ಬಾಂಗ್ಲಾದೇಶ: ಗಾರ್ಮೆಂಟ್‌ ಕ್ಷೇತ್ರಕ್ಕೆ ಬರಸಿಡಿಲು


Team Udayavani, Apr 4, 2020, 2:30 PM IST

ಬಾಂಗ್ಲಾದೇಶ: ಗಾರ್ಮೆಂಟ್‌ ಕ್ಷೇತ್ರಕ್ಕೆ ಬರಸಿಡಿಲು

ಬಾಂಗ್ಲಾದೇಶ: ಕೋವಿಡ್- 19ದಿಂದ ವಿಶ್ವಾದ್ಯಂತ ಲಕ್ಷಾಂತರ ಕೈಗಾರಿಕೆ, ಉದ್ಯಮಗಳು ಮುಚ್ಚಿದ್ದು, ನಿರುದ್ಯೋಗ ಹೆಚ್ಚುತ್ತಿದೆ. ಇಂಥದ್ದೇ ವರದಿ ಈಗ ಬಾಂಗ್ಲಾದೇಶದಿಂದ. ಬಾಂಗ್ಲಾದೇಶದ ಗಾರ್ಮೆಂಟ್‌ ಕ್ಷೇತ್ರಕ್ಕೂ ಈಗ ಬಿಸಿ ತಾಗಿದ್ದು, ಹಲವು ಕಾರ್ಖಾನೆಗಳು ತಮ್ಮ ಕಾರ್ಮಿಕರನ್ನು ತೆಗೆದು ಹಾಕಿವೆ.

ಕಾರ್ಮಿಕರ ಹಕ್ಕುಗಳ ಒಕ್ಕೂಟ (ಡಬ್ಲ್ಯೂಆರ್‌ಸಿ) ಮತ್ತು ಪೆನ್‌ ಸ್ಟೇಟ್‌ ವಿಶ್ವ ವಿದ್ಯಾಲಯ ಜಂಟಿಯಾಗಿ ಸಂಶೋಧನೆ ನಡೆಸಿದ್ದು, ಸುಮಾರು 300 ಉಡುಪು ಪೂರೈಕೆದಾರರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಕೋವಿಡ್- 19 ಸೃಷ್ಟಿಸಿರುವ ಬಿಕ್ಕಟ್ಟಿಗೆ ಬೆದರಿರುವ ಪಾಶ್ಚಿಮಾತ್ಯ ಬ್ರ್ಯಾಂಡ್‌ ಉಡುಪುಗಳ ಚಿಲ್ಲರೆ ವ್ಯಾಪಾರಿಗಳು ತಮ್ಮ ಖರೀದಿ ಆದೇಶವನ್ನು ವಾಪಸು ಪಡೆಯುತ್ತಿದ್ದಾರೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದೆಗೆಟ್ಟಿದೆ ಎಂದರೆ ಬೇಡಿಕೆ ಆಧರಿಸಿ ಉತ್ಪನ್ನಕಾರರು ಖರೀದಿಸಿದ ಕಚ್ಚಾವಸ್ತುಗಳ ವೆಚ್ಚವನ್ನು ಭರಿಸಲೂ ಖರೀದಿದಾರರು ಮುಂದಾಗುತ್ತಿಲ್ಲ.

2.4 ಶತಕೋಟಿ ಮೊತ್ತದ ಆರ್ಡರ್‌ ರದ್ದು
ಒಂದು ಅಂದಾಜಿನ ಪ್ರಕಾರ ವಿವಿಧ ಬ್ರ್ಯಾಂಡೆಡ್‌ ಕಂಪೆನಿಗಳು 2.4 ಶತಕೋಟಿ ಮೊತ್ತದ ಬಟ್ಟೆಗಳ ಆರ್ಡರ್‌ ಅನ್ನು ರದ್ದು ಮಾಡಿವೆ. ನಮ್ಮ ಚಿಲ್ಲರೆ ವ್ಯಾಪಾರಿಗಳಾದ ಪ್ರಿಮಾರ್ಕ್‌ ಮತ್ತು ಎಡಿನºರ್ಗ್‌ 1.4 ಶತಕೋಟಿ ಮೊತ್ತದ ಸರಕನ್ನು ರದ್ದು ಮಾಡಿದ್ದು, ಅವರ ನಷ್ಟ ವನ್ನು ಸರಿದೂಗಿಸಿಕೊಳ್ಳಲು ಹೆಚ್ಚುವರಿ ಅಂದರೆ ಸುಮಾರು 1 ಶತಕೋಟಿ ಮೊತ್ತದ ಸರಕನ್ನು ಸದ್ಯ ಬೇಡ ಎಂದಿವೆ. ಆದರೆ ಈಗಾಗಲೇ ನಾವು 1.3 ಶತ ‌ಕೋಟಿಯಷ್ಟು ಉಡುಪುಗಳನ್ನು ತಯಾರಿಸಿದ್ದು, ಅರ್ಧದಷ್ಟು ಉತ್ಪಾದನೆ ಪೂರ್ಣಗೊಂಡಿದೆ ಎಂದು ಬಾಂಗ್ಲಾದೇಶ ಮತ್ತು ಗಾರ್ಮೆಂಟ್‌ ರಫ್ತುದಾರರ ಒಕ್ಕೂಟ (ಬಿಜಿಎಂಇಎ)ಹೇಳಿದೆ.

ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮನೆಗೆ
ಬಹುತೇಕ ರಫ್ತುದಾರರು ತಮ್ಮ ಆರ್ಡರ್‌ಗಳನ್ನು ರದ್ದುಗೊಳಿಸಿದ ಕಾರಣ ಕಾರ್ಖಾನೆಗಳು ಕಾರ್ಯಾಚರಣೆ ನಿಲ್ಲಿಸಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 40 ಲಕ್ಷ ತಲುಪಬಹುದು. ಉತ್ಪನ್ನವೂ ಕಾರ್ಖಾನೆಯಲ್ಲೇ ಉಳಿದಿರುವುದರಿಂದ ವೇತನವಿಲ್ಲದೆ ತಮ್ಮ ಕೆಲಸಗಾರರನ್ನು ಮನೆಗೆ ಕಳುಹಿಸಿವೆ ಎಂಬ ಮಾಹಿತಿಯನ್ನು ಬಿಜಿಎಂಇಎ ಹಂಚಿಕೊಂಡಿದೆ.

2ಸಾವಿರ ಕಾರ್ಮಿಕಾರಿಗೆ ಏನು ಹೇಳಲಿ ?
ಪರಿಸ್ಥಿತಿಯ ತೀವ್ರತೆಯನ್ನು ತೆರೆದಿಟ್ಟಿರುವ ಡೆನಿಮ್‌ ಎಕ್ಸ್‌ಪರ್ಟ್‌ನ ವ್ಯವಸ್ಥಾಪಕ ನಿರ್ದೇ ಶಕ ಮೊಸ್ತಾಫಿಜ್‌ ಉದ್ದೀನ್‌, ನಾವು ಮುಂಗಡ ವಾಗಿಯೇ ಪ್ರತಿಯೊಂದು ಕಚ್ಚಾವಸ್ತುಗಳ ಮೊತ್ತವನ್ನು ಪಾವತಿಸಬೇಕು. ಆದರೆ ಸರಕು ಸಾಗಣೆಯಾಗದೇ ಹಣ ಕೈಸೇರುವುದಿಲ್ಲ, ಕನಿಷ್ಠ ಮೊತ್ತವಿರದ ಕಾರಣ ಕೂಡ ಬ್ಯಾಂಕುಗಳು ನನ್ನ ವ್ಯವಹಾರಿಕ ಖಾತೆಗಳ ಮೇಲೆ ನಿರ್ಬಂಧ ಹೇರುತ್ತಿವೆ. ನನ್ನ ಬಳಿ 2ಸಾವಿರ ಕಾರ್ಮಿಕರು ಕೆಲಸಕ್ಕೆ ಇದ್ದಾರೆ. ಅವರನ್ನು ನಂಬಿಕೊಂಡು ಹತ್ತು ಸಾವಿರ ಕುಟುಂಬ ಜನರಿದ್ದಾರೆ. ಅವರಿಗೆ ನಾನು ಏನು ಹೇಳಲಿ, ವೇತನ ಹೇಗೆ ನೀಡಲಿ ಎಂದು ಪ್ರಶ್ನಿಸುತ್ತಾರೆ.

ಅನ್ಯಾಯವನ್ನು ಪ್ರಶ್ನಿಸುವಂತಿಲ್ಲ
ಉಡುಪು ಪೂರೈಕೆ ಸರಪಳಿ ಇದ್ದಾಗ ಪೂರೈಕೆದಾರರು ಪ್ರತಿ ಹಂತದ ಹೊಣೆಗಾರಿಕೆ ಹೊರಬೇಕು. ಆರ್ಡರ್‌ ಮಾಡಿದ ಉತ್ಪನ್ನವನ್ನು ಅಸ್ತಿತ್ವದಲ್ಲಿರುವ ಆದೇಶಗಳನ್ನು ರದ್ದುಗೊಳಿಸಿ ದ್ದರೂ, ನಾವು ಎದುರು ಮಾತನಾಡುವ ಅಥವಾ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವಂತಿಲ್ಲ. ರದ್ದುಗೊಳಿಸಿದರೂ ಅಥವಾ ರಫ್ತುನ್ನು ಮುಂದೂಡಿದರೂ ಎಲ್ಲವನ್ನು ಸಹಿಸಿಕೊಂಡು ಹೋಗಬೇಕು ಅಂತಹ ಪರಿಸ್ಥಿತಿ ಪೂರೈಕೆದಾರರದ್ದು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿವೆ ಕಾರ್ಖಾನೆಗಳು.

ಟಾಪ್ ನ್ಯೂಸ್

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.