Bangladesh Crisis: ಪ್ರಧಾನಿ ನಿವಾಸದಿಂದ ಸಿಕ್ಕಿದ್ದೆಲ್ಲ ದೋಚಿದ ಪ್ರತಿಭಟನಾಕಾರರು!
ಹಸೀನಾರ ನಿವಾಸದಲ್ಲಿನ ಬಟ್ಟೆ-ಬರೆ, ಆಭರಣ ಎಲ್ಲವನ್ನೂ ಹೊತ್ತೊಯ್ದ ಜನರ ಗುಂಪು- ವಿಡಿಯೋ ನೋಡಿ
Team Udayavani, Aug 6, 2024, 7:20 AM IST
ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿದ್ದಂತೆ, ಇತ್ತ ಢಾಕಾದಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ರಧಾನ ಮಂತ್ರಿ ಅರಮನೆಗೆ ಮುತ್ತಿಗೆ ಹಾಕಿದ್ದಾರೆ.
ಹಸೀನಾ ಅವರ ಅಧಿಕೃತ ನಿವಾಸ “ಗಣಬಧನ್’ ಒಳ ಹೊಕ್ಕ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ದೋಚುತ್ತಿರುವುದು, ರೆಫ್ರಿಜರೇಟರ್‌ನಲ್ಲಿ ಇಡಲಾಗಿದ್ದ ಮೀನು, ಕೋಳಿ, ತರಕಾರಿಗಳನ್ನು ತಿನ್ನುತ್ತಿರುವುದು, ಅಲ್ಲಿದ್ದ ಪೀಠೊಪಕರಣಗಳ ಮೇಲೆ ಹತ್ತಿ ಕುಣಿದಾಡುತ್ತಿರುವುದು, ಬೆಡ್ ರೂಂನಲ್ಲಿನ ಮಂಚದ ಮೇಲೆ ಮಲಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು, ಕೆಲ ವರಂತೂ ತಮಗೆ ಸಿಕ್ಕ ವಸ್ತುಗಳನ್ನೆಲ್ಲ ಬಾಚಿಕೊಂಡು ಹೊತ್ತೂಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
They looted everything at Sheikh Hasina’s residence. https://t.co/SRbl0JUzK1 pic.twitter.com/utrYIuJEQg
— Royal FM 94.3 Kigali (@RoyalFMRwanda) August 5, 2024
ಹಸೀನಾ ಸೀರೆ ಉಟ್ಟೂ, ಕೊಂಡೂ ಹೋದ!
ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆಗಳನ್ನೂ ದೋಚಿ ಕೊಂಡೊಯ್ದಿದ್ದಾರೆ. ಒಬ್ಬ ವ್ಯಕ್ತಿ ಸೂಟ್‌ಕೇಸ್ ತುಂಬಾ ಸೀರೆಗಳನ್ನು ತುಂಬಿಕೊಂಡು, “ನನ್ನ ಪತ್ನಿಯನ್ನು ಪಿಎಂ ಮಾಡುತ್ತೇನೆ’ ಎಂದು ಹೇಳಿಕೊಳ್ಳುತ್ತಾ ಹೋಗುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಮತ್ತೋರ್ವ ಯುವಕ ಹಸೀನಾ ಅವರ ಸೀರೆಯನ್ನೇ ಉಟ್ಟು, ಬಕೆಟ್‌ವೊಂದರಲ್ಲಿ ಬೇರೆ ಬಟ್ಟೆಗಳನ್ನೂ ತುಂಬಿಕೊಂಡು ಹೋಗುತ್ತಿದ್ದಾರೆ. ಈ ಫೋಟೋ ಕೂಡ ವೈರಲ್ ಆಗಿದೆ. ಹಸೀನಾರ ನಿವಾಸದಲ್ಲಿನ ಬಟ್ಟೆ-ಬರೆ, ಆಭರಣ ಎಲ್ಲವನ್ನೂ ಪ್ರತಿಭಟನಾಕಾರರು ದೋಚಿರುವ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.