ಉಗ್ರ ದಾಳಿ ನಡೆದ 6 ತಿಂಗಳ ಬಳಿಕ ಹೊಸ ತಾಣದಲ್ಲಿ ಢಾಕಾ ಕೆಫೆ ಆರಂಭ
Team Udayavani, Jan 11, 2017, 3:57 PM IST
ಢಾಕಾ : ಕಳೆದ ವರ್ಷ ಓರ್ವ ಭಾರತೀಯ ಹುಡುಗಿ ಸೇರಿದಂತೆ 22 ಮಂದಿ ವಿದೇಶೀಯರನ್ನು ಇಸ್ಲಾಮಿಕ್ ಉಗ್ರರು ಹತ್ಯೆಗೈದ ಬಾಂಗ್ಲಾದೇಶದ ರಾಜಧಾನಿಯಲ್ಲಿನ ಪ್ರಖ್ಯಾತ ಢಾಕಾ ಕೆಫೆ ಆರು ತಿಂಗಳ ಬಳಿಕ ಇದೀಗ ಪುನರಾರಂಭಗೊಂಡಿದೆ; ಆದರೆ ಹೊಸ ತಾಣದಲ್ಲಿ ಮತ್ತು ಇನ್ನಷ್ಟು ಭದ್ರತೆಗಳೊಂದಿಗೆ !
ವಿದೇಶೀಯರ ಅಚ್ಚುಮೆಚ್ಚಿನ ತಾಣವಾಗಿದ್ದ ಹೋಲಿ ಆರ್ಟಿಸಾನ್ ಬೇಕರಿ, ಢಾಕಾದಲ್ಲಿನ ಗುಲ್‌ಶನ್ ಅವೆನ್ಯೂದಲ್ಲಿರುವ ರ್‍ಯಾಂಗ್ ಆರ್‌ಕೇಡ್‌ನ ಮೊದಲ ಮಹಡಿಯಲ್ಲಿನ 2,000 ಚದರ ಅಡಿ ಸ್ಥಳದಲ್ಲಿ ವ್ಯವಹಾರ ನಿರತವಾಗಿತ್ತು. ಅದನ್ನೀಗ ಈ ಸ್ಥಳದಿಂದ ಕೆಲವೇ ಬ್ಲಾಕ್‌ಗಳ ಆಚೆಗೆ, ಆದರೆ ರಾಜತಾಂತ್ರಿಕ ಜಿಲ್ಲೆಯ ಹೃದಯಭಾಗದ ಕಟ್ಟಡಕ್ಕೆ ಹೆಚ್ಚಿನ ಭದ್ರತೆಗಳೊಂದಿಗೆ ಸ್ಥಳಾಂತರಿಸಲಾಗಿದೆ ಎಂದು ಬಿಡಿನ್ಯೂಸ್24 ವರದಿ ಮಾಡಿದೆ.
ನಿನ್ನೆ ಮಂಗಳವಾರವೇ ಪುನರಾರಂಭಗೊಂಡಿದ್ದ ಈ ಕೆಫೆ ಒಂದು ಬಾರಿಗೆ 50 ಗ್ರಾಹಕರ ಸೇವೆಯನ್ನು ಕೈಗೊಳ್ಳಬಹುದಾಗಿದೆ. ಈಚೆಗಷ್ಟೇ ಢಾಕಾ ಕೆಫೆಯ ಆಡಳಿತ ವರ್ಗವು ತನ್ನ ಫೇಸ್ ಬುಕ್‌ನಲ್ಲಿ, ಕೆಫೆಯನ್ನು ಹೊಸ ತಾಣದಲ್ಲಿ ಶೀಘ್ರವೇ ಪುನರಾರಂಭಿಸಲಾಗುವುದು ಎಂದು ಹೇಳಿಕೊಂಡಿತ್ತು.
ಕಳೆದ ವರ್ಷ ಜುಲೈ ತಿಂಗಳಲ್ಲಿ ಇಸ್ಲಾಮಿಕ್ ಉಗ್ರರು ಢಾಕಾ ಕೆಫೆಗೆ ನುಗ್ಗಿ ಅಲ್ಲಿದ್ದ ಹೆಚ್ಚಿನ ವಿದೇಶೀಯರನ್ನು ಒತ್ತೆಯಾಳುಗಳನ್ನಾಗಿ ಇರಿಸಕೊಂಡು 22 ಮಂದಿಯ ಹತ್ಯೆಗೈದಿದ್ದರು. ಇವರಲ್ಲಿ 19ರ ಹರೆಯದ ಭಾರತೀಯ ಹುಡುಗಿ ತಾರಿಷಿ ಜೈನ್ ಕೂಡ ಸೇರಿದ್ದಳು. ಹತರಾದರ ವಿದೇಶೀಯರಲ್ಲಿ ಹೆಚ್ಚಿನವರು ಇಟಲಿ, ಜಪಾನ್, ಅಮೆರಿಕನ್ ಪ್ರಜೆಗಳಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.