಗೊಂಡ ರಹಸ್ಯ ಕಾರ್ಯಾಚರಣೆಯಿಂದಾಗಿ ಅಳಿವನಂಚಿನಲ್ಲಿರುವ, ಆಸ್ಟ್ರೇಲಿಯಾದಲ್ಲಿ ಮಾತ್ರ ಕಾಣಸಿಗುವ, ಇತಿಹಾಸಪೂರ್ವ ವೃಕ್ಷವಾದ “ವೊಲೆಮಿ ಪೈನ್ಸ್’ (ಡೈನೋಸಾರ್ ಟ್ರೀ)ಎಂಬ ಜಾತಿಯ 200 ಮರಗಳನ್ನು ಸಂರಕ್ಷಿಸಲಾಗಿದೆ.
ಸಿಡ್ನಿಯ ವಿಶ್ವಪಾರಂಪರಿಕ ತಾಣವಾದ ನೈರುತ್ಯ ಭಾಗದಲ್ಲಿರುವ ಬ್ಲೂ ಮೌಂಟೇನ್ಸ್ ಎಂಬ ಪರ್ವತ ಶ್ರೇಣಿಗಳಲ್ಲಿರುವ ಈ ಮರಗಳು ಇರುವ ಜಾಗದ ಸುತ್ತಲಿನ ಭೂಮಿಯನ್ನು ಉಳುಮೆ ಮಾಡಿ ವ್ಯವಸಾಯ ಆರಂಭಿಸುವ ಮೂಲಕ ಆ ಜಾಗದಲ್ಲಿ ತೇವಾಂಶ ಹೆಚ್ಚಾಗಿ ಬೆಂಕಿ ಹಬ್ಬುವ ಅವಕಾಶ ಕಡಿಮೆ ಮಾಡಿದ್ದ ಅಗ್ನಿಶಾಮಕ ಸಿಬ್ಬಂದಿ, ಮರಗಳಿಗೆ ಬೆಂಕಿ ಹಬ್ಬುವ ಪ್ರಮೇಯವನ್ನು ಇಲ್ಲವಾಗಿಸಿದ್ದರೂ, ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮರಗಳ ಮೇಲೆ ಹೆಲಿಕಾಪ್ಟರ್ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಆ ಅಪರೂಪದ ಮರಗಳನ್ನು ಸಂರಕ್ಷಿಸಲಾಗಿದೆ.
ಪ್ರವಾಹ ಭೀತಿ: ಪೂರ್ವ ಆಸ್ಟ್ರೇಲಿಯಾದಲ್ಲಿ ಹಠಾತ್ತಾಗಿ ಸುರಿದ ಮಳೆಯಿಂದಾಗಿ ಆ ಭಾಗದಲ್ಲಿ ಹರಡಿದ್ದ ಕಾಡ್ಗಿಚ್ಚು ನಂದಿ ಹೋಗುತ್ತಿದೆ. ಆದರೆ, ಈ ಮುಸಲಧಾರೆ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗುವ ಭೀತಿ ಆವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.