ದಶಕದ ಬೇಟೆ : ಕೊನೆಗೂ ಸೆರೆಸಿಕ್ಕ ಕಾರಿನಷ್ಟು ದೊಡ್ಡ ಮೊಸಳೆ
Team Udayavani, Jul 10, 2018, 4:15 PM IST
ಸಿಡ್ನಿ : ಸರಿಸುಮಾರು ಒಂದು ದಶಕದ ಕಾಲ ನಡೆದ ಅವಿರತ ಬೇಟೆಯಲ್ಲಿ ಆಸ್ಟ್ರೇಲಿಯದ ಅರಣ್ಯ ರೇಂಜರ್‌ಗಳು 600 ಕೆಜಿ ತಕದ 4.71 ಮೀಟರ್ ಉದ್ದದ, ಬಹುತೇಕ ಒಂದು ಫ್ಯಾಮಿಲಿ ಕಾರಿನ ಗಾತ್ರದ, ಭಾರೀ ದೊಡ್ಡ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಈ ಮೊಸಳೆ ಸುಮಾರು 60 ವರ್ಷಪ್ರಾಯದ್ದೆಂದು ಅಂದಾಜಿಸಲಾಗಿದೆ.
ಆಸ್ಟ್ರೇಲಿಯದ ಅರಣ್ಯ ರೇಂಜರ್‌ಗಳು ಈ ವರ್ಷ ಕ್ಯಾಥರೀನ್ ನದಿಯಲ್ಲಿ 3.92 ಮೀಟರ್ ಮತ್ತು 3.97 ಮೀಟರ್ ಉದ್ದದ ಎರಡು ಭಾರೀ ಗಾತ್ರದ ಮೊಸಳೆಯನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸೆರೆ ಹಿಡಿದಿದ್ದರು. ಈ ವರ್ಷ ಈ ತನಕ ಸುಮಾರ 188 ಉಪ್ಪು ನೀರಿನ ಮೊಸಳೆಗಳನ್ನು ಸೆರೆ ಹಿಡಿಯಲಾಗಿದೆ ಎಂದು ಉತ್ತರ ಆಸ್ಟ್ರೇಲಿಯ ಸರಕಾರ ಹೇಳಿದೆ.
ಇದೀಗ ಸೆರೆ ಹಿಡಿಯಲಾಗಿರುವ ಈ ವರೆಗಿನ ಅತೀ ದೊಡ್ಡ ಮೊಸಳೆಯನು 2010ರಲ್ಲಿ ಪತ್ತೆ ಹಚ್ಚಲಾಗಿತ್ತು. ಅದು ಸ್ಥಳೀಯ ಬೋಟ್ ಜಾರು ವೇದಿಕೆಯತ್ತ ತೆವಳಿಕೊಂಡು ಬಂದದಿತ್ತು. ಇದನ್ನು ಸೆರೆ ಹಿಡಿಯಲು ಎರಡು ವಾರಗಳ ಹಿಂದೆ ಪ್ಲಾನ್ ಮಾಡಲಾಗಿತ್ತು. ಆಗಲೇ ಒಟ್ಟು ಮೂರು ಮೊಸಳೆಗಳನ್ನು ವೈಮಾನಿಕವಾಗಿ ಗುರುತಿಸಲಾಗಿತ್ತು.
ಸೆರೆಹಿಡಿಯಲಾಗಿರುವ ಬೃಹತ್ ಮೊಸಳೆಯನ್ನು ಈ ತನಕ ಉಪದ್ರಕಾರಿ ಮೊಸಳೆ ಎಂದು ಗುರುತಿಸದಿರುವ ಕಾರಣ ಇದನ್ನು ಕ್ಯಾಥರೀನ್ ಪ್ರಾಂತ್ಯದ ಹೊಲಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.