4 ದಶಕದ ಹಿಂದಿನ ಕ್ರಾಂತಿ!ಮುಜಿಬುರ್ ಹತ್ಯಾ ದೋಷಿ ನಿವೃತ್ತ ಸೇನಾ ಕ್ಯಾಪ್ಟನ್ ಗೆ ಮರಣದಂಡನೆ

1998ರಲ್ಲಿ ಅಬ್ದುಲ್ ಮಜೀದ್ ಸೇರಿದಂತೆ 12 ಮಂದಿ ಇತರ ಸೇನಾ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಿತ್ತು.

Team Udayavani, Apr 12, 2020, 11:07 AM IST

ಮುಜಿಬುರ್ ಹತ್ಯಾ ದೋಷಿ ನಿವೃತ್ತ ಸೇನಾ ಕ್ಯಾಪ್ಟನ್ ಗೆ ಮರಣದಂಡನೆ

Sheikh Mujibur Rahman

ಢಾಕಾ:ಬಾಂಗ್ಲಾದೇಶದ ಸಂಸ್ಥಾಪಕ ಮುಖಂಡ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದ ಪ್ರಕರಣ ನಡೆದು ನಾಲ್ಕು ದಶಕಗಳ ಹಿಂದೆ ಅಪರಾಧಿಯಾಗಿದ್ದ ಮಿಲಿಟರಿ ಕ್ಯಾಪ್ಟನ್ ನನ್ನು ಬಾಂಗ್ಲಾದೇಶ ಗಲ್ಲಿಗೇರಿಸಿರುವುದಾಗಿ ಭಾನುವಾರ ಬಾಂಗ್ಲಾ ಸಚಿವರು ತಿಳಿಸಿದ್ದಾರೆ.

ಶೇಖ್ ಮುಜಿಬುರ್ ರೆಹಮಾನ್ ಅವರು ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದುಕೊಂಡ ನಾಲ್ಕು ವರ್ಷಗಳ ನಂತರ 1975ರ ಆಗಸ್ಟ್ 15ರಂದು ಕ್ಷಿಪ್ರಕ್ರಾಂತಿಯ ಸೇನಾ ದಂಗೆಯಲ್ಲಿ ಮುಜಿಬುರ್ ರಹಮಾನ್ ಅವರನ್ನು ಹತ್ಯೆಗೈಯಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆದು 1998ರಲ್ಲಿ ಅಬ್ದುಲ್ ಮಜೀದ್ ಸೇರಿದಂತೆ 12 ಮಂದಿ ಇತರ ಸೇನಾ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಿತ್ತು. ಆದರೆ ಅಬ್ದುಲ್ ಮಜೀದ್ ವಿಚಾರಣೆ ನಡೆಯುವ ಮುನ್ನ ಭಾರತಕ್ಕೆ ಪರಾರಿಯಾಗಿದ್ದ. ಮಜೀದ್ ನನ್ನು ತಮಗೊಪ್ಪಿಸುವಂತೆ ಬಾಂಗ್ಲಾದೇಶ ಮನವಿ ಮಾಡಿಕೊಂಡಿತ್ತು.

2009ರಲ್ಲಿ ಬಾಂಗ್ಲಾದೇಶ ಸುಪ್ರೀಂಕೋರ್ಟ್ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿತ್ತು. ಕೆಲವು ತಿಂಗಳ ಬಳಿಕ ಐವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿತ್ತು.

ಮಂಗಳವಾರ ಭಯೋತ್ಪಾದಕ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಮುಂಜಾನೆ ಢಾಕಾದಲ್ಲಿ ರಿಕ್ಷಾದಲ್ಲಿ ಆಗಮಿಸುತ್ತಿದ್ದ ಮಜೀದ್ ನನ್ನು ಬಂಧಿಸಿದ್ದರು. ಮಜೀದ್ ನ ಮರಣದಂಡನೆ ಶಿಕ್ಷೆಯ ಕ್ಷಮಾದಾನ ಅರ್ಜಿಯನ್ನು ಬಾಂಗ್ಲಾ ಅಧ್ಯಕ್ಷ ತಿರಸ್ಕರಿಸಿದ್ದರು ಎಂದು ವರದಿ ತಿಳಿಸಿದೆ.

1996ರಲ್ಲಿ ಮಜೀದ್ ಭಾರತಕ್ಕೆ ಪರಾರಿಯಾಗಿದ್ದ ಎಂದು ಶಂಕಿಸಲಾಗಿತ್ತು. ಮಜೀದ್ ಕಳೆದ ತಿಂಗಳು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿತ್ತು ಎಂದು ವರದಿ ವಿವರಿಸಿದೆ.

ಅಬ್ದುಲ್ ಮಜೀದ್ ನನ್ನು ಸ್ಥಳೀಯ ಸಮಯ 12.01ಕ್ಕೆ ಗಲ್ಲಿಗೇರಿಸಲಾಗಿತ್ತು. ಢಾಕಾದ ಹೊರವಲಯದ ಕೇರಾನ್ ಗಂಜ್ ನಲ್ಲಿರುವ ಢಾಕಾ ಸೆಂಟ್ರಲ್ ಜೈಲ್ ನಲ್ಲಿ ಗಲ್ಲಿಗೇರಿಸಲಾಗಿದ್ದು, 12.15ಕ್ಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಕಾನೂನು ಸಚಿವ ಅನಿಸುಲ್ ಹಖ್ ಪಿಟಿಐಗೆ ತಿಳಿಸಿದ್ದಾರೆ.

ಜೈಲಿನ ಮುಂಭಾಗ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸೆಂಟ್ರಲ್ ಜೈಲಿನ ಇನ್ಸ್ ಪೆಕ್ಟರ್ ಜನರಲ್ ಎಕೆಎಂ ಮೋಸ್ತಾಫಾ ಕಮಲ್ ಪಾಶಾ, ಮಜೀದ್ ನನ್ನು ಗಲ್ಲಿಗೇರಿಸಿದ್ದು, ಇದೀಗ ಶವವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಟಾಪ್ ನ್ಯೂಸ್

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

1-ramama

China; ಬೌದ್ಧ ಪಠ್ಯಗಳಿಂದ ರಾಮಾಯಣ ನೆಲೆ: ಸಂಶೋಧನೆ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

1-spider

UK: ಅಂಗೈ ಅಗಲದ ಫೆನ್‌ ರಾಫ್ಟ್ ಜೇಡಗಳ ಸಂಖ್ಯೆ ಹೆಚ್ಚಳ

1-sarco

Switzerland; ಅಕ್ರಮವಾಗಿ ಆತ್ಮಹ*ತ್ಯಾ ಕೋಶ ಬಳಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.