ಕೋವಿಡ್ 19 : ಒಂದು ವಾರ ಬಾಂಗ್ಲಾದೇಶ ಲಾಕ್..!
Team Udayavani, Apr 3, 2021, 1:47 PM IST
ಢಾಕಾ :ಕೋವಿಡ್ ರೂಪಾಂತರಿ ಅಲೆ ಹೆಚ್ಚಾಗಿರುವ ಕಾರಣ ಬಾಂಗ್ಲಾದೇಶದಾದ್ಯಂತ ಒಂದು ವಾರ ಕಠಿಣ ಲಾಕ್ಡೌನ್ ಘೋಷಿಸಲಾಗಿದೆ.
ಬರುವ ಸೋಮವಾರದಿಂದ ಒಂದು ವಾರದ ತನಕ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿದೆ.
ಲಾಕ್ಡೌನ್ ಘೋಷಣೆ ಮಾಡಿದ ರಸ್ತೆ ಸಾರಿಗೆ ಮತ್ತು ಸೇತುವೆಗಳ ಸಚಿವ ಒಬೈದುಲ್ ಕ್ವಾಡರ್, ದೆಶದಾದ್ಯಂತ ಲಾಕ್ಡೌನ್ ಇದ್ದರೂ ಕೂಡ ಕಾರ್ಖಾನೆಗಳು ಮತ್ತು ಕೈಗಾರಿಕಾ ಪ್ರದೇಶಗಳು ಸೀಮಿತ ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ಧಾರೆ.
ಓದಿ : ‘ಕಬ್ಜ’ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ರಾಡ್ ಏಟು
ಇನ್ನು, ಸಾರ್ವಜನಿಕ ಆಡಳಿತ ಸಚಿವ ಫರ್ಹಾದ್ ಹುಸೇನ್, ಕೈಗಾರಿಕ ಪ್ರದೇಶಗಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಸೀಮಿತ ಕಾರ್ಮಿಕರು ಬೇರೆ ಬೇರೆ ಪಾಳಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ಮಾರ್ಗ ಸೂಚಿಯೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಹಾಗೂ ಯಾವುದೇ ತುರ್ತು ಸೇವೆಗಳಿಗೆ ನಿರ್ಬಂಧಗಳಿಲ್ಲ ಎಂದು ಕೂಡ ತಿಳಿಸಿದ್ದಾರೆ.
ದೇಶದಲ್ಲಿ ಕೆಲವು ದಿನಗಳಿಂದ ಕೋವಿಡ್ ರೂಪಾಂತರಿ ಅಲೆಯ ಕಾರಣದಿಂದ ನಿರಂತರವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಇನ್ನು, ನಿನ್ನೆ ಒಂದೇ ದಿನ ಬಾಂಗ್ಲಾದೇಶದಲ್ಲಿ 6,830 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವುದರ ಮೂಲಕ ದೇಶದಲ್ಲಿನ ಒಟ್ಟು ಕೋವಿಡ್ ನ ಸಂಖ್ಯೆ 6,24,594ಕ್ಕೆ ಏರಿಕೆಯಾಗಿದ್ದು, ಮಾತ್ರವಲ್ಲದೇ, 50 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಸೋಂಕಿನ ಬಗ್ಗೆ ಅಭಿಪ್ರಾಯ ತಿಳಿಸಿದ ತಜ್ಞರು, ಸೋಂಕಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಸೋಂಕು ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಓದಿ : ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಸರಣಿ ದರೋಡೆ ಪ್ರಕರಣ: 9 ಮಂದಿ ಆರೋಪಿಗಳು ಪೊಲೀಸರ ಬಲೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.